ಕಾರವಾರ: ಜಿಲ್ಲೆಯಾದ್ಯಂತ ಶಾಲಾ ಶ್ರದ್ಧಾ ವಾಚಾನಾಲಯ ಬುಧವಾರ ನಡೆಯಿತು. ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಗ್ರಂಥಾಲಯಕ್ಕೆ ~ಶಾಲಾ ಶ್ರದ್ಧಾ ವಾಚಾನಾಲಯ~ ಎಂದು ನಾಮಕರಣ ಮಾಡಿದರು. ಬೆಳಿಗ್ಗೆ 11ರಿಂದ 11. 30ರ ವರೆಗೆ ವಿದ್ಯಾರ್ಥಿಗಳು ತಮಗಿಷ್ಟವಿರುವ ಕಥೆ, ಕವನ, ಕಾದಂಬರಿ, ಕವಿತೆಗಳನ್ನು ಓದಿದರು.

ಭಟ್ಕಳ ತಾಲ್ಲೂಕಿನ ಮಾವಿನಕುರ್ವೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್ಡಿಎಮ್ಸಿ ಅಧ್ಯಕ್ಷ ಮಂಜುನಾಥ ಖಾರ್ವಿ ಉದ್ಘಾಟಿಸಿದರು.

`ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ಜ್ಞಾನದ ಮಟ್ಟ ಬೆಳೆಯುತ್ತದೆ. ನೀವು ಓದುವುದರೊಂದಿಗೆ ಇತರರಿಗೂ ಪುಸ್ತಕ ಓದು ಅಭಿರುಚಿಯನ್ನು ಮೂಡಿಸಬೇಕು~ ಎಂದರು.

`ಹಿಂದೆ ಶಾಲೆಯಲ್ಲಿರುವ ಪುಸ್ತಕದ ಕಪಾಟಿಗೆ ಬೀಗ ಹಾಕಿಡಲಾಗುತ್ತಿತ್ತು. ಆದರೆ ಈಗ ಸದಾ ತೆರೆದಿರುತ್ತದೆ. ಯಾವಾಗ ಬೇಕಾದರೂ ಬಂದು ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಬಹುದಾಗಿದೆ. ಒಳ್ಳೆಯ ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಿ~ ಎಂದು ಅವರು ವಿದ್ಯಾರ್ಥಿಗಳಿ ಕಿವಿಮಾತು ಹೇಳಿದರು.

ಅನಿಸಿಕ ಹಂಚಿಕೊಂಡ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಚಂದನಾ ನಾಯ್ಕ `ಪುಸಕ್ತ ಓದುವ ಅಭಿರುಚಿಯನ್ನು ನಾನು ಬೆಳೆಸಿಕೊಳ್ಳುತ್ತೇನೆ. ಉತ್ತಮ ಪುಸ್ತಕಗಳನ್ನು ಓದುವುದರಿಂದ ನಮ್ಮ ಜ್ಞಾನವೂ ವೃದ್ಧಿಯಾಗುತ್ತದೆ~ ಎಂದಳು.

ಸಹ ಶಿಕ್ಷಕಿ ದೇವಕಿ ಪಟಗಾರ, ಕಾಂಚನಾ ನಾಯ್ಕ, ಟಿ.ಡಿ.ಗೊಂಡ, ಲೀಲಾವತಿ ನಾಯ್ಕ ಹಾಜರಿದ್ದರು.

ಹಚ್ಚಿರಿ ಜ್ಞಾನದ ದೀವಿಗೆ...
ಶಿರಸಿ: ಶಾಲಾ ವಾಚನಾಲಯಗಳನ್ನು ಅಭಿವೃದ್ಧಿ ಹಾಗೂ ಬಲಪಡಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ತೆಗೆಯಿರಿ ಪುಸ್ತಕ ಹೊರಗೆ, ಹಚ್ಚಿರಿ ಜ್ಞಾನದ ದೀವಿಗೆ ಘೋಷವಾಕ್ಯದೊಂದಿಗೆ ಬುಧವಾರ ಹಮ್ಮಿಕೊಂಡ ಶಾಲಾ ಶ್ರದ್ಧಾ ವಾಚನಾಲಯ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ ಅರ್ಧ ಗಂಟೆ ವಿದ್ಯಾರ್ಥಿಗಳು ಮೌನವಾಗಿ ಕನ್ನಡ ಪುಸ್ತಕಗಳನ್ನು ಓದಿದರು. ಬೆಳೆಗ್ಗೆ 11 ಗಂಟೆಯಿಂದ 11.30ರವರೆಗೆ ಕನ್ನಡ ನಾಡು, ಭಾಷೆ, ಕಲೆ, ಸಂಸ್ಕೃತಿ, ಇತಿಹಾಸ ಬಿಂಬಿಸುವ ಪುಸ್ತಕಗಳನ್ನು ವಿದ್ಯಾರ್ಥಿಗಳು ಗಂಭೀರವಾಗಿ ಓದಿದರು.

ಮೌನವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳಿಯ ಸಾಹಿತ್ಯಾಸಕ್ತರು ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಓದುವ ಬಗೆಯನ್ನು ವಿವರಿಸಿದರು.

ಪೂರ್ವಭಾವಿಯಾಗಿ ಶಾಲೆಗಳಲ್ಲಿ ಲಭ್ಯವಿರುವ ಗ್ರಂಥಾಲಯ ಪುಸ್ತಕಗಳು, ಇತರೆ ಮೂಲ ಮತ್ತು ದಾನಿಗಳಿಂದ ಪಡೆಯಲಾಗಿರುವ ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಿ ~ಶಾಲಾ ಶ್ರದ್ಧಾ ವಾಚನಾಲಯ~ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಗಿತ್ತು.

ಈ ವೇಳೆ ಜನಪ್ರತಿನಿಧಿಗಳು, ಪೋಷಕರು ಶಾಲಾ ಎಸ್.ಡಿ.ಎಮ್.ಸಿ ಸದಸ್ಯರು ಹಾಜರಾಗಿ ಮೌನ ಓದು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕದ ಓದುವ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.

`ಓದಿನಿಂದ ಅನುಭವ~
ಸಿದ್ದಾಪುರ: `ಒಂದು ಪುಸ್ತಕ ಓದುವುದರೆಂದರೇ ಆ ಪುಸ್ತಕದ ಲೇಖಕರ ಅನುಭವವನ್ನು ನಮ್ಮದಾಗಿಸಿಕೊಳ್ಳುವುದು~ ಎಂದು ಪ.ಪಂ.ಸದಸ್ಯ ಗುರುರಾಜ ಶಾನಭಾಗ ಅಭಿಪ್ರಾಯಪಟ್ಟರು.

ಪಟ್ಟಣದ ಬಾಲಿಕೊಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಶ್ರದ್ಧಾ ವಾಚನಾಲಯದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿದ್ದ ಸಾಹಿತಿ ಆರ್.ಕೆ. ಹೊನ್ನೇಗುಂಡಿ, ನಿವೃತ್ತ ಮುಖ್ಯಶಿಕ್ಷಕ ಕೆ.ಜಿ.ಚೆನ್ನಯ್ಯನ್ ಮತ್ತು ಸಾಮಾಜಿಕ ಕಾರ್ಯಕರ್ತ ರಘುರಾಮ ಹೆಗಡೆ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಸತೀಶ ಕೊಡಿಯಾ ಅಧ್ಯಕ್ಷತೆ ವಹಿಸಿದ್ದರು. ಸುಜಾತಾ ಶಾನಭಾಗ ನಿರೂಪಿಸಿದರು.

ಹಾರ್ಸಿಕಟ್ಟ: ಯಾಂತ್ರಿಕ ಜೀವನ ಶೈಲಿಯಿಂದ ಓದುವ ಹವ್ಯಾಸ ಕಡಿಮೆಯಾಗಿದೆ ಎಂದು ಯಕ್ಷಗಾನ ಪ್ರಸಂಗ ಕರ್ತ ವಿಶ್ವನಾಥ ಶೇಟ್ ಹಾರ್ಸಿಕಟ್ಟ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಶ್ರದ್ಧಾ ವಾಚನಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಇಒ ಬಿ.ವಿ.ನಾಯ್ಕ,ಗ್ರಾ.ಪಂ. ಉಪಾಧ್ಯಕ್ಷ ಎ.ಜಿ.ಹೆಗಡೆ ಹಿರೇಕೈ, ಪತ್ರಕರ್ತ ರಮೇಶ ಹಾರ್ಸಿಮನೆ ಮಾತನಾಡಿದರು. ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಶಶಿಧರ ಪಾಟೀಲ ವಹಿಸಿದ್ದರು.

ಮುಖ್ಯ ಶಿಕ್ಷಕಿ ಲೀಲಾವತಿ ಹೆಗಡೆ ಸ್ವಾಗತಿಸಿದರು. ಶಾಂತಿ ಭಾಗವತ ವಂದಿಸಿದರು.ರಾಮನಾಥ ನಾಯ್ಕ ನಿರೂಪಿಸಿದರು.

ಕಾಂವಚೂರು: ಕಾಂವಚೂರಿನ ಮಲೆನಾಡ ಪ್ರೌಢಶಾಲೆಯಲ್ಲಿ ಶ್ರದ್ಧಾ ವಾಚನಾಲಯ ಕಾರ್ಯಕ್ರಮ ಬುಧವಾರ ನಡೆಯಿತು.

ಮುಖ್ಯ ಶಿಕ್ಷಕ ಜಿ.ಜಿ.ಹೆಗಡೆ ಬಾಳಗೋಡು ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕರಾದ ಎಲ್.ಐ.ನಾಯ್ಕ ಗೋಳಗೋಡು, ಸ್ವರ್ಣಲತಾ ಶಾನಭಾಗ, ಕೆ.ಎಲ್.ಗಾಯತ್ರಿ, ಗಂಗಮ್ಮ,ಬಿ.ಜಿ.ನಾಯ್ಕ ಮತ್ತು ಹೇರಂಬ ಮಾತನಾಡಿದರು.

ಬಿಳಗಿ ಪ್ರೌಢಶಾಲೆ: ತಾಲ್ಲೂಕಿನ ಬಿಳಗಿಯ ಸೀತಾರಾಮಚಂದ್ರ ಪ್ರೌಢಶಾಲೆಯಲ್ಲಿ ಶ್ರದ್ಧಾ ವಾಚನಾಲಯದ ಉದ್ಘಾಟನೆ ಬುಧವಾರ ನಡೆಯಿತು. ಮುಖ್ಯ ಶಿಕ್ಷಕ ರತ್ನಾಕರ ಪಾಲೇಕರ ಮಾತನಾಡಿದರು.ಸಹಶಿಕ್ಷಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

`ಮಕ್ಕಳಲ್ಲಿ ವಾಚನಾಭಿರುಚಿ ಅಗತ್ಯ~
ಅಂಕೋಲಾ: ತಾಲ್ಲೂಕಿನ ವಿವಿಧ ಪ್ರಾಥಮಿಕ ಶಾಲೆಗಳಲ್ಲಿ ಬುಧವಾರ ಶಾಲಾ ಶ್ರದ್ಧಾ ವಾಚನಾಲಯಗಳಿಗೆ ಚಾಲನೆ ನೀಡಲಾಯಿತು.

ಸಮೀಪದ ಬಿಳಿಹೊಂಯ್ಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕರಾವಳಿ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಘಟಕದ ಅಧ್ಯಕ್ಷ ಎಸ್.ಆರ್. ಉಡುಪಿ `ಶಾಲಾ ಮಕ್ಕಳಲ್ಲಿ ವಾಚನಾಭಿರುಚಿಯನ್ನು ಮೂಡಿಸುವುದು ಅಗತ್ಯವಿದೆ.

ದೂರದರ್ಶನ ಚಾನೆಲ್ಗಳ ಮೋಹದಲ್ಲಿ ಸಿಲುಕಿದ ಮಕ್ಕಳು ಪುಸ್ತಕ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದಾರೆ~ ಎಂದು ಕಳವಳ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಸಂಜಯ ಅರುಂಧೇಕರ ಶಾಲಾ ವಾಚನಾಲಯಕ್ಕೆ ಪುಸ್ತಕಗಳನ್ನು ಇಟ್ಟುಕೊಳ್ಳಲು ಫೈಬರ್ ಕಪಾಟನ್ನು ದೇಣಿಗೆಯಾಗಿ ನೀಡಿದರು. ಎಸ್.ಜಿ. ಭಟ್, ಜಿ.ಎಮ್. ಹೆಗಡೆ, ಕೃಷ್ಣ ಹುಲಸ್ವಾರ, ಅರವಿಂದ ನಾಯಕ, ಎಂ.ಎನ್. ನಾಯ್ಕ, ಎಸ್ಡಿಎಂಸಿ ಅಧ್ಯಕ್ಷೆ ನೀಲಾಹರಿಕಂತ್ರ ಉಪಸ್ಥಿತರಿದ್ದರು.

ಶಿಕ್ಷಕ ಗೋಪಾಲಕೃಷ್ಣ ನಾಯಕ ಸ್ವಾಗತಿಸಿದರು. ನಾರಾಯಣ ನಾಯಕ ನಿರೂಪಿಸಿದರೆ, ಸುಗಂಧಾ ಹರಿಕಂತ್ರ ವಂದಿಸಿದರು.

ಕೆಎಲ್ಇ ಶಾಲೆ: ಕೆಎಲ್ಇ ಸಂಸ್ಥೆಯ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಲಾ ಶ್ರದ್ಧಾ ವಾಚನಾಲಯವನ್ನು ಆರಂಭಿಸಲಾಯಿತು.

ಕಾರವಾರ ಇಸಿಒ ಚಂದ್ರಕಾಂತ ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಸ್.ವಿ. ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಮುಖ್ಯ ಶಿಕ್ಷಕಿ ಗಿರಿಜಾ ಎಂ. ಕರ್ಕಿಕರ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಮೋಹನದಾಸ ಕರ್ಕಿಕರ, ಶಿಕ್ಷಕರಾದ ಮುಷ್ಟೂರಪ್ಪ, ಮುದ್ದಣ್ಣ, ಲತಾಬಾಯಿ ಮುಂತಾದವರು ಸಹಕರಿಸಿದರು. ನಾಗರಾಜ ಸರೂರ ನಿರೂಪಿಸಿದರು.

`ಓದಿನಿಂದ ಸಂಸ್ಕಾರ ಲಭ್ಯ~
ಕುಮಟಾ: ತಾಲ್ಲೂಕಿನ ನೆಲ್ಲಿಕೇರಿ ಶಾಸಕರ ಮಾದರಿ ಶಾಲೆಯಲ್ಲಿ ಬುಧವಾರ ನಡೆದ `ಶಾಲಾ ಶ್ರದ್ಧಾ ವಾಚನಾಲಯ~ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಾಲಾ ಗ್ರಂಥಾಲಯದಿಂದ ತಮಗಿಷ್ಟದ ಪುಸ್ತಕಗಳನ್ನು ತೆಗೆದುಕೊಂಡು ಮೌನವಾಗಿ ಓದಿದರು.

ಶಾಲೆಯ ಸಭಾ ಭವನದಲ್ಲಿ ಕುಳಿತ ವಿದ್ಯಾರ್ಥಿಗಳು ತಮಗಿಷ್ಟವಾದ ವಿಷಯಗಳ ಪುಸ್ತಕ ತೆಗೆದುಕೊಂಡು ಅರ್ಧ ಗಂಟೆಗಳ ಕಾಲ ಮೌನವಾಗಿ ಓದಿದರು. ಹಳ್ಳಿಯ ಚಿತ್ರಗಳು, ಭಗವದ್ಗೀತೆ, ರಸಪ್ರಶ್ನೆ, ಭರಧ್ವಜ, ಮಕ್ಕಳ ಮಹಾಭಾರತ, ವಾಸವಿ, ಮದಕರಿ ನಾಯಕ, ಶಾರದಾ ದೇವಿ, ಒನಕೆ ಓಬವ್ವ, ಕೋಟಿ-ಚೆನ್ನಯ್ಯ, ಭೀಷ್ಮ, ಕುಮಟಾ ತಾಲ್ಲೂಕು ದರ್ಶನ , ಗೋವಿನ ಹಾಡು, ಕೆರೆಗೆ ಹಾರ~ ಮುಂತಾದ ಪುಸ್ತಕಗಳನ್ನು ವಿದ್ಯಾರ್ಥಿಗಳ ಕೈಯ್ಲ್ಲಲಿದ್ದುದು ವಿಶೇಷವಾಗಿತ್ತು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಕವಿ ಬಿ.ಎ.ಸನದಿ, ` ಶಾಲೆಯಲ್ಲಿ ದಿನಾಲೂ ಅರ್ಧ ಗಂಟೆ ಕಾಲ ಗ್ರಂಥಾಲಯದಲ್ಲಿರುವ ನಮ್ಮ ಪ್ರೀತಿಯ ಪುಸ್ತಕಗಳನ್ನು ಶ್ರದ್ಧೆಯಿಂದ ಓದುವುದರಿಂದ ನಮ್ಮ ಜೀವನದಲ್ಲಿ ಸಂಸ್ಕಾರ ಅಳವಡಿಸಿಕೊಳ್ಳು ಸಾಧ್ಯ~ ಎಂದರು. ಬರಹಗಾರ ತಿಗಣೇಶ ಮಾಗೋಡ, ಎಸ್ಡಿಎಂಸಿ ಅಧ್ಯಕ್ಷ ಗೋಪಾಲ ಹೆಗಡೆ, ಶಿಕ್ಷಕರಾದ ಕೇಶವ ನಾಯ್ಕ, ನಾಗರಾಜ ಕೊಡಿಯಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮಂಗಲಾ ನಾಯಕ ಸ್ವಾಗತಿಸಿದರು.

`ಒಳ್ಳೆಯ ಪುಸ್ತಕ ಒಬ್ಬ ಮಿತ್ರನಂತೆ~
ದಾಂಡೇಲಿ: ಇಲ್ಲಿಯ ಕೆನರಾ ವೆಲ್ಫೇರ್ ಟ್ರಸ್ಟಿನ ಜನತಾ ವಿದ್ಯಾಲಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಬುಧವಾರ ಶ್ರದ್ಧಾವಾಚನಾ ಕಾರ್ಯಕ್ರಮಕ್ಕೆ ಪ್ರಾಚಾರ್ಯ ಎಂ.ಎಸ್.ಲಮಾಣಿ ವಿದ್ಯಾದೇವತೆ ಶಾರದಾಂಬೆಯ ಭಾವಚಿತ್ರಕ್ಕೆ ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಮುಖ್ಯ ಶಿಕ್ಷಕಿ ರಾಧಿಕಾ ಹೊನ್ನಾವರ ಮಾತನಾಡಿ, `ಜೀವನದಲ್ಲಿ ಓದಿನ ಮಹತ್ವವನ್ನು ಅರಿತ ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತ ಮಟ್ಟದ ಸಾಧನೆ ಗೈದಿದ್ದಾರೆ. ಸಾಹಿತ್ಯ, ವಿಜ್ಞಾನ ಹಾಗೂ ಇನ್ನಿತರ ಸಾಮಾಜಿಕ ಕ್ಷೇತ್ರಗಳಲ್ಲಿ ಮೇರು ವ್ಯಕ್ತಿತ್ವದ ಎಲ್ಲ ಸಾಧಕರ ಸಾಧನೆಯ ಹಿನ್ನಲೆ ಅವರು ಓದಿನಲ್ಲಿ ತೋರಿದ ಆಸಕ್ತಿಯ ಆಧಾರವನ್ನು ಪಡೆದಿದೆ. ಒಂದು ಒಳ್ಳೆಯ ಪುಸ್ತಕ ಒಬ್ಬ ಮಿತ್ರನ ಸ್ಥಾನವನ್ನು ತುಂಬಿಕೊಡುತ್ತದೆ. ಆದ್ದರಿಂದ ಓದಿನ ಹವ್ಯಾಸದ ಬಗ್ಗೆ ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯನ್ನು ತೋರಿಸುವ ಅಗತ್ಯವಿದೆ~ ಎಂದರು.

ಮಕ್ಕಳು ಹಾಗೂ ಶಿಕ್ಷಕರಲ್ಲಿ ಗ್ರಂಥಾಲಯದ ಸದ್ಭಳಕೆ ಹಾಗೂ ಓದಿನ ನೈಜ ಅರಿವನ್ನು ಮೂಡಿಸುವ ಉದ್ದೇಶದಿಂದ `ತೆರೆಯಿರಿ ಪುಸ್ತಕ ಹೊರಗೆ: ಹಚ್ಚಿರಿ ಜ್ಞಾನ ದೀವಿಗೆ~ ಎಂಬ ಇಲಾಖೆಯ ಉದ್ದೇಶಿತ ವಿನೂತನ ಕಾರ್ಯಕ್ರಮದ ಹಿನ್ನಲೆಯಲ್ಲಿ ಮಹಾವಿದ್ಯಾಲಯದ ಎಲ್ಲ ವರ್ಗಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರಿಂದ ಆಯ್ದ ಪುಸ್ತಕಗಳ ಮೌನ ವಾಚನ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.