ಗುರುವಾರ , ಏಪ್ರಿಲ್ 15, 2021
24 °C

ಶೀಘ್ರ ರೈತರ ಹೊಲಕ್ಕೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಿನಹಡಗಲಿ: ಬರುವ ಜೂನ್ ತಿಂಗಳೊಳಗೆ ರೈತರ ಹೊಲಗಳಿಗೆ ನೀರು ಕೊಡುವುದಾಗಿ ಮುನಿರಾಬಾದ್‌ನ ತುಂಗಭದ್ರ ಕೇಂದ್ರವಲಯದ ಮುಖ್ಯ ಎಂಜಿನಿಯರ್ ಕೆ.ಬಿ. ದೇವರಾಜ ಹೇಳಿದರು.ತಾಲ್ಲೂಕಿನ ರಾಜವಾಳ್ ಗ್ರಾಮದ ಬಳಿ ಯೋಜಿತವಾಗಿರುವ ಸಿಂಗಟಾಲೂರು ಏತ ನೀರಾವರಿ   ಯೋಜನಾ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.ಒಟ್ಟು 26 ಗೇಟ್‌ಗಳಲ್ಲಿ ಮೂರು ಗೇಟ್‌ಗಳ ಕಾಮಗಾರಿ ಕೆಲಸ ಉಳಿದಿತ್ತು. ಈಗಾಗಲೇ ಆ ಕೆಲಸವೂ ಕೂಡಾ ಸಂಪೂರ್ಣವಾಗಿದೆ ಎಂದರು.ಬಲದಂಡೆಯಲ್ಲಿ ನಿರೆತ್ತುವ ಘಟಕದ ಒಂದು ಕಾಮಗಾರಿ ಸಂಪೂರ್ಣ ಮಗಿದಿದೆ. ಉಳಿದಂತೆ ಈ ಭಾಗದಲ್ಲಿ ಒಂದು ಮತ್ತು ಎಡ ದಂಡೆಯ ಭಾಗದಲ್ಲಿ ಮೂರು ಒಟ್ಟು ನಾಲ್ಕು ಲಿಫ್ಟ್‌ಗಳ ಕಾಮಗಾರಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ ಎಂದರು.12 ಸಾವಿರ ಎಕರೆ ಭೂಮಿಗೆ ಬಲದಂಡೆಯ ಭೂಮಿಗೆ ನೀರನ್ನು ಕೊಡಲಾಗುತ್ತದೆ. ಒಟ್ಟು ಒಂದು ಲಕ್ಷದ 20 ಸಾವಿರ ಎಕರೆ ಭೂಮಿಗೆ ಒಂದು ಮತ್ತು ಎರಡನೇ ಹಂತದಲ್ಲಿ ನೀರನ್ನು ಕೊಡಲಾಗುತ್ತದೆ ಎಂದರು.|ಹಡಗಲಿ, ಗದಗ ಮತ್ತು ಕೊಪ್ಪಳ ಭಾಗಗಳಲ್ಲಿ ಕಾಲುವೆಗಳ ಕೆಲಸ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ ಎಂದರು.3.1 ಟಿ.ಎಂ.ಸಿ.ಯಷ್ಟು ನೀರು ಸಂಗ್ರಹವಾಗಲಿದ್ದು, ಬೇಸಿಗೆ ದಿನಗಳಲ್ಲಿ ಹಡಗಲಿ, ಗದಗ ಮತ್ತು ಕೊಪ್ಪಳ ಭಾಗದ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ದೂರವಾಗಲಿದ್ದಾರೆ ಎಂದು ಹೇಳಿದರು.ಆದಷ್ಟು ಬೇಗನೇ ಕಾಮಗಾರಿಯನ್ನು ಮುಗಿಸಿ ರೈತರ ಹೊಲಗಳಿಗೆ ನೀರು ಕೊಡುವ ಉದ್ದೇಶವನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಕೆಲಸ ನಡೆದಿದೆ ಎಂದರು.ಸಿಂಗಟಾಲೂರು ಏತ-ನೀರಾವರಿ ಯೋಜನೆಯ ಕಾರ್ಯಪಾಲಕ    ಎಂಜಿನಿಯರ್ ಓದುಗಂಗಪ್ಪ, ಡಿವೈಎಸ್‌ಪಿ ಕೃಷ್ಣಮೂರ್ತಿ ಹೊಸಕೋಟಿ ಸ್ಥಳದಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.