ಶನಿವಾರ, ಜನವರಿ 18, 2020
21 °C

ಶೂಟಿಂಗ್: ಬಿಂದ್ರಾಗೆ ಬಂಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೋಹಾ (ಪಿಟಿಐ): ಅಭಿನವ್ ಬಿಂದ್ರಾ ಇಲ್ಲಿ ಆರಂಭವಾದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.ಬೀಜಿಂಗ್ ಒಲಿಂಪಿಕ್ ಕೂಟದಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಬಿಂದ್ರಾ ಒಟ್ಟು 701.1 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆದರು. ಅವರಿಗೆ ಪ್ರಬಲ ಪೈಪೋಟಿ ನೀಡಿದ ಚೀನಾದ ಜು ಕ್ವಿನನ್ ಬೆಳ್ಳಿ ಗೆದ್ದರೆ, ಚೀನಾದ ಇನ್ನೊಬ್ಬ ಸ್ಪರ್ಧಿ ವಾಂಗ್ ತಾವೊ (699.7) ಕಂಚು ತಮ್ಮದಾಗಿಸಿಕೊಂಡರು.ಬಿಂದ್ರಾ, ಗಗನ್ ನಾರಂಗ್ ಮತ್ತು ಸತ್ಯೇಂದ್ರ ಸಿಂಗ್ ಅವರನ್ನೊಳಗೊಂಡ ಭಾರತವು ತಂಡ ವಿಭಾಗದಲ್ಲಿ (1793/ 1800) ಬೆಳ್ಳಿ ಜಯಿಸಿತು. ಚಿನ್ನದ ಪದಕ ಚೀನಾ ಪಾಲಾಯಿತು.ಜ್ವರದಿಂದ ಬಳಲುತ್ತಿದ್ದ ಬಿಂದ್ರಾ ಅನಾರೋಗ್ಯವನ್ನು ಮೆಟ್ಟಿನಿಂತು ಇಲ್ಲಿ ಪದಕ ಗೆದ್ದ ಸಾಧನೆ ಮಾಡಿದರು. ಅರ್ಹತಾ ಹಂತದಲ್ಲಿ 600 ರಲ್ಲಿ 597 ಪಾಯಿಂಟ್ ಕಲೆಹಾಕಿದ  ಅವರು ಫೈನಲ್‌ನಲ್ಲಿ 104.1 ಪಾಯಿಂಟ್ ಗಳಿಸುವಲ್ಲಿ ಯಶಸ್ವಿಯಾದರು.

ಪ್ರತಿಕ್ರಿಯಿಸಿ (+)