ಬುಧವಾರ, ಜೂಲೈ 8, 2020
28 °C

ಶುದ್ಧ ಚಾರಿತ್ರ್ಯ: ಶಿಕ್ಷಕರಿಗೆ ಸ್ವಾಮೀಜಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ‘ಶಿಕ್ಷಕರ ಚಾರಿತ್ರ್ಯ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಶಿಕ್ಷಕರಾದವರು ಶುದ್ಧ ಚಾರಿತ್ರ್ಯ ಹೊಂದಿರಬೇಕು’ ಎಂದು ಜ್ಞಾನಯೋಗಾಶ್ರಮದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿಯ ಅಭಿನವ ಡಿ.ಇಡಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಸಾನಿಧ್ಯ ವಹಿಸಿದ್ದ ಷಣ್ಮುಖಾರೂಢಮಠದ ಶ್ರೀ ಅಭಿನವ ಶಿವಪುತ್ರ ಸ್ವಾಮೀಜಿ, ಇಂದಿನ ಶಿಕ್ಷಣ ಸಂಸ್ಥೆಗಳು ದೇಶಕ್ಕಾಗಿ ಕೊಡುಗೆ ನೀಡುವ ಕೆಲಸ ಮಾಡಬೇಕು. ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿ ಕಾಯಕ, ವರ್ತನೆ, ಶಿಕ್ಷಣ ಮುಂತಾದ ಅಂಶಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ಸಲಹೆ ಮಾಡಿದರು.

ಮುಖ್ಯ ಅತಿಥಿಯಾಗಿದ್ದ ಪ್ರೊ.ಎಸ್.ಜೆ. ಇಜೇರಿ, ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್. ತಂಬಾಕೆ, ಡೈಟ್‌ನ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಆರ್.ಎಸ್. ಬಗಲಿ ಮಾತನಾಡಿದರು.ಎ.ಜಿ. ಪೆಂಡಾರಿ, ಅಭಿನವ ವಿದ್ಯಾ ಸಂಸ್ಥೆಯ ಎನ್.ಎಸ್. ಹಿರೇಮಠ, ಎಲ್.ಟಿ. ಹುಲಮನಿ, ವಿ.ಕೆ. ರಜಪೂತ, ಜೆ.ಎಂ. ಇರಸೂರ, ಎಂ.ಬಿ. ವಾಲಿ, ಆರ್.ಎಲ್. ಬೀಳೂರ, ಬಿ.ಜಿ. ರುದ್ರಾಕ್ಷಿ, ಪಿ.ಎಂ. ಬಳಗಾನೂರ, ಬಿ.ಪಿ. ಉಕ್ಕಲಿ, ಎಸ್.ಜಿ. ಹಡಪದ, ಬಸವರಾಜ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.ಪಿ.ಆರ್. ಡೋಣೂರ ಸ್ವಾಗತಿಸಿದರು. ಉಪನ್ಯಾಸಕ ಎಸ್.ಎಸ್. ಕನ್ನೂರ ಕಾರ್ಯಕ್ರಮ ನಿರೂಪಿಸಿದರು. ಯು.ಎಸ್. ಹಿರೇಮಠ ವಂದಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.