ಮುಂಬೈ(ಪಿಟಿಐ): ದೇಶದ ಷೇರುಪೇಟೆ ಹೂಡಿಕೆದಾರರಿಗೆ ‘ಶುಭ’ ಶುಕ್ರವಾರವೇ ಆಗಿತ್ತು. ಹೂಡಿಕೆದಾರರ ಒಟ್ಟಾರೆ ಸಂಪತ್ತು ಒಂದೇ ದಿನದಲ್ಲಿ ರೂ.85,000 ಕೋಟಿಗಳಷ್ಟು ವೃದ್ಧಿಯಾಯಿತು! ಇದಕ್ಕೆ ಕಾರಣವಾಗಿದ್ದು ಷೇರುಗಳ ಮೌಲ್ಯದಲ್ಲಿ ಭಾರಿ ಹೆಚ್ಚಳ ಮತ್ತು ಸೂಚ್ಯಂಕಗಳಲ್ಲಿ ದಾಖಲೆ ಪ್ರಮಾಣದ ಜಿಗಿತ.

ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್ಇ) ಸಂವೇದಿ ಸೂಚ್ಯಂಕ 405.92 ಅಂಶಗಳ ಹೆಚ್ಚಳದೊಂದಿಗೆ 22 ಸಾವಿರ ಅಂಶಗಳ ಗಡಿಯಂಚನ್ನು ಮುಟ್ಟಿದೆ. ಆ ಮೂಲಕ ಷೇರುಪೇಟೆಯ ಇತಿಹಾಸದಲ್ಲೇ ಗರಿಷ್ಠ ಮಟ್ಟಕ್ಕೇರಿದೆ (21,919.79 ಅಂಶಗಳು).
ಬಿಎಚ್ಇಎಲ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಗಣನೀಯ ಪ್ರಮಾಣದಲ್ಲಿ ಮೌಲ್ಯ ಹೆಚ್ಚಿಸಿಕೊಂಡವು.

ಐಟಿ ಷೇರು ಮೌಲ್ಯ ಇಳಿಕೆ
ಇವುಗಳೊಟ್ಟಿಗೆ ಸಂವೇದಿ ಸೂಚ್ಯಂಕ ಪಟ್ಟಿಯಲ್ಲಿದ್ದ 22 ಕಂಪೆನಿಗಳ ಷೇರುಗಳೂ ಉತ್ತಮ ಬೆಲೆ ಪಡೆದವು.
ರಿಯಾಲ್ಟಿ, ಬ್ಯಾಂಕಿಂಗ್, ತೈಲ ಶುದ್ಧೀಕರಣ ವಲಯದ ಕಂಪೆನಿಗಳ ಷೇರುಗಳ ವಹಿವಾಟು ಜೋರಾಗಿತ್ತು. ಆದರೆ, ಮಾಹಿತಿ ತಂತ್ರಜ್ಞಾನ(ಐಟಿ) ಮತ್ತು ಔಷಧ ತಯಾರಿಕೆ ಕಂಪೆನಿಗಳ ಷೇರುಗಳು ತುಸು ಮಂಕಾಗಿ ಬೇಡಿಕೆ ಕಳೆದುಕೊಂಡಿದ್ದವು.

5 ದಿನ; 800ಅಂಶ ಏರಿಕೆ
ಈ ವಾರದ ಐದು ದಿನಗಳ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಒಟ್ಟು 800 ಅಂಶಗಳಷ್ಟು ಏರಿಕೆ ದಾಖಲಿಸಿದೆ.ಇನ್ನೊಂದೆಡೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್ಎಸ್ಇ) ‘ನಿಫ್ಟಿ’ ಸಹ 125.50 ಅಂಶಗಳ ಹೆಚ್ಚಳದೊಂದಿಗೆ 6,526.65 ಅಂಶಗಳಿಗೇರಿತು.
ಏಷ್ಯಾ ಮಾರುಕಟ್ಟೆಯಲ್ಲಿ ಶುಕ್ರವಾರ ಮಿಶ್ರ ಫಲಿತಾಂಶ ಕಂಡುಬಂದಿತು.ಹಾಂಕಾಂಗ್, ದಕ್ಷಿಣ ಕೊರಿಯಾ ಷೇರುಪೇಟೆಯಲ್ಲಿ ಕುಸಿತವಾಗಿದ್ದರೆ, ಜಪಾನ್, ಸಿಂಗಪುರ ಪೇಟೆಗಳಲ್ಲಿ ವಹಿವಾಟು ಏರುಮುಖವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.