ತಮಿಳು ಚಿತ್ರ `ಅರಣ್ಯ ಕಂದಂ~ಗೆ ಪ್ರಶಸ್ತಿ
ಲಂಡನ್ (ಪಿಟಿಐ): ಇಲ್ಲಿ ನಡೆಯುತ್ತಿರುವ ಭಾರತೀಯ ಚಲನಚಿತ್ರೋತ್ಸವದಲ್ಲಿ ಪಾಶ್ಚಿಮಾತ್ಯ ಪ್ರೇಕ್ಷಕರ ಸಂಘದ ಪ್ರಶಸ್ತಿ (ವೆಸ್ಟರ್ನ್ ಯೂನಿಯನ್ ಆಡಿಯೆನ್ಸ್ ಅವಾರ್ಡ್) ಯನ್ನು ತ್ಯಾಗರಾಜನ್ ಕುಮಾರರಾಜ ನಿರ್ದೇಶನದ ತಮಿಳು ಚಿತ್ರ `ಅರಣ್ಯ ಕಂದಂ~ಗೆ ನೀಡಲಾಗಿದೆ. ಜಾಕಿ ಶ್ರಾಫ್, ಸಂಪತ್ರಾಜ್, ಯಾಸ್ಮಿನ್ ಪೊನ್ನಪ್ಪ ಹಾಗೂ ರವಿ ಕೃಷ್ಣ ಈ ಚಿತ್ರದ ತಾರಾಗಣದಲ್ಲಿದ್ದಾರೆ.

ಈ ವರ್ಷದ ಚಲನಚಿತ್ರೋತ್ಸವದಲ್ಲಿ ಸತ್ಯಜಿತ್ ರೇ ಪ್ರತಿಷ್ಠಾನದ ಕಿರುಚಿತ್ರ ಪ್ರಶಸ್ತಿ ಹಾಗೂ 1,000 ಪೌಂಡ್ ಬಹುಮಾನವನ್ನು ನೀರಜ್ ಗೇಯ್ವಾನ್ ಅವರ `ಶೋರ್~ ಚಿತ್ರ ಗೆದ್ದುಕೊಂಡಿದೆ.

ಅರ್ಜೆಂಟೈನಾ ಸರ್ವಾಧಿಕಾರಿಗಳಿಬ್ಬರಿಗೆ ಜೈಲುಶಿಕ್ಷೆ
ಬ್ಯೂನಸ್ ಐರಿಸ್ (ಎಪಿ):  70ರ ದಶಕದಲ್ಲಿ ಅರ್ಜೆಂಟೈನಾದಲ್ಲಿ ನಡೆದ 30 ಶಿಶುಗಳ ಕಳ್ಳತನ ಹಾಗೂ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಮಾಜಿ ಸರ್ವಾಧಿಕಾರಿಗಳಾದ ರಾಫೆಲ್ ವಿಡೆಲಾ ಮತ್ತು ರ್ಯಾನೆಲ್ಡೊ ಬಿಗಾನ್ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

1976ರಿಂದ 1983ರವರೆಗೆ (ಪ್ರಜಾಪ್ರಭುತ್ವ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ) ಇವರು ಹಲವು ಅಪರಾಧ ಪ್ರಕರಣಗಳನ್ನು ನಡೆಸಿದ್ದರು. 86 ವಯಸ್ಸಿನ ವಿಡೆಲಾ ಅವರಿಗೆ 50 ವರ್ಷ ಮತ್ತು ಬಿಗಾನ್ ಅವರಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕೆನಡಾ: ವಲಸಿಗರಿಗೆ ಉದ್ಯೋಗ ನಿರಾಕರಣೆ ಶಾಸನ
ಒಟ್ಟಾವಾ (ಪ್ರೆನ್ಸಾ ಲ್ಯಾಟಿನಾ): ಕೆನಡಾದ ವಿವಿಧ ಕಂಪನಿಗಳಲ್ಲಿ ದುಡಿಯುತ್ತಿರುವ ಸುಮಾರು 3 ಲಕ್ಷ ವಿದೇಶಿ ಕೆಲಸಗಾರರನ್ನು ಉದ್ಯೋಗದಿಂದ ತೆರವುಗೊಳಿಸುವ ಶಾಸನವನ್ನು ಸರ್ಕಾರ ಅಂಗೀಕರಿಸಿದೆ.

ಕಾಶ್ಮೀರಿ ಜನತೆಗೆ ಪಾಕ್ ಪ್ರಧಾನಿ ಅಶ್ರಫ್ ಅಭಯ
ಇಸ್ಲಾಮಾಬಾದ್ (ಐಎಎನ್ಎಸ್): ಕಾಶ್ಮೀರ ವಿವಾದದ ಕುರಿತು ವಿಶ್ವಸಂಸ್ಥೆಯಲ್ಲಿ ನಿರ್ಣಯ ಅಂಗೀಕರಿಸುವವರೆಗೆ ಅಲ್ಲಿನ ಜನರಿಗೆ ಬೆಂಬಲ ಮುಂದುವರಿಸಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ರಜಾ ಪರ್ವೇಜ್ ಅಶ್ರಫ್ ಹೇಳಿದ್ದಾರೆ.

ಭಾರತ, ಚೀನಾ ಹೂಡಿಕೆದಾರರಿಗೆ ನೇಪಾಳ ಆಹ್ವಾನ
ಕಠ್ಮಂಡು (ಪಿಟಿಐ): ಮೂಲ ಸೌಕರ್ಯ, ಪ್ರವಾಸೋದ್ಯಮ ಮತ್ತು ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ನೇಪಾಳದಲ್ಲಿ ಅವಕಾಶಗಳಿರುವ ಪ್ರಚಾರ ಆಂದೋಲನದ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಬೆಳವಣಿಗೆಯನ್ನು ತೀವ್ರಗೊಳಿಸಲು ಭಾರತ ಮತ್ತು ಚೀನಾ ಉದ್ದಿಮೆದಾರರಿಗೆ ನೇಪಾಳದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ನಾರಾಯಣ ಕಾಜಿ ಶ್ರೇಷ್ಠ ಆಹ್ವಾನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.