ಶಿಡ್ಲಘಟ್ಟ: ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಯನ್ನು ಅಳವಡಿಸಿಕೊಂಡಾಗ ಮಾತ್ರ ಲಾಭ ಸಿಗಲು ಸಾಧ್ಯವಿದೆ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಎಂ.ವಿ.ಚಂದ್ರು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಹಾಗೂ ರೇಷ್ಮೆ ಇಲಾಖೆ ವತಿಯಿಂದ ಬುಧವಾರ ತಾಲ್ಲೂ ಕಿನ ಎ.ಹುಣಸೇನಹಳ್ಳಿ ಗ್ರಾಮದಲ್ಲಿ ಮಹಿಳಾ ರೇಷ್ಮೆ ಬೆಳೆಗಾರರಿಗೆ ಹಮ್ಮಿ ಕೊಂಡಿದ್ದ ತರಬೇತಿಯ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.

ರೇಷ್ಮೆ ಕೃಷಿಯಲ್ಲೂ ಅಗಾಧವಾದ ತಾಂತ್ರಿಕ ಬೆಳೆವಣಿಗೆಗಳಾಗಿವೆ. ಇದನ್ನು ಬೆಳೆಗಾರರು ಗಮನಿಸಬೇಕು. ಹುಳು ಸಾಕಾಣಿಕೆ ಮನೆಯಲ್ಲಿ ಉತ್ತಮ ವಾತಾ ವರಣ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮಹಿಳೆ ಹುಳು ಸಾಕಾಣಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಕೆಲಸದಲ್ಲಿ ಕೌಶಲ ಸಾಧಿಸಬೇಕು.

ಆಗ ಸರ್ಕಾರ ಮಹಿಳೆಯರಿಗೆ ರೇಷ್ಮೆಹುಳು ಸಾಕಾಣಿಕೆ, ಹಿಪ್ಪುನೇರಳೆ ತೋಟ ನಿರ್ವ ಹಣೆ ಕುರಿತು ತರಬೇತಿ ನೀಡುತ್ತಿದ್ದು ತರಬೇತಿಯನ್ನು ಸದು ಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.

ರೇಷ್ಮೆಗೂಡು ಮಾರುಕಟ್ಟೆ ಉಪ ನಿರ್ದೆಶಕ ಹನುಮಂತರಾಯಪ್ಪ ಮಾತ ನಾಡಿ, ಶಿಡ್ಲಘಟ್ಟದಲ್ಲಿ ಸಿಗುವ ನೀರಿನಲ್ಲಿ ತೆಗೆದ ರೇಷ್ಮೆನೂಲು ಹೆಚ್ಚು ಹೊಳಪು, ನುಣುಪಿನಿಂದ ಕೂಡಿದ್ದು ದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಇನ್ನಷ್ಟು ತಾಂತ್ರಿ ಕತೆ ಅಳವಡಿಸಿಕೊಂಡು ಅಧಿಕ ಲಾಭ ಪಡೆಯಬಹುದು. ಮಳಮಾಚನಹಳ್ಳಿ ಹಾಗೂ ಸುತ್ತಮುತ್ತ ಬೆಳೆಯುವ ರೇಷ್ಮೆ ಗೂಡು ಹೆಚ್ಚು ಗುಣ ಮಟ್ಟದ್ದಾಗಿದೆ ಎಂದು ಮಾಹಿತಿ ನೀಡಿದರು.

ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಂಕ್ಮುನಿಯಪ್ಪ, ತಾಲ್ಲೂಕು ಪಂಚಾ ಯಿತಿ ಮಾಜಿ ಸದಸ್ಯ ಪಿ.ವಿ.ನಾಗರಾಜ್, ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಶ್ರೀನಾಥ್, ಸದಸ್ಯೆ ಪ್ರಮೀಳಮ್ಮ, ರೇಷ್ಮೆ ಸಹಾಯಕ ನಿರ್ದೇಶಕ ಶಂಕರಪ್ಪ, ವಿಸ್ತರಣಾಧಿಕಾರಿ ಚಂದ್ರಪ್ಪ, ತಲಘಟ್ಟಪುರದ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಯ ವಿಜ್ಞಾನಿಗಳಾದ ಡಾ.ಪಿ.ಜಿ. ರಾಧಾಕೃಷ್ಣ, ಡಾ.ಚೆಲುವಾಚಾರಿ, ಡಾ.ಮುನಿರಾಜು, ಡಾ.ಗುಪ್ತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.