ಶನಿವಾರ, ಮೇ 28, 2022
26 °C

ಶೋಧನಾ ಸಮಿತಿಗೆ ಹಾಲಿ ಕುಲಪತಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತುಮಕೂರು ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ಮೂವರ ಹೆಸರನ್ನು ಶಿಫಾರಸು ಮಾಡಲು ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ಮೀನಾ ಚಂದಾವರಕರ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚಿಸಲಾಗಿದೆ.ಸಾಮಾನ್ಯವಾಗಿ ವಿಶ್ರಾಂತ ಕುಲಪತಿಗಳ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚಿಸಲಾಗುತ್ತದೆ. ಆದರೆ, ಮೊದಲ ಬಾರಿಗೆ ಹಾಲಿ ಕುಲಪತಿಗಳ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚಿಸಲಾಗಿದೆ. ಮತ್ತೊಬ್ಬ ಹಾಲಿ ಕುಲಪತಿ ಡಾ.ಎಂ.ಜಿ.ಕೃಷ್ಣನ್ (ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ) ಸದಸ್ಯರಾಗಿದ್ದಾರೆ.ಹಾಲಿ ಕುಲಪತಿಗಳನ್ನು ಶೋಧನಾ ಸಮಿತಿಗೆ ನೇಮಕ ಮಾಡಿದ ಉದಾಹರಣೆ ಇಲ್ಲ. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಯೂ ಇದೆ. ಸಮಿತಿಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದಲೇ ಇಬ್ಬರು ಕುಲಪತಿಗಳನ್ನು ನೇಮಕ ಮಾಡಿದಂತಿದೆ ಎಂಬ ಮಾತು ಕೇಳಿ ಬರುತ್ತಿದೆ.ವಿಶ್ವವಿದ್ಯಾಲಯ ಅನುದಾನ ಆಯೋಗದ ಪ್ರತಿನಿಧಿಯಾಗಿ ಆನಂದಕೃಷ್ಣ, ಸಿಂಡಿಕೇಟ್ ಪ್ರತಿನಿಧಿಯಾಗಿ ಬ್ಯಾಥ್ಯೂಸ್ ಅವರು ಶೋಧನಾ ಸಮಿತಿಯಲ್ಲಿ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.