ಗುರುವಾರ , ಜೂನ್ 17, 2021
21 °C

ಶಾಸಕರ ವಿರುದ್ಧ ಕ್ರಮ: ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಡ್ಯ ಅಭಿವೃದ್ಧಿ ಪ್ರಾಧಿ ಕಾರ (ಮುಡಾ) ವ್ಯಾಪ್ತಿಯ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಮೂವರು ಶಾಸಕರು ಸೇರಿದಂತೆ ಇತರ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದು ಕೊಳ್ಳಲು ನಿರಾಕ ರಿಸಿದ ಮಂಡ್ಯ ಜಿಲ್ಲಾ ಲೋಕಾಯುಕ್ತ ಕೋರ್ಟ್ ಆದೇಶವನ್ನು ಹೈಕೋರ್ಟ್ ಬುಧವಾರ ರದ್ದು ಮಾಡಿದೆ.ಈ ಪ್ರಕರಣವನ್ನು ಅದೇ ಕೋರ್ಟ್‌ಗೆ ವಾಪಸು ಮಾಡಿರುವ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅವರು, ಕಾನೂನಿನ ಅಡಿ ಸೂಕ್ತ ಕ್ರಮ ತೆಗೆದು ಕೊಳ್ಳುವಂತೆ ಆದೇಶಿಸಿದ್ದಾರೆ.ಮಂಡ್ಯದ ಶಾಸಕ ಎಂ.ಶ್ರೀನಿವಾಸ,  ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು, ಶ್ರೀರಂಗಪಟ್ಟದ  ಶಾಸಕ ರಮೇಶ್ ಬಂಡಿ ಸಿದ್ದೇಗೌಡ, ಮಂಡ್ಯ ಪುರಸಭೆ ಸದಸ್ಯ ಎಂ.ಜೆ.ಚಿಕ್ಕಣ್ಣ, ಮಂಡ್ಯ ನಗರಾಭಿವೃದ್ಧಿ ಇಲಾಖೆಯ ನಿವೃತ್ತ ಆಯುಕ್ತ ಉಪೇಂದ್ರ ಡಿ. ನಾಯ್ಕ, ಇಲಾ ಖೆಯ ಪ್ರಭಾರಿ ಆಯುಕ್ತ ಟಿ.ನಿಸಾರ್ ಅಹಮ್ಮದ್ ಅವರ ವಿರುದ್ಧ ಕ್ರಮಕ್ಕೆ ಕೋರಿ ವಕೀಲ ಟಿ.ಎಸ್. ಸತ್ಯಾನಂದ ಅವರು ಸಲ್ಲಿಸಿದ್ದ ಅರ್ಜಿ ಇದಾಗಿದೆ.ಮುಡಾ ನಿವೇಶನಗಳನ್ನು ಅಕ್ರಮ ವಾಗಿ ಹಂಚಿಕೆ ಮಾಡಿರುವ ಇವರ ಮೇಲಿದೆ. ತಮ್ಮ ಹಾಗೂ ಸಂಬಂಧಿಗಳ ಹೆಸರಿನಲ್ಲಿ ಅಕ್ರಮವಾಗಿ ನಿವೇಶನ ಮಂಜೂರು ಮಾಡಿಸಿದ್ದರೂ ಆ ಬಗ್ಗೆ ಲೋಕಾಯುಕ್ತ ಕೋರ್ಟ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವುದು ಅರ್ಜಿದಾರರ ದೂರು.ಅರ್ಜಿಯ ವಿವರ: ಸರ್ವೇ ನಂ. 506 ಮೈಸೂರು ಅಭಿವೃದ್ಧಿ ಪ್ರಾಧಿಕಾರವು ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ 2009ರಲ್ಲಿ ಅರ್ಜಿ ಕರೆದಿತ್ತು. ಅರ್ಜಿ ಸಲ್ಲಿಕೆಗೆ 2009ರ ನ.30 ಕೊನೆಯ ದಿನವಾಗಿತ್ತು.ಆದರೆ ಈ ದಿನಕ್ಕೆ ಮುಂಚಿತ ವಾಗಿಯೇ ಈ ಎಲ್ಲ ಆರೋಪಿಗಳು ತಮ್ಮ ಸಂಬಂಧಿಗಳ ಹೆಸರಿನಲ್ಲಿ ನಿವೇಶನ ಮಂಜೂರು ಮಾಡಿಸಿಕೊಂಡಿದ್ದರು. ಈ ಅವಧಿಯಲ್ಲಿಯೇ ಉಪ ನೋಂದಣಾ ಧಿಕಾರಿ ಕಚೇರಿಯಲ್ಲಿ ನಿವೇಶನವನ್ನು ನೋಂದಣಿ ಕೂಡ ಮಾಡಲಾಗಿದೆ. ನಿವೇಶನಗಳನ್ನು ನಿಯಮಾನುಸಾರ ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆ ಉಪ-ಸಮಿತಿ ಯಾವುದೇ ಮಾಹಿತಿ ನೀಡಲಿಲ್ಲ.`ಇಲ್ಲಿ ಅವ್ಯವಹಾರ ನಡೆದಿರುವ ಕುರಿತು ನಾನು ಪ್ರಾಧಿಕಾರ ಸೇರಿದಂತೆ ಸಂಬಂಧಿತ ಎಲ್ಲ ಇಲಾಖೆಗಳಲ್ಲಿ ಎಲ್ಲ ದಾಖಲೆಗಳ ಸಹಿತವಾಗಿ ದೂರು ದಾಖಲಿಸಿದ್ದೆ. ಮಾಧ್ಯಮಗಳಲ್ಲಿಯೂ ಈ ಕುರಿತು ವರದಿಗಳು ಪ್ರಕಟಗೊಂಡವು. ಆ ನಂತರದಲ್ಲಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮ ನಿವೇಶನ ಹಂಚಿಕೆ ಕುರಿತು ವರದಿ ನೀಡುವಂತೆ ಸರ್ಕಾರ ಸಂಬಂಧಿತ ಇಲಾಖೆಗಳಿಗೆ ನಿರ್ದೇಶಿಸಿತು.ವರದಿಯಲ್ಲಿ 107 ನಿವೇಶನಗಳ ಅಕ್ರಮ ಹಂಚಿಕೆ ಬಗ್ಗೆ ವಿವರಣೆ ನೀಡ ಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಸರ್ಕಾರ ತೆಗೆದುಕೊಂಡಿಲ್ಲ ಎನ್ನುವುದು ಅರ್ಜಿದಾರರ ದೂರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.