ಶನಿವಾರ, ಜೂನ್ 12, 2021
23 °C

ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಜಿಲ್ಲಾ ಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದೇ 18ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ.ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಹಾಗೂ ತರೀಕೆರೆ ವಿಧಾನಸಭಾ ಕ್ಷೇತ್ರ ಗಳಲ್ಲಿ ಈ ಹಿಂದಿದ್ದ 861 ಮತ್ತು ಹೆಚ್ಚುವರಿ 38 ಮತಗಟ್ಟೆ ಸೇರಿದಂತೆ 899 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ.ರಂಗಸ್ವಾಮಿ ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.ಜಿಲ್ಲೆಯಲ್ಲಿ ಒಟ್ಟು 6,22,096 ಮತದಾರ ರಿದ್ದಾರೆ. ಇದರಲ್ಲಿ 3,15,058 ಪುರುಷರು ಮತ್ತು 3,07,038 ಮಹಿಳೆಯರು.ಶೃಂಗೇರಿ ಕ್ಷೇತ್ರದಲ್ಲಿ 70041 ಪುರುಷರು ಮತ್ತು 69825 ಮಹಿಳೆಯರು, ಮೂಡಿಗೆರೆ ಯಲ್ಲಿ 71811 ಪುರುಷ ಮತ್ತು 71807 ಮಹಿಳೆ ಯರು, ಚಿಕ್ಕಮಗಳೂರು-93225 ಪುರುಷರು ಮತ್ತು 91357 ಮಹಿಳೆಯರು, ತರೀಕೆರೆ- 79981 ಪುರುಷ ಮತ್ತು 74049 ಮಹಿಳಾ ಮತದಾರರು ಇದ್ದಾರೆ ಎಂದು ವಿವರಿಸಿದರು.ಶೃಂಗೇರಿ ಕ್ಷೇತ್ರದಲ್ಲಿ 249 ಮತಗಟ್ಟೆಗಳಲ್ಲಿ 96 ಸೂಕ್ಷ್ಮ, 55 ಅತಿಸೂಕ್ಷ್ಮ ಹಾಗೂ 37 ನಕ್ಸಲ್‌ಪೀಡಿತ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಮೂಡಿಗೆರೆ ಕ್ಷೇತ್ರದ 207 ಮತಗಟ್ಟೆಗಳಲ್ಲಿ 91 ಸೂಕ್ಷ್ಮ, 25 ಅತಿಸೂಕ್ಷ್ಮ ಹಾಗೂ 9 ನಕ್ಸಲ್ ಪೀಡಿತ ಮತಗಟ್ಟೆಗಳನ್ನು ಗುರುತಿಸಲಾಗಿದೆ.ಚಿಕ್ಕಮಗಳೂರು ಕ್ಷೇತ್ರದ 232 ಮತಗಟ್ಟೆಗಳಲ್ಲಿ 64 ಸೂಕ್ಷ್ಮ, 34 ಅತಿ ಸೂಕ್ಷ್ಮ, ತರೀಕೆರೆ ಕ್ಷೇತ್ರದ 211 ಮತಗಟ್ಟೆಗಳಲ್ಲಿ 129 ಸೂಕ್ಷ್ಮ ಮತ್ತು 48 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ವಿವರಿಸಿದರು. ಚುನಾವಣಾ ಪ್ರಕ್ರಿಯೆಗೆ 997 ಪ್ರಿಸೈಡಿಂಗ್ ಅಧಿಕಾರಿಗಳು, 997 ಸಹಾ ಯಕ ಪ್ರಿಸೈಡಿಂಗ್ ಅಧಿಕಾರಿಗಳು ಹಾಗೂ 1992 ಮತಗಟ್ಟೆ ಅಧಿಕಾರಿಗಳು ಸೇರಿದಂತೆ 3986 ಸಿಬ್ಬಂದಿ ನಿಯೋಜಿಸಲಾಗಿದೆ. ಮತ ದಾನಕ್ಕೆ 1079 ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸ ಲಾಗುತ್ತಿದೆ ಎಂದು ತಿಳಿಸಿದರು.ನೀತಿಸಂಹಿತೆ ಉಲ್ಲಂಘನೆ:  ಜಿಲ್ಲೆಯಲ್ಲಿ ಈವರೆಗೆ 9 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖ ಲಾಗಿದ್ದು, ಇದರಲ್ಲಿ ಮೂರು ಪ್ರಕರಣಗಳನ್ನು ಕೈಬಿಡಲಾಗಿದೆ. ಉಳಿದ ಆರು ಪ್ರಕರಣಗಳ ಬಗ್ಗೆ ವರದಿ ಬರಬೇಕಿದೆ. ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಪೂರ್ವಾನುಮತಿ ಪಡೆಯದೆ ಸಭೆ ನಡೆಸಿರುವುದಕ್ಕೆ ಜೆಡಿಎಸ್ ಪಕ್ಷದ ಮೇಲೆ ಬಸವನ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಚಾರದಲ್ಲಿ ಐದು ವಾಹನಗಳನ್ನು ಅನುಮತಿ ಪಡೆಯದೆ ಬಳಸಿರುವುದಕ್ಕೆ ಜೆಡಿಎಸ್ ಪಕ್ಷದ ವಿರುದ್ಧ ತರೀಕೆರೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಕಳೆದ 13ರಂದು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿರುವುದಕ್ಕೆ ಜೆಡಿಎಸ್‌ನ ಪೂಜಾಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದೆ.  ಕುಡ್ಲೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮತದಾರರಿಗೆ ಉಪಾ ಹಾರ ನೀಡಿರುವುದಕ್ಕೆ ಬಿಜೆಪಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.