ಬುಧವಾರ, ಜೂನ್ 16, 2021
21 °C

ಶೀಘ್ರ ಬರಲಿದೆ ಸೌರ ಶೌಚಾಲಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ, ಐಎಎನ್‌ಎಸ್‌): ವಿಶ್ವದ ಮೊದಲ ಕ್ರಾಂತಿಕಾರಿ ನೀರು­ರಹಿತ ಸೋಲಾರ್‌ ವಿದ್ಯುತ್‌ ಶೌಚಾ­ಲಯ ಈ ತಿಂಗಳು ಭಾರತದಲ್ಲಿ ಅನಾ­ವರಣಗೊಳ್ಳಲಿದೆ. ಸುರಕ್ಷಿತ ಮತ್ತು ಸಮರ್ಥ ನೈರ್ಮಲ್ಯದ ಕೊರತೆ ಹೊಂದಿದ ಜಗತ್ತಿನ ಸುಮಾರು 250 ಕೋಟಿ ಜನರಿಗೆ ನೆರ­ವಾಗುವ ಉದ್ದೇಶದೊಂದಿಗೆ ಸೌರ ವಿದ್ಯುತ್‌­ ಬಳಸಿ ಈ ನೀರು ಬಳಸದ ಟಾಯ್ಲೆಟ್‌ ತಯಾ­ರಿಸ­ಲಾಗಿದೆ.ಅಮೆರಿಕದ ಬಿಲ್‌ ಮತ್ತು ಮೆಲಿಂಡಾ ಗೇಟ್ಸ್ ಪ್ರತಿ­ಷ್ಠಾನ ನೆರವಿನ ಸುಮಾರು ₨4.81 ಕೋಟಿಗಳಷ್ಟು (7,77,000 ಡಾಲರ್‌) ಅನುದಾನ­ವನ್ನು ಬಳಸಿ ಈ ವಿಶೇಷ ಶೌಚಾಲಯ­ವನ್ನು ವಿನ್ಯಾಸ­ಗೊಳಿಸಿ, ನಿರ್ಮಿಸ­ಲಾಗು­ತ್ತಿದೆ. ನವೀನ ತಂತ್ರಜ್ಞಾನವನ್ನು ಹೊಂದಿ­ರುವ ಈ ಶೌಚಾ­ಲ­ಯವು ಮಾನವನ ಮಲ­­ವನ್ನು ಉನ್ನತ ಸರಂಧ್ರ (ಸೂಕ್ಷ್ಮ ರಂಧ್ರ­ಗಳ) ಜೈವಿಕ ಇದ್ದಿಲು, ‘ಬಯೋ­ಚಾರ್‌’ ಆಗಿ ಪರಿ­ವರ್ತಿಸಲಿದೆ.ಬಡವರಿಗೆ ಪರಿಸರ ಪ್ರೇಮಿ ಪರಿ­ಹಾರ­ ಒದಗಿ­ಸುವ ಗುರಿ­ಯೊಂದಿಗೆ ಈ ಶೌಚಾ­ಲ­ಯ­ವನ್ನು ಸಿದ್ಧಪಡಿಸ­ಲಾಗಿದೆ.  ನವ­ದೆಹಲಿ­ಯಲ್ಲಿ ಈ ತಿಂಗಳ 20ರಿಂದ 22ರ­­ವರೆಗೆ ವಿಜ್ಞಾನಿಗಳು, ತಂತ್ರಜ್ಞರು ಮತ್ತಿತರ ಗಣ್ಯರ ವೀಕ್ಷಣೆಗಾಗಿ ಈ ತಂತ್ರ­ಜ್ಞಾನವನ್ನು ಪ್ರದರ್ಶನ­ಕ್ಕಿ­ಡ­ಲಾಗುತ್ತದೆ.ಈ ಶೌಚಾಲಯವು ಸಾಧ್ಯವಾದಷ್ಟು ಅತಿ ಉಷ್ಣಾಂಶ­ದಲ್ಲಿ ಮಾನವನ ಮಲ­ವನ್ನು ­ಬಿಸಿಯಾಗಿಸಿ, ಸೂಕ್ಷ್ಮ ಕ್ರಿಮಿಗಳಿಲ್ಲ­ದಂತೆ ಸಂಸ್ಕ­ರಿಸಿ, ಅವುಗಳ ಸಂತಾನ­ಶಕ್ತಿ­ಹರಣ­ಗೊಳಿಸಿದ ಬಯೋಚಾರ್‌ನ್ನು  ತಯಾ­ರಿ­ಸು­ವುದು ಎಂದು ಕೊಲೊರಾಡೊ ವಿಶ್ವ­ವಿದ್ಯಾ­ಲ­ಯದ ಪ್ರಧಾನ ಯೋಜನಾ ಸಂಶೋ­ಧಕ ಪ್ರೊ. ಕಾರ್ಲ್‌ ಲಿಂಡನ್‌ ತಿಳಿಸಿದ್ದಾರೆ.ಬಯೋಚಾರ್‌ನ್ನು ಬೆಳೆ ಇಳುವರಿ ಹೆಚ್ಚ­ಳಕ್ಕೆ ಮತ್ತು ಹಸಿರುಮನೆ ಅನಿಲ­ವಾದ ಬೇರ್ಪಡಿಸಿದ ಇಂಗಾ­ಲದ ಡೈ­ಆಕ್ಸೈ­ಡ್‌ಗೆ ಬಳಸಬಹುದಾಗಿದೆ. ಈ ಬಯೋ­ಚಾರ್‌ ಅತ್ಯಂತ ಮೌಲ್ಯ­ಯುತ ಸಾಮಗ್ರಿ­ಯಾ­ಗಿದ್ದು, ಇದು ಉತ್ತಮವಾಗಿ ನೀರನ್ನು ಸಂಗ್ರ­ಹಿಸಿಡುವ ಸಾಮರ್ಥ್ಯ ಹೊಂದಿದೆ.  ಕೃಷಿ ಭೂಮಿಯಲ್ಲಿ ಪೌಷ್ಟಿಕ ದ್ರವ್ಯವನ್ನು ಹಿಡಿದಿಡಲು ಮತ್ತು ಮಣ್ಣಿನಲ್ಲಿ ಅಧಿಕ ಸ್ಥಿರತೆ ತರಲು ಇದನ್ನು ಬಳಸಬಹು­ದು ಎಂದು ಅವರು ಹೇಳಿದ್ದಾರೆ.ಮಣ್ಣಿನ ಮಿಶ್ರಣವು ಶೇ 10ರಷ್ಟು ಬಯೋ­ಚಾರ್‌ನ್ನು ಒಳಗೊಂಡಿದ್ದು, ಶೇ 50­ಕ್ಕೂ ಹೆಚ್ಚಿನ ನೀರನ್ನು ಹಿಡಿದಿಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಸಸ್ಯ ಪೌಷ್ಟಿ­­­­ಕತೆಯ ಲಭ್ಯತೆಯನ್ನು ಹೆಚ್ಚಿಸು­ತ್ತದೆ. ಬಯೋ­ಚಾರ್‌ನ್ನು ಚಾರ್ಕೋಲ್‌ ಆಗಿ ಸುಡಬಹುದು. ಇದು ವಾಣಿಜ್ಯ ಚಾರ್ಕೋಲ್‌ನಂತೆ ಇಂಧನ­ವನ್ನು ಒದ­ಗಿ­­ಸು­ವುದು ಎಂದು ಅವರು ತಿಳಿಸಿದ್ದಾರೆ.ಈಗ ತಯಾರಿಸಿರುವ ಶೌಚಾಲಯವು ದಿನವೊಂದ­ರಲ್ಲಿ ನಾಲ್ಕರಿಂದ ಆರು ಜನ­ರಿಗೆ ಬಳಕೆಯಾಗಬಹು­ದಾಗಿದೆ. ಇನ್ನೂ ಹೆಚ್ಚಿನ ಜನರು ಬಳಸುವ ಸೌಲಭ್ಯದ ದೊಡ್ಡ ಶೌಚಾಲಯದ ನಿರ್ಮಾಣಕ್ಕೆ ವಿನ್ಯಾಸ ಸಿದ್ಧ­ಪಡಿ­ಸಲಾಗಿದೆ. ದಿನವೊಂ­ದ­­ಕ್ಕೆ ಐದು ಸೆಂಟ್‌ಗಳ ವೆಚ್ಚ­ದಲ್ಲಿ ಈ ಶೌಚಾಲಯ ಬಳಸುವ ಗುರಿ ಹೊಂದ­ಲಾ­ಗಿದೆ. ದಕ್ಷತೆ ಮತ್ತು ಕಡಿಮೆ ವೆಚ್ಚದ ಸುಧಾರಿತ ಮಾರ್ಗ­ಕ್ಕಾಗಿ ನಿರಂತರ ಪ್ರಯತ್ನ ನಡೆಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.