ಮಂಗಳೂರು: ಕಳೆದ ವರ್ಷ ಮೇ ತಿಂಗಳಲ್ಲಿ ಮಂಗಳೂರು ವಿಮಾನ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ನ್ಯಾಯಬದ್ಧ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಮಂಗಳೂರು ವಿಮಾನ ದುರಂತ ಸಂತ್ರಸ್ತರ ಸಂಘಟನೆ ತೀರ್ಮಾನಿಸಿದೆ. ನಗರದ ಸಹೋದಯದಲ್ಲಿ ಭಾನುವಾರ ನಡೆದ ಸಂತ್ರಸ್ತರ ಸಂಘಟನೆಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ದುರಂತದಲ್ಲಿ ಮೃತಪಟ್ಟ ಕೇರಳ ಅರಿಕ್ಕಾಡಿಯ ಮಹಮ್ಮದ್ ರಾಫಿ ಕುಟುಂಬಕ್ಕೆ ರೂ 75 ಲಕ್ಷ ಪರಿಹಾರ ನೀಡಬೇಕು ಎಂದು ಕೇರಳ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿತ್ತು. ರಾಫಿ ತಂದೆ ಅಬ್ದುಲ್ ಸಲಾಂ ನ್ಯಾಯಬದ್ಧ ಪರಿಹಾರಕ್ಕೆ ಕೋರ್ಟ್ ಮೆಟ್ಟಿಲು ಹತ್ತಿದ್ದರು.

ಇದನ್ನು ಪ್ರಶ್ನಿಸಿ ಏರ್ ಇಂಡಿಯಾ ಕೇರಳ ಹೈಕೋರ್ಟ್ ವಿಭಾಗೀಯ ಪೀಠದ ಮೊರೆ ಹೋಗಿತ್ತು. ರೂ 75 ಲಕ್ಷ ಪರಿಹಾರ ನೀಡಬೇಕಿಲ್ಲ. ಏರ್ ಇಂಡಿಯಾ ಸಂಸ್ಥೆಯೊಂದಿಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ವಿಭಾಗೀಯ ಪೀಠ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ನಡೆ ಬಗ್ಗೆ ಚರ್ಚಿಸಲು ಸಭೆ ಸಂಘಟಿಸಲಾಗಿತ್ತು.

`ವಿಮಾನ ದುರಂತದಲ್ಲಿ ನ್ಯಾಯಬದ್ಧ ಪರಿಹಾರ ನೀಡಲು ಏರ್ ಇಂಡಿಯಾ ತಕರಾರು ಮಾಡುತ್ತಿದೆ. ಪರಿಹಾರದಿಂದ ನಮ್ಮ ನೋವು ಕಡಿಮೆಯಾಗುವುದಿಲ್ಲ. ನ್ಯಾಯಬದ್ಧ ಪರಿಹಾರ ನೀಡಬೇಕಾದುದು ಅವರ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಲು ನಿರ್ಧರಿಸಿದ್ದೇವೆ~ ಎಂದು ಸಂಘಟನೆ ಅಧ್ಯಕ್ಷ ಮಹಮ್ಮದ್ ಬ್ಯಾರಿ ತಿಳಿಸಿದರು.

`ಮಾಂಟ್ರಿಯಲ್ ಒಪ್ಪಂದದಂತೆ ಎಲ್ಲರಿಗೂ ನ್ಯಾಯಬದ್ಧ ಪರಿಹಾರ ನೀಡಬೇಕು. ಆದರೆ ಈಗ ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಕೇಂದ್ರ ಸರ್ಕಾರ ವಿಶೇಷ ನ್ಯಾಯಾಲಯ ಆರಂಭಿಸಿ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಅವರು ಆಗ್ರಹಿಸಿದರು.

`ಸಂಘಟನೆಯ ಸದಸ್ಯರು ಎಲ್ಲ ಒಟ್ಟಾಗಿ ಅಬ್ದುಲ್ ಸಲಾಂ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಬೇಕಿದೆ. ಈ ಹೋರಾಟ ಪ್ರಕ್ರಿಯೆಗೆ ಸುಮಾರು 15 ಲಕ್ಷ ಬೇಕಾಗುತ್ತದೆ. ಅಬ್ದುಲ್ ಸಲಾಂ ಅವರೊಬ್ಬರಿಂದಲೇ ಈ ಹಣ ಭರಿಸಲು ಕಷ್ಟ ಸಾಧ್ಯ. ಹಾಗಾಗಿ ಸಂಘಟನೆ ವತಿಯಿಂದ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಹೋರಾಟ ನಡೆಸೋಣ~ ಎಂದು ಸಂಘಟನೆ ಕೋಶಾಧಿಕಾರಿ ಅಬ್ದುಲ್ ರಜಾಕ್ ಸಲಹೆ ನೀಡಿದರು. ಈ ಪ್ರಸ್ತಾಪಕ್ಕೆ ಸಭೆಯಲ್ಲಿ ಒಪ್ಪಿಗೆ ಸಿಕ್ಕಿತು.

`ಈ ಹಿಂದೆ ಪರಿಹಾರ ಪಡೆದವರು ಪರಿಹಾರದ ಬಗ್ಗೆ ತೃಪ್ತಿ ಇಲ್ಲದಿದ್ದರೆ ಪುನಃ ಕೋರ್ಟ್ ಮೆಟ್ಟಿಲು ಹತ್ತಿ ನ್ಯಾಯಬದ್ಧ ಪರಿಹಾರ ಪಡೆಯಲು ಅವಕಾಶ ಇದೆ. ಹಣದ ತುರ್ತು ಅವಶ್ಯಕತೆ ಇದ್ದವರು ಈಗ ಸ್ಥಳೀಯ ಕೋರ್ಟ್ನಲ್ಲಿ ದಾವೆ ಸಲ್ಲಿಸಿ ಪರಿಹಾರ ಪಡೆಯಬಹುದು. ನಮ್ಮ ಪರ ಸುಪ್ರೀಂ ಕೋರ್ಟ್ನಲ್ಲಿ ತೀರ್ಪು ಬಂದಾಗ ಮತ್ತೆ ದಾವೆ ಹೂಡಿ ಪರಿಹಾರ ಪಡೆಯಲು ಅವಕಾಶ ಇದೆ~ ಎಂದು ಅವರು ಮಾಹಿತಿ ನೀಡಿದರು.

ಶಕ್ತಿನಗರದ ಪೆಟ್ರಿಶಿಯಾ ಡಿಸೋಜ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ, `ಪೆಟ್ರಿಶಿಯಾ ಅವರು ಮೊದಲು ಏರ್ ಇಂಡಿಯಾದಿಂದ ರೂ 10 ಲಕ್ಷ ಪರಿಹಾರ ಪಡೆದಿದ್ದರು. ಈಗ ಮಗನ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಹೆಚ್ಚುವರಿ ಹಣ ಬೇಕು ಎಂದು ಕೋರ್ಟ್ನಲ್ಲಿ ದಾವೆ ಹೂಡಿದ ಹಿನ್ನೆಲೆಯಲ್ಲಿ ಮತ್ತೆ ರೂ 10 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ. ಈಗಾಗಲೇ ಒಂದು ಬಾರಿ ಪರಿಹಾರ ಪಡೆದವರು ಇದೇ ರೀತಿ ಪುನಃ ದಾವೆ ಹೂಡಬಹುದು. ವಿಭಾಗೀಯ ಪೀಠದ ತೀರ್ಪಿನಲ್ಲಿ ಈ ಬಗ್ಗೆ ತಿಳಿಸಲಾಗಿದೆ~ ಎಂದು ಸಂಘಟನೆಯ ಪ್ರಮುಖರೊಬ್ಬರು ತಿಳಿಸಿದರು.

`ಸುಪ್ರೀಂ ಕೋರ್ಟ್ನಲ್ಲಿ ಹೋರಾಟ ನಡೆಸಲು ಒಂದೊಂದು ಕುಟುಂಬದವರು ರೂ 10-15 ಸಾವಿರ, ಈಗಾಗಲೇ ಪರಿಹಾರ ಪಡೆದವರು ರೂ 30 ಸಾವಿರದಷ್ಟು ಸಂಖ್ಯೆಯ ಬ್ಯಾಂಕ್ ಅಕೌಂಟ್ಗೆ ಹಾಕಬೇಕು. ಆಗ ಹೋರಾಟ ನಡೆಸಲು ಆಗುತ್ತದೆ~ ಎಂದು ಪದಾಧಿಕಾರಿಯೊಬ್ಬರು ಸಲಹೆ ನೀಡಿದರು.

ಅಬ್ದುಲ್ ಸಲಾಂ ಪರ ಕೇರಳ ಹೈಕೋರ್ಟ್ನಲ್ಲಿ ವಾದಿಸಿದ್ದ ವಕೀಲ ಶ್ರೀಧರನ್ ಮಾತನಾಡಿ, ವಿಭಾಗೀಯ ಪೀಠದ ತೀರ್ಪು ಅಂತಿಮ ಅಲ್ಲ. ಅಲ್ಲಿಯೂ ಆಶಾದಾಯಕ ಅಂಶಗಳು ವ್ಯಕ್ತವಾಗಿವೆ. ಸುಪ್ರೀಂ ಕೋರ್ಟ್ಗೆ ಹೋದರೆ ಯಶಸ್ಸು ಖಚಿತ. ವಿಭಾಗೀಯ ಪೀಠದ ತೀರ್ಪಿನ ವಿರುದ್ಧ ಅಲ್ಲೇ ಪುನರ್ಪರಿಶೀಲನಾ ದಾವೆ ಹೂಡಲಾಗಿದೆ. ಶೀಘ್ರ ತೀರ್ಪು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ಕಳೆದ 16 ತಿಂಗಳಿಂದ ನಾವು ಸಭೆ ಸೇರುತ್ತಿದ್ದೇವೆ. ಆದರೆ ಯಾವುದೇ ಸ್ಪಷ್ಟ ನಿರ್ಧಾರ ಇಲ್ಲ. ಒಂದೂವರೆ ವರ್ಷ ಆಗುತ್ತಾ ಬಂತು. ನಮಗೆ ಇನ್ನು ಕಾಯಲು ಸಾಧ್ಯವಿಲ್ಲ. ಇವತ್ತು ನಿರ್ಧಾರ ತೆಗೆದುಕೊಳ್ಳದಿದ್ದರೆ ಈ ವರೆಗೆ ನಯಾಪೈಸೆ ಪರಿಹಾರ ಪಡೆಯದ 48 ಮಂದಿ ಒಟ್ಟಿಗೆ ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ~ ಎಂದು ಸಂತ್ರಸ್ತರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಸಂಘಟನೆಯ ಕಾರ್ಯಚಟುವಟಿಕೆ ಬಗ್ಗೆಯೂ ಅವರು ಕಿಡಿ ಕಾರಿದರು.

ಸಂಘದ ಗೌರವಾಧ್ಯಕ್ಷ ಎನ್.ಎ.ಸುಲೇಮಾನ್, ಸಂಘದ ಪ್ರಮುಖರಾದ ವರದರಾಜನ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.