ಭಾನುವಾರ ಬೀದರ್‌ನಲ್ಲಿ ‘ಬೀದರ್ ಉತ್ಸವ’. ಹಿನ್ನೆಲೆ ಗಾಯಕ ಶಾನ್ ಅವರ ಸಂಗೀತ ರಸಮಂಜರಿ ಇದರ ಪ್ರಧಾನ ಆಕರ್ಷಣೆ. ಅದಕ್ಕಿಂತಲೂ ಇನ್ನೊಂದು ವಿಶೇಷವೂ ಇಲ್ಲಿದೆ. ಶಾನ್ ಜತೆ ಮೊದಲ ಬಾರಿಗೆ ಬೆಂಗಳೂರಿನ ಮೂವರು ಉತ್ಸಾಹಿ ಗಾಯಕ- ಗಾಯಕಿಯರು ವೇದಿಕೆ ಏರಿ ದನಿಗೂಡಿಸಲಿದ್ದಾರೆ.
ದೇಸಿತಾರಾ.ಕಾಮ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಗೆದ್ದ ಶಂಕರ್, ಶೀಲೂ ಮೆಹ್ತಾ ಮತ್ತು ಶಶಿಕುಮಾರ್ ಅವರೇ ಈ ಅದೃಷ್ಟಶಾಲಿಗಳು. ಅವರಿಗೂ ಇದು ರೋಮಾಂಚನ ಉಂಟು ಮಾಡಿದೆ.
ಕೇರಳದ ಕಲಾವಿದರ ಕುಟುಂಬದಲ್ಲಿ ಬೆಳೆದ ಶಂಕರ್ ಬಾಲ್ಯದಲ್ಲಿಯೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 8 ವರ್ಷದಿಂದ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಸಂಗೀತದ ಮೇಲಿನ ವ್ಯಾಮೋಹದಿಂದ ವೃತ್ತಿ ಬಿಟ್ಟು ಹಾಡುವುದನ್ನೇ ವೃತ್ತಿ- ಪ್ರವೃತ್ತಿ ಮಾಡಿಕೊಂಡಿದ್ದಾರೆ.
ಪುಣೆ ಮೂಲದ ಶೀಲು ಮೆಹ್ತಾ 21 ವರ್ಷದಿಂದ ಬೆಂಗಳೂರು ನಿವಾಸಿ. ಮದುವೆ ನಂತರ ಮನೆಯಲ್ಲಿಯೇ ಮಕ್ಕಳಿಗೆ ಸಂಗೀತ ಪಾಠ ಕಲಿಸುತ್ತಿದ್ದಾರೆ.
ಮೂಲತಃ ಶಿವಮೊಗ್ಗದ ಶಶಿಕುಮಾರ್ ವೃತ್ತಿಯಲ್ಲಿ ಎಚ್.ಆರ್. ಕನ್ಸಲ್ಟೆನ್ಸಿ ನಡೆಸುತ್ತಿದ್ದಾರೆ. ಇವರ ತಂದೆ ಗಂಗಾಧರ್ ಹಾರ್ಮೋನಿಯಂ ಕಲಾವಿದ. ತಾಯಿ ಕಮಲಾಬಾಯಿ ಕೂಡ ಕಲಾವಿದರು.
‘ದೇಸಿತಾರ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಒಂದೇ ನಗರದವರು ಆಯ್ಕೆಯಾಗಿದ್ದಾರೆ’ ಎನ್ನುತ್ತಾರೆ ದೇಸಿತಾರ.ಡಾಟ್.ಕಾಂ ಸಿಇಒ ಮನಸೂರ್ ಅಹಮದ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.