ದಾವಣಗೆರೆ: ಶೇ 25ರಷ್ಟು ದಾಖಲಾತಿಯನ್ನು ಬಡಮಕ್ಕಳಿಗೆ ಮೀಸಲಿಡಲು ವಿರೋಧಿಸಿ, `ಕುಸ್ಮಾ~ ಅಧ್ಯಕ್ಷ ಜಿ.ಎಸ್. ಶರ್ಮಾ ರಾಜ್ಯದ್ಯಾಂತ ಅನುದಾನ ರಹಿತ ಶಾಲೆಗಳಿಗೆ ಬಂದ್ ಕರೆ ನೀಡಿರುವುದು ಖಂಡನೀಯ ಎಂದು ಯುವ ಕಾಂಗ್ರೆಸ್ನ ಜಿಲ್ಲಾ ಘಟಕದ ಅಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ತಿಳಿಸಿದರು.

`ಕುಸ್ಮಾ~ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಜಿ.ಎಸ್. ಶರ್ಮಾ ದೇಶಬಿಟ್ಟು ಹೋಗಬೇಕು. ಅವರು ನಡೆಸುತ್ತಿರುವ ಶಾಲಾ ಕಾಲೇಜುಗಳನ್ನು ಸರ್ಕಾರ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರ ಜಾತಿ ರಾಜಕಾರಣ ಹಾಗೂ ಬಣಗಳ ರಾಜಕಾರಣದಲ್ಲಿ ಮುಳುಗಿದೆ. ಇವರಿಂದ ಸರ್ಕಾರ ನಡೆಸಲು ಆಗುತ್ತಿಲ್ಲ. ರಾಜ್ಯದಲ್ಲಿ ಬರಗಾಲ ಇರುವಾಗ ಬಿಜೆಪಿ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ದೆಹಲಿ, ಬೆಂಗಳೂರು ಹಾಗೂ ಹೋಟೆಲ್ಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ವಿನಾಯಕ ಪೈಲ್ವಾನ್, ಡಿ.ಆರ್. ಅನಿಲ್ಕುಮಾರ್, ಶಂಭು ಎಸ್. ಉರೇಕುಂಡಿ, ಎಂ. ಹಬೀಬ್, ಜಾನ್ ಡಿಸೋಜ, ಮೊಹಮದ್ ಜಾಫೀರ್, ಬಿ.ಕೆ. ಸುನೀಲ್ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.