ಬ್ಯಾಂಕಾಕ್ (ಪಿಟಿಐ): ಅಚ್ಚರಿ ಹಾಗೂ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಭಾರತದ ಕೆ.ಶ್ರೀಕಾಂತ್ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆದರು.

ಆಂಧ್ರಪ್ರದೇಶದ ಶ್ರೀಕಾಂತ್ ಅವರ ಬ್ಯಾಡ್ಮಿಂಟನ್ ಜೀವನದ ಅತ್ಯುತ್ತಮ ಸಾಧನೆ ಇದಾಗಿದೆ. ಶ್ರೀಕಾಂತ್ ಭಾನುವಾರ ನಡೆದ ಫೈನಲ್ನಲ್ಲಿ ಥಾಯ್ಲೆಂಡ್ನ ಬೂನ್ಸಾಕ್ ಪೋನ್ಸಾನ ಅವರನ್ನು 21-16, 21-12ರಲ್ಲಿ ಮಣಿಸುವ ಮೂಲಕ ಸಿಂಗಲ್ಸ್ ಟ್ರೋಪಿಯನ್ನು ಗೆದ್ದರು. 13ನೇ ಶ್ರೇಯಾಂಕದ ಆಟಗಾರ ಈ ಗೆಲುವಿಗಾಗಿ ಕೇವಲ 34 ನಿಮಿಷ ತೆಗೆದುಕೊಂಡರು.

ಈ ಪಂದ್ಯದ ಮೊದಲ ಗೇಮ್ನಲ್ಲಿ ಭಾರತದ ಆಟಗಾರ ಆರಂಭದಲ್ಲಿಯೇ ಮುನ್ನಡೆ ಸಾಧಿಸಿದರು. ಆದರೆ ತಿರುಗೇಟು ನೀಡಲು ಪ್ರಯತ್ನಿಸಿದ ಬೂನ್ಸಾಕ್ ಪೋನ್ಸಾನ ಅವರನ್ನು ಸುಲಭವಾಗಿ ಮಣಿಸಿದರು. ಆಕರ್ಷಕ ಸ್ಮ್ಯಾಷ್ಗಳ ಮೂಲಕ ಮಿಂಚಿದ 20ರ ಹರೆಯದ ಶ್ರೀಕಾಂತ್ 21-16, 21-1 ಪಾಯಿಂಟ್ನಿಂದ ಮುನ್ನಡೆ ಸಾಧಿಸಿದರು.

ಶನಿವಾರ ನಡೆದ ಸೆಮಿಫೈನಲ್ನಲ್ಲಿ ಶ್ರೀಕಾಂತ್ 21-14, 21-18ರಲ್ಲಿ ಸ್ಥಳೀಯ ಆಟಗಾರ ಥಾಮಸಿನ್ ಸಿಥಿಕೋಮ್ ಅವರನ್ನು ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.