ಶುಕ್ರವಾರ, ಜೂನ್ 25, 2021
26 °C

ಶ್ರೀರಂಗಪಟ್ಟಣ: 100 ಅಪೌಷ್ಟಿಕ ಮಕ್ಕಳು ಪತ್ತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ವೆ ನಡೆಸಿದ್ದು, ಒಂದ ರಿಂದ 6 ವರ್ಷ ವಯೋಮಿತಿಯ 100 ಮಕ್ಕಳು ಅಪೌಷ್ಟಿಕತೆಯಿಂದ ಬಳಲು ತ್ತಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪಟ್ಟಿ ತಯಾರಿಸಿದೆ.ತಾಲ್ಲೂಕಿನ ಬೆಳಗೊಳ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಹೆಚ್ಚು ಅಂದರೆ ಒಟ್ಟು 25 ಮಕ್ಕಳು ಅಪೌಷ್ಟಿ ಕತೆಯಿಂದ ಬಳಲುತ್ತಿವೆ. ನಂತರದಲ್ಲಿ ಶ್ರೀರಂಗಪಟ್ಟಣ ಇದ್ದು ಇಲ್ಲಿ 17 ಮಕ್ಕಳು ಅಪೌಷ್ಟಿಕತೆಯಿಂದ ನರಳು ತ್ತಿವೆ. ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಇಂತಹ 14 ಮಕ್ಕಳಿದ್ದಾರೆ.ಪಾಲಹಳ್ಳಿಯಲ್ಲಿ 13, ಮಹದೇವಪುರದಲ್ಲಿ 11, ಅರಕೆರೆಯಲ್ಲಿ 11, ಕೊಡಿಯಾಲದಲ್ಲಿ 5 ಮತ್ತು ಟಿ.ಎಂ.ಹೊಸೂರು ವ್ಯಾಪ್ತಿಯಲ್ಲಿ 4 ಮಕ್ಕಳು ಪೌಷ್ಟಿಕ ಆಹಾರದ ಕೊರತೆ ಎದುರಿಸುತ್ತಿವೆ ಎಂಬುದು ವರದಿಂದ ಖಚಿತವಾಗಿದೆ. ಬಡ, ಕೂಲಿಕಾರರ ಕುಟುಂಬದಲ್ಲಿ ಇಂತಹ ಹೆಚ್ಚು ಮಕ್ಕಳು ಇದ್ದಾರೆ.ದೈಹಿಕ ಮತ್ತು ಮಾನಸಿಕ ಬೆಳವಣಿಗೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದಿರುವುದು ಹಾಗೂ ನೀರಸ ಚಟು ವಟಿಕೆ ಈ ಮಕ್ಕಳ ಲಕ್ಷಣ ವಾಗಿದ್ದು, ಸಕಾಲಕ್ಕೆ ಔಧೋಪಚಾರ ಮಾಡದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಉಂಟಾಗುವ ಅಪಾಯ ಇರುತ್ತದೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಮಂಜುನಾಥ್ ಹೇಳಿದರು.ತೀವ್ರತರವಾದ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ `ಬಾಲ ಸಂಜೀವಿನಿ~ ಯೋಜನೆಯಡಿ ಬೆಂಗಳೂರಿನ 5 ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾ ಗುತ್ತದೆ. ಆರಂಭಿಕ ಹಂತದ ಅಪೌಷ್ಟಿಕತೆ ಇರುವ ಮಕ್ಕಳಿಗೆ ರೂ.750 ವರೆಗೆ ಉಚಿತ ಔಷಧ ಕೊಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ಕೂಡ ವಿತರಿಸಲಾ ಗುತ್ತದೆ ಎಂದು  ಇಲಾಖೆ ಮೇಲ್ವಿಚಾರಕಿ ಶಿವಮ್ಮ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.