ಚಿತ್ರದುರ್ಗ: ‘ಜಾನಪದ ಸಂಶೋಧನಾ ಕೇಂದ್ರಗಳು ಜ್ಞಾನದ ಪರಂಪರೆಯನ್ನು ಸಮಾಜಕ್ಕೆ ಉಣಬಡಿಸುವ ಶಕ್ತಿ ಕೇಂದ್ರಗಳಾಗಿ ಕೆಲಸ ಮಾಡಬೇಕು’ ಎಂದು ಜಾನಪದ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಅಭಿಪ್ರಾಯಪಟ್ಟರು. ನಗರದ ಮುರುಘಾಮಠದಲ್ಲಿ ಶುಕ್ರವಾರ ಅಲ್ಲಮಪ್ರಭು ಜಾನಪದ ಸಂಶೋಧನಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಜಾಗತೀಕರಣದ ಪ್ರಭಾವ ಮತ್ತು ಅದನ್ನು ಎದುರಿಸುವ ಬಗ್ಗೆ ಚರ್ಚೆ ಆಗಬೇಕಿದೆ.

ಯಾವುದೇ ಸಂಸ್ಥೆ ಸಶಕ್ತವಾಗಿದ್ದರೂ ತನ್ನಷ್ಟಕ್ಕೆ ತಾನೇ ಉನ್ನತಿ ಸಾಧಿಸಲು ಸಾಧ್ಯವಿಲ್ಲ. ಅದು ಸಮಾಜದ ಎಲ್ಲ ಬೆಂಬಲವನ್ನು ಪಡೆದು ಕೊಳ್ಳಬೇಕಾಗುತ್ತದೆ. ಅಲ್ಲಮಪ್ರಭು ಸಂಶೋಧನಾ ಕೇಂದ್ರ ಅಂಥ ಪರಿಣಾಮ ಬೀರುವಂತಹ ಕೇಂದ್ರವಾಗಬೇಕು ಎಂದರು. ಮನುಕುಲದ ಉದ್ಧಾರಕ್ಕಾಗಿ ಶಿಕ್ಷಣ ಪಾತ್ರ ಅತಿ ಮುಖ್ಯವಾಗಿದ್ದು ರಾಷ್ಟ್ರೀಯ ಶಿಕ್ಷಣ ನೀತಿಯ ನಾನಾ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯ ನಡೆಯುತ್ತಿಲ್ಲ. ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡಿದ್ದೇ ಆದರೆ ಶಿಕ್ಷಣದ ಸುಧಾರಣೆ ಸಾಧ್ಯ ಎಂದು ಹೇಳಿದರು.

ರಾಜ್ಯಮಟ್ಟದ ಫಾಸಿಲ್ಸ್ ಸಮ್ಮೇಳನ ಉದ್ಘಾಟಿಸಿದ ಹಂಪಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಇಂದು ಯಾವುದೇ ಕ್ಷೇತ್ರದಲ್ಲಿ ಸೇವೆ ಮರೀಚಿಕೆಯಾಗಿದೆ. ಧರ್ಮ, ರಾಜಕಾರಣ, ಶಿಕ್ಷಣ ಸೇರಿದಂತೆ ಎಲ್ಲವೂ ವ್ಯವಹಾರವಾಗಿವೆ. ಬಹುತೇಕ ಮಠಗಳು ಸಹಾ ಸೇವೆ ಮಾಡುವುದನ್ನು ಮರೆತು ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳನ್ನು ನಡೆಸುವ ಮೂಲಕ ಮಠಗಳನ್ನು ಉದ್ದಿಮೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

‘ಜಾಗತೀಕರಣ ಎಂಬುದೇ ಕ್ಷಿಷೆಯ ಮಾತು. ಅದನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಬಹಳವಾಗಿ ಜನರು ಯೋಚಿಸುತ್ತಿಲ್ಲ. ಇದು ಸರ್ವವ್ಯಾಪಿಯಾಗಿ ಆವರಿಸಿಕೊಂಡಿದೆ. ಇದನ್ನು ಒಪ್ಪಿಕೊಳ್ಳಬೇಕೇ? ಅಥವಾ ಅರಗಿಸಿಕೊಳ್ಳಬೇಕೇ ಎಂಬುದು ಮುಖ್ಯ ಎಂದರು. ನಮ್ಮ ಬುಡಕಟ್ಟು ನೆಲದಲ್ಲಿ ೩೬೫ ನಾನಾ ರೀತಿಯ ಭತ್ತದ ತಳಿಗಳು ಇದ್ದವು. ಅವುಗಳಿಂದ ಪುರಿ ಜಗನ್ನಾಥನಿಗೆ ನಿತ್ಯ ಒಂದೊಂದು ರೀತಿಯ ಪ್ರಸಾದ ಮಾಡಿ ಅರ್ಪಿಸಲಾಗುತ್ತಿತ್ತು.

ಆದರೆ, ಹಸಿರು ಕ್ರಾಂತಿಯ ಮೂಲಕ ಕೃಷಿ ಜ್ಞಾನ ಪರಂಪರೆ ಅಳಿಸಿ ಹಾಕಿದೆ. ಜ್ಞಾನ ಪರಂಪರೆ ಯನ್ನು ಹೆಚ್ಚು ಅನುಸಂಧಾನಗೊಳಿಸುವ ಮೂಲಕ ಈ ದೇಶದ ತಳಹದಿಯನ್ನು ಅರ್ಥೈಸಿಕೊಂಡು ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಜಾಗತೀಕರಣದ ಬಿರುಗಾಳಿಗೆ ಜಾನಪದ ಆಧಾರಿತ ಬದುಕು ತತ್ತರಿಸಿದೆ. ಇಂಥ ಸಂದರ್ಭದಲ್ಲಿ ನಾವು ಹೇಗೆ ಬದುಕಬೇಕು ಎಂಬ ಬಗ್ಗೆ ಗಮನಹರಿಸಬೇಕಿದೆ.

ಸಮಸ್ಯೆಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಸುಧಾರಣೆಯತ್ತ ದಾಪುಗಾಲು ಹಾಕಬೇಕಿದ್ದು ಸಮಾಜವನ್ನು ಸಮೃದ್ಧಿಯಾಗಿಸುವ ಅಂಶ ಎಲ್ಲ ಕಾಲಘಟ್ಟದಲ್ಲಿ ನಡೆಯುತ್ತಿವೆ ಎಂದು ಹೇಳಿದರು. ಶ್ರಮಿಕ ಬದುಕು ನಾಶವಾಗುತ್ತದ್ದು, ಎಲ್ಲ ಚಟುವಟಿಕೆಗಳು ತಟಸ್ಥವಾಗುತ್ತಿವೆ. ಪರಿಣಾಮವಾಗಿ ರೋಗಗ್ರಸ್ಥ ಕುಟುಂಬಗಳು, ಸಮಾಜ ನಿರ್ಮಾಣವಾಗುತ್ತಿದೆ. 12 ನೇ ಶತಮಾನದಲ್ಲಿನ ಎಲ್ಲ ಕಸುಬುಗಳನ್ನು ಶ್ರೀಮಠದಲ್ಲಿ ರೂಪಿಸುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಹೇಳಿದರು.

ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಪ್ರೊ.ಎಚ್.ಎಂ.ಮಹೇಶ್ವರಯ್ಯ, ಪ್ರಾದೇಶಿಕ ಕಾರ್ಯದರ್ಶಿ ಪ್ರೊ.ಸ.ಚಿ.ರಮೇಶ, ಸಂಪರ್ಕ ಕಾರ್ಯದರ್ಶಿ ಪ್ರೊ.ರಾಘವನ್ ಪಯ್ಯನಾಡ್, ಕರ್ನಾಟಕ ಜಾನಪದ ವಿವಿಯ ಕುಲಸಚಿವ ಪ್ರೊ.ಡಿ.ಬಿ.ನಾಯಕ, ಎಸ್ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಎಸ್ಜೆಎಂ ವಿದ್ಯಾಪೀಠದ ಯೋಜನಾ ನಿರ್ದೇಶಕ ನಿರ್ವಾಣಪ್ಪ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.