ಶಿಲ್ಪಾ ಶೆಟ್ಟಿ ಸೋಜಿಗದ ಸಲಹೆ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಿರ್ಮಾಪಕಿಯಾಗಿ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ ಎಂಬುದಕ್ಕೆ ಅವರ ಇತ್ತೀಚಿನ ನಿರ್ಧಾರಗಳೇ ಸಾಕ್ಷಿ. ನಟಿಯರನ್ನು ನಂಬಿ ಕೋಟಿಗಟ್ಟಲೆ ಹಣ ಹಾಕುವ ಕಾರಣ ನಟಿಯರ ಜೊತೆ ಚಿತ್ರದ ಒಪ್ಪಂದ ಮಾಡಿಕೊಳ್ಳುವಾಗ ‘ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಗರ್ಭಿಣಿಯಾಗುವುದಿಲ್ಲ’ ಎಂಬ ಷರತ್ತನ್ನೂ ನಮೂದಿಸಬೇಕು ಎಂದು ಶಿಲ್ಪಾ ಸಲಹೆ ನೀಡಿದ್ದಾರೆ.
ವಿದ್ಯಾ ಬಾಲನ್ ಅವರು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಗಾಳಿಸುದ್ದಿಯ ಹಿನ್ನೆಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
‘‘ನಿರ್ದೇಶಕರು ಮತ್ತು ನಿರ್ಮಾಪಕರು ‘ಗರ್ಭಿಣಿಯಾಗುವುದಿಲ್ಲ’ ಎಂಬ ಅಂಶವನ್ನು ಒಪ್ಪಂದದ ಪಟ್ಟಿಯಲ್ಲಿ ಸೇರಿಸಿಕೊಂಡರೆ ತಪ್ಪೇನಲ್ಲ. ಸಾಮಾನ್ಯವಾಗಿ ಒಂದು ಚಿತ್ರ ಸಂಪೂರ್ಣವಾಗಬೇಕಾದರೆ ಒಂದು ವರ್ಷವಾದರೂ ಬೇಕಾಗುತ್ತದೆ. ಚಿತ್ರ ಮುಗಿಯಲು ಮೂರರಿಂದ ನಾಲ್ಕು ವರ್ಷ ತೆಗೆದುಕೊಂಡರೆ ಈ ನಿಯಮ ಅನ್ವಯವಾಗದಂತೆ ಮಾಡಬಹುದು’ ಎಂದೂ ಹೇಳಿದ್ದಾರೆ. ತಮ್ಮನ್ನು ನಂಬಿ ಹಣ ಹೂಡಲಾಗಿದೆ ಎಂಬುದನ್ನು ಕಲಾವಿದರು ಅರ್ಥಮಾಡಿಕೊಳ್ಳಬೇಕು ಎಂದು ತಮ್ಮ ಹೋಮ್ ಪ್ರೊಡಕ್ಷನ್ನ ಚಿತ್ರ ‘ಡಿಷ್ಕಿಯಾಂ’ನ ಪ್ರಚಾರದ ಸಂದರ್ಭದಲ್ಲಿ ಅವರು ತಿಳಿಸಿದರು.
‘ನಟಿಯರನ್ನು ಪ್ರೇಕ್ಷಕರು ಸ್ವೀಕರಿಸಿರುವಾಗ ಮದುವೆಯಿಂದ ಅವರ ಕಲಾಜೀವನಕ್ಕೆ ಅಡ್ಡಿಯಾಗದು. ನಾನು ಈ ಇಂಡಸ್ಟ್ರಿಯಲ್ಲಿದ್ದೇನೆ ಎಂದರೆ ಅದಕ್ಕೆ ನನ್ನ ಅಭಿಮಾನಿಗಳೇ ಕಾರಣ’ ಎಂದರು.
ಸಮಕಾಲೀನ ಚಿತ್ರಗಳಲ್ಲಿ ಮರೆಯಾದ ರೀತಿಯ ಸಂಭಾಷಣೆ ‘ಡಿಷ್ಕಿಯಾಂ’ ಚಿತ್ರದಲ್ಲಿದ್ದು, ಜನ ಅದನ್ನು ಇಷ್ಟಪಡುತ್ತಾರೆ. ಹಿಂದೆ ಇದ್ದಂತಹ ಸಂಭಾಷಣೆಯೇ ಮುಖ್ಯವಾಗಿದ್ದ ಚಿತ್ರಗಳು ಈಗ ಬರುತ್ತಿಲ್ಲ. ನನಗೆ ಅಂತಹ ಚಿತ್ರಗಳು ಸಿಕ್ಕಿಲ್ಲ. ಆದರೆ ನಮ್ಮ ಚಿತ್ರದಲ್ಲಿ ಒಳ್ಳೆಯ ಸಂಭಾಷಣೆಗೆ ಆದ್ಯತೆ ನೀಡಿದ್ದೇವೆ. ಮಾರ್ಚ್ 28ರಂದು ಚಿತ್ರ ಬಿಡುಗಡೆಯಾಗಲಿದೆ’ ಎಂದು ಶಿಲ್ಪಾ ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.