ಶನಿವಾರ, ಜನವರಿ 18, 2020
21 °C

ಶಿವಕುಮಾರ ಸ್ವಾಮೀಜಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ತಾಲ್ಲೂ ಕಿನ ಚಿಕ್ಕ ಕಲ್ಬಾಳ್‌ನಲ್ಲಿರುವ ಬಾಳೆ ಹೊನ್ನೂರು ರಂಭಾ ಪುರಿ ಪೀಠದ ಶಾಖಾ ಮಠದ ಪೀಠಾಧ್ಯಕ್ಷ ಶಿವ ಕುಮಾರ ಸ್ವಾಮೀಜಿ(82) ಅವರು ಭಾನುವಾರ ಬೆಳಿಗ್ಗೆ ಲಿಂಗೈಕ್ಯ ರಾದರು.+ ಹೃದ್ರೋಗದಿಂದ ಬಳಲುತ್ತಿದ್ದ ಶ್ರೀಗ ಳನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿ ಸಲಾಗಿತ್ತು. ಒಂದು ವಾರದಿಂದ ಆಸ್ಪತ್ರೆ ಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.ಶ್ರೀಗಳ ಲಿಂಗೈಕ್ಯದ ಸುದ್ದಿ ಜಿಲ್ಲೆಯಾದ್ಯಂತ ಹರಡುತ್ತಿದ್ದಂತೆ ದೇಗುಲಮಠದ  ಮುಮ್ಮಡಿ ನಿರ್ವಾಣ ಮಹಾಸ್ವಾಮಿ, ಬಿಲ್ವಪತ್ರೆ ಮಠದ ಶಿವಲಿಂಗಸ್ವಾಮಿ, ಕೆಂಗೇರಿ ಬಂಡೇ ಮಠದ ಶಿವಲಿಂಗಸ್ವಾಮಿ, ಮರಳವಾಡಿ ಮೃತ್ಯುಂಜಯ ಸ್ವಾಮಿ, ಬೇಲಿಮಠದ ಶಿವರುದ್ರಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಹರ-ಗುರು ಶರಣರು ಹಾಗೂ ರಾಜಕೀಯ ಮುಖಂಡರು ಮಠಕ್ಕೆ ಆಗಮಿಸಿ, ಸ್ವಾಮೀಜಿ ದರ್ಶನ ಪಡೆದರು.ಅಂತ್ಯಕ್ರಿಯೆಯು ಸೋಮವಾರ ಬೆಳಿಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ನೆರವೇರಲಿದೆ ಎಂದು ಮಠದ ಕಿರಿಯ ಶ್ರೀಗಳಾದ ಶಿವಾನಂದ ಶಿವಾಚಾರ್ಯರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)