ಲಂಡನ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಕನಸಿಗೆ ಬಲ ತುಂಬಲು ಬೆಂಗಳೂರಿನಲ್ಲಿ ಪುರುಷರ ಹಾಕಿ ತಂಡದ ತರಬೇತಿ ಶಿಬಿರ ಆರಂಭವಾಗಿದೆ. ಇದರಲ್ಲಿರುವ ಭಾರತ ತಂಡದ ಸಂಭವನೀಯರ ಪಟ್ಟಿಯಲ್ಲಿ ಕರ್ನಾಟಕದ ಹತ್ತು ಮಂದಿ ಸ್ಥಾನ ಪಡೆದುಕೊಂಡಿದ್ದಾರೆ. ಇದು ಕರ್ನಾಟಕದಲ್ಲಿ ಹಾಕಿ ಆಟದ ಪುನರುತ್ಥಾನಕ್ಕೆ ಕಾರಣವಾಗಹುದೇ?

ಹರಿಯಾಣ, ಪಂಜಾಬ್ ಮತ್ತು ಮಧ್ಯಪ್ರದೇಶದವರ ಪ್ರಾಬಲ್ಯವೇ ಹೆಚ್ಚಾಗಿದ್ದ ಭಾರತ ಹಾಕಿ ತಂಡದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕನ್ನಡದ ಹುಡುಗರು ಇರುವುದು ಇದೇ ಪ್ರಥಮ. ಅದರಲ್ಲೂ ಕರ್ನಾಟಕದವರೇ ಆಗಿ ಹೋಗಿರುವ ಭರತ್ ಚೆಟ್ರಿಯವರ ನಾಯಕತ್ವದ ತಂಡ ಈಗ ಅಪಾರ ಭರವಸೆ ಮೂಡಿಸಿದೆ.

ಡಿಫೆಂಡರ್ ವಿ.ಆರ್. ರಘುನಾಥ್, ಫಾರ್ವರ್ಡ್ ಆಟಗಾರ ಎಸ್.ವಿ. ಸುನಿಲ್, ಎಸ್.ಕೆ. ಉತ್ತಪ್ಪ ಅವರು ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ನೀಡಿದ ಪ್ರದರ್ಶನ ಕರ್ನಾಟಕದ ಹಾಕಿಪ್ರೇಮಿಗಳ ಚಿತ್ತ ಸೆಳೆದಿದೆ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ರಾಜ್ಯದ ತುಂಬ ಹಾಕಿ ಆಟದ ಬೆಳವಣಿಗೆಗೆ ಪ್ರಯತ್ನಿಸುವ ಯೋಜನೆಯೊಂದನ್ನು `ಹಾಕಿ ಕರ್ನಾಟಕ~ ರೂಪಿಸಿದೆ.

ಅಂತರರಾಷ್ಟೀಯ ಹಾಕಿ ಫೆಡರೇಷನ್ (ಎಫ್ಐಎಚ್) ಹಾಕಿ ಇಂಡಿಯಾ ಸಂಸ್ಥೆಗೆ ಮಾನ್ಯತೆ ನೀಡಿದ ನಂತರ ಕರ್ನಾಟಕದ ಹಾಕಿ ಆಡಳಿತಕ್ಕೆ ಈ ಸಂಸ್ಥೆ ಆರಂಭವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ವಿದ್ಯಾರ್ಥಿಗಳು ಹಾಕಿ ಆಟದತ್ತ ಒಲವು ಬೆಳೆಸುವಂತೆ ಮಾಡಲು ಚಿಂತನೆ ನಡೆಸಿದೆ.

ಜಿಲ್ಲಾ ಸಂಸ್ಥೆಗಳಿಗೆ ಚಾಲನೆ: ಕರ್ನಾಟಕದ ಹಾಕಿ ಎಂದ ಕೂಡಲೇ ಕಣ್ಣ ಮುಂದೆ ಸುಳಿಯುವುದು ನಾಲ್ಕೈದು ಊರುಗಳ ಹೆಸರು ನಾಲಿಗೆಯ ಮೇಲೆ ನಲಿದಾಡುತ್ತವೆ.
ಕೊಡಗು, ಹುಬ್ಬಳ್ಳಿ, ಗದಗ, ಬಾಗಲಕೋಟೆ ಜಿಲ್ಲೆಗಳು ರಾಷ್ಟ್ರೀಯ ಕ್ರೀಡೆಗೆ ನೀಡಿದ ಕೊಡುಗೆ ಅಪಾರ.

ಪ್ರಕೃತಿಯ ಸೌಂದರ್ಯವೆಲ್ಲವನ್ನೂ ತನ್ನ ಮಡಿಲಿನಲ್ಲಿ ತುಂಬಿಕೊಂಡಿರುವ ಕೊಡಗು ಜಿಲ್ಲೆಯು ದೇಶದ ಕಾಯುವ ಸೈನಿಕರು ಮತ್ತು ಅಪ್ರತಿಮ ಹಾಕಿ ಆಟಗಾರರನ್ನು ದೇಶಕ್ಕೆ ನೀಡಿದ್ದರೆ, ಹುಬ್ಬಳ್ಳಿ, ಗದಗಿನ ಸೆಟ್ಲಮೆಂಟ್ ಪ್ರದೇಶಗಳು ಹಾಕಿ ಕಣಜಗಳೇ ಆಗಿದ್ದವು.

ಕೊಡಗಿನ ಪ್ರತಿಯೊಂದು ಕುಟುಂಬದಲ್ಲಿಯೂ ಪಾಲಕರು ತಮ್ಮ ಮಕ್ಕಳು ಸೈನಿಕರಾಗಲಿ, ಹಾಕಿ ಆಟಗಾರರಾಗಲಿ ಎಂದು ಹಾರೈಸುತ್ತಾರೆ. ಅದೇ ರೀತಿ ಬೆಳೆಸುತ್ತಾರೆ. ಅದರ ಪರಿಣಾಮವಾಗಿಯೇ ಇವತ್ತಿಗೂ ಇಲ್ಲಿಯ ಹಾಕಿ ಆಟಗಾರರು ಭಾರತ ತಂಡದ ಬೆನ್ನೆಲುಬಾಗಿದ್ದಾರೆ.

ಉತ್ತರ ಕರ್ನಾಟಕದ ಹುಬ್ಬಳ್ಳಿಯ ಪುಂಡಲೀಕ ಬಳ್ಳಾರಿ, ಗದಗಿನ ಬೇನು ಭಾಳು ಭಾಟ್, ರಾಜು ಬಗಾಡೆ, ಬೆಳಗಾವಿಯ ಒಲಿಂಪಿಯನ್ ಬಂಡು ಪಾಟೀಲ, ಬಾಗಲಕೋಟೆ ಜಿಲ್ಲೆಯ ಒಲಿಂಪಿಯನ್ ರವಿ ನಾಯ್ಕರ್ ಭಾರತದ ಕೀರ್ತಿ ಹೆಚ್ಚಿಸಿದವರು. ಬ್ರಿಟಿಷರು ಕಲಿಸಿದ ಹಾಕಿ ಆಟದಿಂದ ಗದಗ, ಹುಬ್ಬಳ್ಳಿಯ ಸೆಟ್ಲಮೆಂಟಿನ ಜನರ ಜೀವನವೇ ಬದಲಾಗಿದೆ.

ಮಂತ್ರದಂಡದಂತೆ ಕೆಲಸ ಮಾಡಿರುವ ಹಾಕಿ ಸ್ಟಿಕ್ ಅಲ್ಲಿಯ ಜನಾಂಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಬಲರಾಗಲು ಹಾಕಿ ಆಟವೇ ಕಾರಣವಾಗಿದೆ. ಆದರೆ ಹಲವು ಕಾರಣಗಳಿಂದ ಹಾಕಿ ಆಟದತ್ತ ಒಲವು ಕಡಿಮೆಯಾಗುತ್ತಿದ್ದು, ಆಡುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಸರ್ಕಾರದ ಸೌಲಭ್ಯಗಳ ಕೊರತೆ, ಉದ್ಯೋಗದ ಭರವಸೆ ಇಲ್ಲದೇ ಆಟಗಾರರು ಹಾಕಿಯತ್ತ ಬರುತ್ತಿಲ್ಲ.

ಆದರೆ ಶಾಲಾ ಮಟ್ಟದಲ್ಲಿಯೇ ಕ್ರೀಡೆ ಬೆಳೆಯಬೇಕು ಎನ್ನುವುದು ಹಾಕಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮತ್ತು ಒಲಿಂಪಿಯನ್ ಎ.ಬಿ. ಸುಬ್ಬಯ್ಯ ಅವರ ಬಲವಾದ ನಂಬಿಕೆ. ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ಕೊಡಗಿನಲ್ಲಿ ಹಾಕಿ ಕುಟುಂಬದ ಆಟ. ಅಲ್ಲಿಯ ಪಾಲಕರು ಮಕ್ಕಳಿಗೆ ಕ್ರಿಕೆಟ್ ಬಗ್ಗೆ ಹೇಳುವುದಿಲ್ಲ.

ಆದರೆ ಹಾಕಿ ಸ್ಟಿಕ್ ಕೊಡಿಸುತ್ತಾರೆ. ಅದೇ ರೀತಿ ಎಲ್ಲ ಜಿಲ್ಲೆಗಳಲ್ಲಿಯೂ ಪಾಲಕರಿಗೆ ಭರವಸೆ ಮೂಡಿಸಬೇಕಿದೆ. ಮಕ್ಕಳನ್ನು ಹಾಕಿ ಆಡಲು ಬಿಡಿ, ಅವರ ಭವಿಷ್ಯವನ್ನು ನಾವು ರೂಪಿಸುತ್ತೇವೆ ಎನ್ನುವ ಭರವಸೆಯನ್ನು ನೀಡಬೇಕಾಗಿದೆ. ಅದಕ್ಕಾಗಿಯೇ ಜಿಲ್ಲಾ ಸಂಸ್ಥೆಗಳನ್ನು ಆರಂಭಿಸಿ, ಆಯಾ ಜಿಲ್ಲೆಗಳ ಮಾಜಿ ಆಟಗಾರರನ್ನೇ ಅವುಗಳಿಗೆ ಪದಾಧಿಕಾರಿಗಳನ್ನಾಗಿ ಮಾಡುತ್ತೇವೆ. ಶಾಲೆಗಳಲ್ಲಿ ತರಬೇತಿ, ಸೌಲಭ್ಯ ಸುಧಾರಣೆಗೆ ಒತ್ತು ನೀಡುತ್ತೇವೆ. ಪ್ರತಿಭೆಗಳನ್ನು ಆಯ್ದು ಜಿಲ್ಲಾ ತಂಡಗಳಿಗೆ ಕಳಿಸಿ ಮುಂದಿನ ಬೆಳವಣಿಗೆಗೆ ಅನುಕೂಲ ಕಲ್ಪಿಸುತ್ತೇವೆ~ ಎಂದು ಅವರು ವಿವರಿಸಿದರು.

`ಇದೀಗ ನಮ್ಮ ಸಂಸ್ಥೆ ಆರಂಭವಾಗಿದೆ. ಮುಂದೆ ಒಂದೊಂದೇ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ. ಮೈಸೂರಿನಲ್ಲಿ ಹಾಕಿ ಕೋಚ್ ಪುಲಿಕೇಶಿ ಶೆಟ್ಟಪ್ಪನವರ, ದೈಹಿಕ ಶಿಕ್ಷಣ ತಜ್ಞ ಪ್ರೊ. ಶೇಷಣ್ಣ ಮತ್ತು ಮಾಜಿ ಆಟಗಾರ ಪ್ರಕಾಶ್ ಅವರ ಸಹಕಾರದಿಂದ ಜಿಲ್ಲೆಯಲ್ಲಿ ಹಾಕಿ ಕ್ರೀಡೆಯ ಬೆಳವಣಿಗೆಗೆ ಪ್ರಯತ್ನಿಸುತ್ತಿದ್ದೇವೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಂತದಲ್ಲಿಯೇ ತರಬೇತಿ ನೀಡಿದರೆ ಹೆಚ್ಚು ಸೂಕ್ತ~ ಎಂದು ಹಾಕಿ ಮೈಸೂರು ಸಂಸ್ಥೆಯ ಉಪಾಧ್ಯಕ್ಷ ಜಿ.ಜಿ. ನಾಚಪ್ಪ ಹೇಳಿದರು.

ಭಾರತ ಪುರುಷರ ತಂಡವು ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ್ದು ಹಾಕಿ ಇಂಡಿಯಾದ ಆತ್ಮವಿಶ್ವಾಸ ಹೆಚ್ಚಿಸಿದೆ. ದೇಶದ ಎಲ್ಲ ಭಾಗಗಳಲ್ಲಿಯೂ ಆಟವನ್ನು ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಆಟದ ಬೆಳವಣಿಗೆಗೆ ಎಲ್ಲ ಸೌಲಭ್ಯ ನೀಡುವ ಭರವಸೆಯಿಂದ `ಹಾಕಿ ಕರ್ನಾಟಕ~ದ ಉತ್ಸಾಹವೂ ಇಮ್ಮಡಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.