ಅಮೀನಗಡ: ಇಲ್ಲಿನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಸಂಗಮೇ ಶ್ವರ ಜಾತ್ರಾ ಮಹೋತ್ಸವ ನಿಮಿತ್ತ ವಾಗಿ ಮಂಗಳವಾರ ಸಾವಿರಾರು ಭಕ್ತರ ಸಡಗರ, ಸಂಭ್ರಮದ ನಡುವೆ ಅದ್ಧೂರಿ ರಥೋತ್ಸವ ಜರುಗಿತು.

ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆ ದಿನ ನಡೆಯುವ ಸಂಗಮೇಶ್ವರ ಜಾತ್ರೆಗೆ ಶತಮಾನಗಳ ಐತಿಹಾಸಿಕ ಇತಿಹಾಸ ಪರಂಪರೆ ಇದೆ. ಪಟ್ಟಣದಲ್ಲಿ ಬೆಳಿಗ್ಗೆ ಕಸಳದ ಮೆರವಣಿಗೆ ಸಕಲ ವಾದ್ಯ ವೈಭವ, ಮುತ್ತೈದೆಯರ ಕಳಸದೊಂ ದಿಗೆ ಮೆರವಣಿಗೆ ನಡೆಸಲಾಯಿತು. ಸಂಜೆ ಹೂವು, ವಿವಿಧ ಬಣ್ಣಗಳ ಧ್ವಜ ಗಳಿಂದ ಸಿಂಗಾರಗೊಂಡಿದ್ದ ರಥವನ್ನು ಎಳೆದು ಭಕ್ತರು ಸಂಭ್ರಮಿಸಿದರು.

ರಥಕ್ಕೆ ಹೂವು, ಲಿಂಬೆ ಹಣ್ಣು, ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆದರು. ನಂತರ ಅಪಾರ ಪ್ರಮಾಣದಲ್ಲಿ ಮದ್ದು ಸುಟ್ಟು ಜಾತ್ರೆಯನ್ನು ಸಡಗರದಿಂದ ಆಚರಣೆ ಮಾಡಯಿತು.

ಕಳಸದ ಪೂಜೆ: ಅಮೀನಗಡದ ಕುರುವಿನಶೆಟ್ಟಿ ಸಮಾಜದ ಬಸವೇಶ್ವರ ದೇವಸ್ಥಾನದ ಕಳಸದ ಮೆರವಣಿಗೆ ಮಂಗಳವಾರ ಸಂಭ್ರಮದಿಂದ ಜರುಗಿತು.

ಇದೇ ಮೊದಲ ಬಾರಿ ಪಟ್ಟಣದ ಗಜಾನನ ಸಾಂಸ್ಕೃತಿಕ ಸೇವಾ ಸಂಘದ ಪದಾಧಿಕಾರಿಗಳು ಕಲ್ಲೂರ ಕಟ್ಟೆಯಲ್ಲಿ ಕಳಸವಿಟ್ಟು ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.

ಸಂತೋಷ ಕಂಗಳ, ಮಲ್ಲು ಕಲ್ಲೂರ, ಈರಣ್ಣ ತೆಗ್ಗಿನಮನಿ, ಮನೋಹರ ರಕ್ಕಸಗಿ, ಮಲ್ಲಿಕಾರ್ಜುನ ಯರಗೇರಿ, ಚಂದ್ರು ಹುಬ್ಬಳ್ಳಿ, ಸಂಗಮೇಶ ಬೇವುರ, ಸಿದ್ರಾಮ ತತ್ರಾಣಿ, ರಾಚಪ್ಪ ಕುಂಟೋಜಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಾ ಕಾರಂಜಿ 23ಕ್ಕೆ
ಬಾಗಲಕೋಟೆ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇದೇ 23ರಂದು ಪ್ರಾಥಮಿಕ ಹಾಗೂ 24ರಂದು ಪ್ರೌಢ ಶಾಲಾ ವಿಭಾಗದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ನವನಗರದ ಅಂಜುಮನ್ ಬಾಲಕರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳ ಲಾಗಿದೆ. 23ರಂದು ಬೆಳಿಗ್ಗೆ11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸ ಲಿದ್ದಾರೆ. ಶಾಸಕ ಎಚ್.ವೈ. ಮೇಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.