ಶುಕ್ರವಾರ, ಜುಲೈ 30, 2021
20 °C

ಶ್ರೇಷ್ಠ ಕಲೆ ಬೆಳೆಸಿಕೊಳ್ಳಿ: ಪಟ್ಟಣಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: ಛಾಯಾಗ್ರಾಹಕರು ತಮ್ಮ ಕ್ಯಾಮೆರಾದಲ್ಲಿ ಸುತ್ತಲಿನ ಐತಿಹಾಸಿಕ ಪರಂಪರೆ ಮತ್ತು ಪರಿಸರವನ್ನು ಸೆರೆ ಹಿಡಿದು ಪ್ರವಾಸಿಗರಿಗೆ ನಾಡಿನ ಪರಂಪರೆಯನ್ನು ವಿಶ್ವಕ್ಕೆ ತಿಳಿಸುವ ಕಾರ್ಯವನ್ನು ಕೈಕೊಳ್ಳಬೇಕೆಂದು ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹೇಳಿದರು.ಅವರು ಇಲ್ಲಿನ ವೀರಪುಲಿಕೇಶಿ ಗ್ರಂಥಾಲಯದಲ್ಲಿ ಶನಿವಾರ ತಾಲ್ಲೂಕು ಮಟ್ಟದ ಛಾಯಾಚಿತ್ರ ಗ್ರಾಹಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಸುತ್ತಲಿನ ನಿಸರ್ಗ ಸೌಂದರ್ಯ ಬೆಟ್ಟಗಳು ಹಾಗೂ ಬೆಟ್ಟದ ಮೇಲಿಂದ ಧುಮ್ಮಿಕ್ಕುವ ಜಲಪಾತಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ನಾಡಿನ ಜನರಿಗೆ ಸ್ಥಳೀಯ ಸಂಪನ್ಮೂಲವನ್ನು ತಿಳಿಸುವ ಪ್ರಯತ್ನ ಮಾಡಬೇಕು ಎಂದು ನುಡಿದರು.ಚಾಲುಕ್ಯರ ನಾಡಿನ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಹಾಕೂಟ ಸ್ಮಾರಕಗಳು ಹಾಗೂ ಬನಶಂಕರಿ, ಶಿವಯೋಗಮಂದಿರ, ಹುಲಿಗೆಮ್ಮನಕೊಳ್ಳ ದೇವಾಲಯಗಳು ಛಾಯಾಗ್ರಾಹಕರಿಗೆ ಶ್ರೇಷ್ಠ ತಾಣಗಳಿವೆ.ಛಾಯಾಚಿತ್ರ ಗ್ರಾಹಕರು ಉತ್ತಮ ಚಿತ್ರವನ್ನು ತೆಗೆಯುವುದರ ಮೂಲಕ ಕಲೆಯನ್ನು ಬೆಳೆಸಿಕೊಳ್ಳಿರಿ ಎಂದ ಅವರು ಛಾಯಾಚಿತ್ರ ಗ್ರಾಹಕರ ಸಂಘಕ್ಕೆ ಪುರಸಭೆಯ ನಿವೇಶನವನ್ನು ಮಂಜೂರು ಮಾಡುವುದಾಗಿ ತಿಳಿಸಿದರು.ವೀರಪುಲಿಕೇಶಿ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಎ.ಸಿ. ಪಟ್ಟಣದ ಛಾಯಾಚಿತ್ರ ಗ್ರಾಹಕರಿಗೆ ಗುರುತಿನ ಪತ್ರವನ್ನು ವಿತರಿಸಿದರು. ಡಾ. ಎಸ್.ಐ. ಪತ್ತಾರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಅವರು ಛಾಯಾಚಿತ್ರದ ಇತಿಹಾಸದ ಬಗ್ಗೆ ವಿವರಿಸಿದರು.ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘದ ಅಧ್ಯಕ್ಷ ಬಿ.ಎಸ್. ಶಶಿಧರ ಅವರು ಛಾಯಾಚಿತ್ರಗ್ರಾಹಕರ ಸಮಸ್ಯೆಗಳಿಗೆ ಸ್ಫಂದಿಸಿ ರಾಜ್ಯ ಸರ್ಕಾರ ಛಾಯಾಚಿತ್ರ ಅಕಾಡೆಮಿ ಸ್ಥಾಪಿಸಿಬೇಕೆಂದು ಒತ್ತಾಯಿಸಿದರು. ಶಿವಪೂಜಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಪುರಸಭೆ ಅಧ್ಯಕ್ಷೆ ಶಾಂತಮ್ಮ ಅಮರಗೋಳ, ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸದಾನಂದ ಹಿರೇಮಠ, ಸಿಪಿಐ ಆರ್.ಎಸ್. ಪಾಟೀಲ, ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘದ ಕಾರ್ಯದರ್ಶಿ ಎಸ್. ಪರಮೇಶ್ವರ, ನಿರ್ದೇಶಕ ವಿ.ಎಸ್. ಕಾಶಿನಾಥ ವೇದಿಕೆಯಲ್ಲಿದ್ದರು. ತಾಲ್ಲೂಕಿನ ಎಲ್ಲ ಛಾಯಾಚಿತ್ರಗ್ರಾಹಕರು ಹಾಜರಿದ್ದರು.ತಾಲ್ಲೂಕಾ ಛಾಯಾಚಿತ್ರ ಗ್ರಾಹಕರ ಸಂಘದ ಅಧ್ಯಕ್ಷ ಸಂಗಮೇಶ ಚೌದ್ರಿ ಸ್ವಾಗತಿಸಿದರು. ಇಷ್ಟಲಿಂಗ ಶಿರಸಿ ನಿರೂಪಿಸಿದರು.ಶಿವು ಕಿರಗಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.