ದೇವನಹಳ್ಳಿ: `ಶಿಕ್ಷಣದ ಜೊತೆಗೆ ಸಮಾಜದಲ್ಲಿ ಕಲಿಯಬೇಕಾದ ವಾಸ್ತವ ವಿಚಾರಗಳು ಎನ್ಎಸ್ಎಸ್ ಶಿಬಿರಗಳಿಂದ ಗ್ರಾಮೀಣ ವಿದ್ಯಾರ್ಥಿಗಳ ಅರಿವಿಗೆ ಬರುತ್ತದೆ~ ಎಂದು ಜಿ.ಪಂ. ಸದಸ್ಯ ಬಿ.ರಾಜಣ್ಣ ತಿಳಿಸಿದರು.

ತಾಲ್ಲೂಕಿನ ವಿಶ್ವನಾಥಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಸೋಲೂರು ಗ್ರಾಮದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ಶಿಬಿರದಿಂದಾಗಿ ಗ್ರಾಮಗಳ ವಾಸ್ತವ ಚಿತ್ರಣದ ಅರಿವಾಗಲಿದೆ.

ಚರಂಡಿ, ರಸ್ತೆ, ಆರೋಗ್ಯ, ನೈರ್ಮಲ್ಯ, ಪರಿಸರ, ಮೂಢನಂಬಿಕೆ ಹಾಗೂ ಧಾರ್ಮಿಕ ಪರಂಪರೆಗಳ ಆಚರಣೆ ಜೊತೆಗೆ ಹೆಚ್ಚುತ್ತಿರುವ ತಂತ್ರಜ್ಞಾನ ಅರಿವು ಮೂಡಿಸಿ ಜನಸಾಮಾನ್ಯರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು~ ಎಂದು ಕಿವಿ ಮಾತು ಹೇಳಿದರು.

ಶಿಬಿರ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ವೆಂಕಟಸ್ವಾಮಿ, `ಜವಾಬ್ದಾರಿ ಹಾಗೂ ಜಾಗೃತಿಯುತಿ ಯುವಕರ ಸಮುದಾಯ ಭಾರತಕ್ಕೆ ಅಗತ್ಯವಿದೆ. ವಿದ್ಯೆಯ ಜೊತೆಗೆ ಸಾಮಾಜಿಕ ನ್ಯಾಯದ ಅರಿವು ಸಮಾಜಕ್ಕೆ ಬೇಕಾಗಿದೆ. ದೇಶದ ಬಡತನ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯ. ಕನ್ನಡ ಭಾಷೆ ಉಳಿಯಬೇಕು, ಆದರೆ ಜೀವನದ ಮಾರ್ಗಕ್ಕೆ ಆಂಗ್ಲ ಭಾಷೆ ಅಗತ್ಯ~ ಎಂದರು.

ಜಿಲ್ಲಾ ಸೇವಾದಳ ಕಾರ್ಯದರ್ಶಿ ಎ.ಶಿವರಾಮಯ್ಯ ಮಾತನಾಡಿ, `ಕೇವಲ ಕಾಲೇಜಿನ ಕೊಠಡಿಯಲ್ಲಿ ಶಿಸ್ತು ಪಾಲಿಸಿದರೆ ಸಾಲದು, ವಿದ್ಯಾರ್ಥಿ ಜೀವನದ ಎಲ್ಲಾ ರಂಗದಲ್ಲಿ ಶಿಸ್ತು ಪಾಲಿಸಬೇಕು. ಏಳು ದಿನಗಳ ಶಿಬಿರ ಕಾರ್ಯಕ್ರಮವಾಗಬಾರದು, ಗ್ರಾಮಗಳಲ್ಲಿನ ಸಮಸ್ಯೆಗಳ ಜೊತೆಗೆ ಎಲ್ಲಾ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು~ ಎಂದರು.

ಶಿಬಿರಾಧಿಕಾರಿ ಆರ್.ರಂಗಸ್ವಾಮಯ್ಯ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಪ್ರಾಂಶುಪಾಲ ಸಿ.ಡಿ.ರಾಜುಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ನರಸಿಂಹರಾಜು, ಹಾಲು ಸಹಕಾರ ಸಂಘದ ಅಧ್ಯಕ್ಷ ಎಂ.ಮುನಿರಾಜು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಆರ್.ಮುನೇಗೌಡ, ಗ್ರಾ.ಪಂ.ಸದಸ್ಯೆ ಅಮರಾವತಿ, ಪುಷ್ಟ, ಎಸ್.ಎಂ.ನಾರಾಯಣಸ್ವಾಮಿ, ಎಸ್.ಕೆ.ಕೋದಂಡರಾಮು, ಸಹ ಶಿಬಿರಾಧಿಕಾರಿಗಳಾದ ಡಾ. ಶಿವಶಂಕರ್, ಬಿ.ಎಸ್.ನಾಗರಾಜಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.