ಬೆಂಗಳೂರು: ಲೋಕಸಭೆಗೆ ನಾವು ಆರಿಸಿ ಕಳುಹಿಸಿದ ಜನ ಪ್ರತಿನಿಧಿಗಳು ಸಂಸತ್ ಅಧಿವೇಶನದ ಸಂದರ್ಭದಲ್ಲಿ ದೆಹಲಿಗೆ ಹೋಗಿದ್ದು ನಿಜ.

ಆದರೆ ಅವರು ಸಂಸತ್ ಕಲಾಪಕ್ಕೆ ಹಾಜರಾಗಿದ್ದಾರಾ? ವಿವಿಧ ಸಮಿತಿಗಳ ಸಭೆಯಲ್ಲಿ ಭಾಗಿಯಾಗಿದ್ದಾರಾ? ಎಂದು ಪ್ರಶ್ನೆ ಮಾಡಿದರೆ ಸಿಗುವ ಉತ್ತರ ‘ಬಹುತೇಕ ಸದಸ್ಯರು ಗೈರು ಹಾಜರಾಗಿದ್ದರು’ ಎನ್ನುವುದು.

ವೀರಪ್ಪ ಮೊಯ್ಲಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು 15ನೇ ಲೋಕಸಭೆಯ ಮೊದಲ ಅಧಿವೇಶನದ ಹೊತ್ತಿಗೆ ಸಚಿವರಾಗಿರಲಿಲ್ಲ. ಈ ಸಂದರ್ಭದಲ್ಲಿ 7 ದಿನ ಅಧಿವೇಶನ ನಡೆಯಿತು. ಅದರಲ್ಲಿ ಒಂದೇ ಒಂದು ದಿನ ಮಾತ್ರ ಈ ಇಬ್ಬರೂ ಭಾಗಿಯಾಗಿದ್ದರು. ನಂತರದ ಅಧಿವೇಶನದ ವೇಳೆಗೆ ಈ ಇಬ್ಬರೂ ಸಚಿವರಾದರು. ಹಾಗಾಗಿ ಅಧಿವೇಶನದಲ್ಲಿ ಭಾಗಿಯಾಗಿದ್ದಕ್ಕೆ ಸಾಕ್ಷಿಯಾಗಿ ಹಾಜರಾತಿ ಪಟ್ಟಿಗೆ ಸಹಿ ಮಾಡುವ ಅಗತ್ಯ ಇರಲಿಲ್ಲ. ಕೆ.ಎಚ್.ಮುನಿಯಪ್ಪ ಅವರು ಆರಂಭದಿಂದಲೂ ಸಚಿವರಾಗಿದ್ದರಿಂದ ಅವರು ಹಾಜರಾತಿ ಪಟ್ಟಿಗೆ ಒಮ್ಮೆಯೂ ಸಹಿ ಮಾಡಿಲ್ಲ. ಅಂದಹಾಗೆ ಹಾಜರಾತಿ ಪಟ್ಟಿಯಲ್ಲಿ ಸಹಿ ಮಾಡಿದವರೆಲ್ಲಾ ಸಂಸತ್ ಕಲಾಪದಲ್ಲಿ ಭಾಗಿಯಾಗಿದ್ದಾರೆ ಎಂದು ಅರ್ಥವಲ್ಲ.

ಇಂತಹ ಹಲವಾರು ಕುತೂಹಲಕಾರಿ ಅಂಶಗಳನ್ನು ಬೆಂಗಳೂರಿನ ರಿಜೋರ್ಸ್ ಸಂಶೋಧನಾ ಪ್ರತಿಷ್ಠಾನ (ಆರ್ಆರ್ಎಫ್) ನಡೆಸಿದ ಸಂಶೋಧನೆ ಬಹಿರಂಗಗೊಳಿಸಿದೆ. ರಾಜ್ಯದಲ್ಲಿ ಇರುವುದು 28 ಲೋಕಸಭಾ ಕ್ಷೇತ್ರಗಳಾದರೂ ಕಳೆದ 5 ವರ್ಷದಲ್ಲಿ 31 ಮಂದಿ ಸದಸ್ಯರಾಗಿದ್ದರು. ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸದಸ್ಯರಾಗಿದ್ದ ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದರಿಂದ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅವರು ಸದಸ್ಯರಾಗಿದ್ದ ಸಂದರ್ಭದಲ್ಲಿ 184 ದಿನ ಸಂಸತ್ ಅಧಿವೇಶನ ನಡೆದಿದೆ. ಅದರಲ್ಲಿ ಸದಾನಂದ ಗೌಡ ಅವರು 87 ದಿನ ಮಾತ್ರ ಹಾಜರಾತಿಗೆ ಸಹಿ ಮಾಡಿದ್ದಾರೆ.

ನಂತರ ಈ ಕ್ಷೇತ್ರದಿಂದ ಜಯಪ್ರಕಾಶ್ ಹೆಗ್ಡೆ ಸದಸ್ಯರಾದರು. ಇವರ ಒಟ್ಟಾರೆ 144 ದಿನ ಸಂಸತ್ ಅಧಿವೇಶನ ನಡೆದಿದ್ದು ಅದರಲ್ಲಿ 113 ದಿನ ಹೆಗ್ಡೆ ಹಾಜರಾತಿಗೆ ಸಹಿ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯದಿಂದ ಆಯ್ಕೆಯಾಗಿದ್ದ ಎನ್.ಚೆಲುವರಾಯಸ್ವಾಮಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರಿಂದ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ಇಬ್ಬರೂ ಲೋಕಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ 314 ದಿನ ಸಂಸತ್ ಅಧಿವೇಶನ ನಡೆದಿದೆ. ಅದರಲ್ಲಿ ಕುಮಾರಸ್ವಾಮಿ 108 ದಿನ ಮಾತ್ರ ಹಾಜರಾಗಿದ್ದರು. ಚೆಲುವರಾಯಸ್ವಾಮಿ 172 ದಿನ ಹಾಜರಾಗಿದ್ದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯ ಗಳಿಸಿದ ಕಾಂಗ್ರೆಸ್ನ ಡಿ.ಕೆ.ಸುರೇಶ್ ಅವರು ತಮ್ಮ ಅವಧಿಯಲ್ಲಿ ನಡೆದ 26 ದಿನಗಳ ಅಧಿವೇಶನದಲ್ಲಿ ಎಲ್ಲ ದಿನ ಭಾಗಿಯಾಗಿದ್ದರು. ಮಂಡ್ಯದಿಂದ ಗೆದ್ದ ರಮ್ಯ ಅವರು 26 ದಿನಗಳಲ್ಲಿ 20 ದಿನ ಹಾಜರಾಗಿದ್ದರು. 15ನೇ ಲೋಕಸಭೆಯ ಸರಾಸರಿ ಹಾಜರಾತಿ ಶೇ 75.67. ಇದರಲ್ಲಿ ಕರ್ನಾಟಕದ 22 ಸದಸ್ಯರು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಹಾಜರಾತಿ ಹೊಂದಿದ್ದಾರೆ. ರಾಜ್ಯದ ಬಿಜೆಪಿ ಸದಸ್ಯರ ಸರಾಸರಿ ಶೇ 67.56, ಜೆಡಿಎಸ್ ಶೇ 56.73, ಕಾಂಗ್ರೆಸ್ ಶೇ 56.01.

ಸಮಿತಿ ಸಭೆಗಳಿಗೂ ಗೈರುಹಾಜರಿ: ರಾಜ್ಯದಿಂದ ಗೆದ್ದ ಸದಸ್ಯರ ಪೈಕಿ ಐವರು ಯಾವುದೇ ಸಂಸದೀಯ ಸಮಿತಿಯ ಸದಸ್ಯರಾಗಲು ಬಯಸಲಿಲ್ಲ. ಎಂದರೆ, ಅವರು ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧರಿರಲಿಲ್ಲ. ಬಾಗಲಕೋಟೆ ಸದಸ್ಯ ಪಿ.ಸಿ.ಗದ್ದಿಗೌಡರ್, ಬೆಳಗಾವಿಯ ಸುರೇಶ್ ಅಂಗಡಿ, ಕೊಪ್ಪಳದ ಶಿವರಾಮಗೌಡ, ಶಿವಮೊಗ್ಗದ ಬಿ.ವೈ.ರಾಘವೇಂದ್ರ, ಮಂಡ್ಯದ ರಮ್ಯ ಯಾವುದೇ ಸಮಿತಿ ಸದಸ್ಯರಾಗಿರಲಿಲ್ಲ. ತುಮಕೂರಿನ ಜಿ.ಎಸ್.ಬಸವರಾಜ್ ಮತ್ತು ದಕ್ಷಿಣಕನ್ನಡದ ನಳಿನ್ಕುಮಾರ್ ಕಟೀಲ್ ಅವರು ಒಂದು ಸಂಸದೀಯ ಸಮಿತಿಯ ಸದಸ್ಯತ್ವ ಆಯ್ಕೆ ಮಾಡಿಕೊಂಡಿದ್ದರೂ ಕಳೆದ 5 ವರ್ಷದಲ್ಲಿ ಸಮಿತಿಯ ಒಂದು ಸಭೆಗೂ ಹಾಜರಾಗಲಿಲ್ಲ.

ಎಚ್.ಡಿ.ಕುಮಾರಸ್ವಾಮಿ ಅವರು ಐಟಿ ಸಮಿತಿ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಸದಸ್ಯರಾಗಿದ್ದರು. ಅವರ ಅವಧಿಯಲ್ಲಿ ಐಟಿ ಸಮಿತಿಯ ಸಭೆ 40 ಬಾರಿ ನಡೆದಿತ್ತು. ಆದರೆ ಒಂದು ಸಭೆಗೂ ಅವರು ಹೋಗಲಿಲ್ಲ. ಸಾಮಾಜಿಕ ನ್ಯಾಯ ಸಮಿತಿಯ ಸಭೆ 15 ಬಾರಿ ನಡೆದಿದ್ದರೂ ಅವರು ಹಾಜರಾಗಿದ್ದು ಒಮ್ಮೆ ಮಾತ್ರ.

ಬೆಂಗಳೂರು ದಕ್ಷಿಣದ ಸದಸ್ಯ ಅನಂತ್ಕುಮಾರ್ ಮಾತ್ರ ಸಮಿತಿ ಸಭೆಗಳಲ್ಲಿ ಹಾಜರಾಗುವುದನ್ನು ತಪ್ಪಿಸಿಕೊಂಡವರಲ್ಲ. ಅವರು 124 ಬಾರಿ ಸಮಿತಿ ಸಭೆಯಲ್ಲಿ ಭಾಗಿಯಾಗಿದ್ದರು. ಅವರು ಶಿಷ್ಟಾಚಾರ, ಹಕ್ಕುಚ್ಯುತಿ, ವಿದೇಶಾಂಗ ವ್ಯವಹಾರ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಮಿತಿ ಸದಸ್ಯರಾಗಿದ್ದರು. ಚಾಮರಾಜನಗರದ ಸದಸ್ಯ ಧ್ರುವನಾರಾಯಣ ಅವರು ಸಾಮಾಜಿಕ ನ್ಯಾಯ ಮತ್ತು ರಕ್ಷಣಾ ಸಮಿತಿ ಸದಸ್ಯರಾಗಿದ್ದರು. 5 ವರ್ಷದ ಅವಧಿಯಲ್ಲಿ ಅವರು ತಪ್ಪಿಸಿಕೊಂಡಿದ್ದು ಕೇವಲ 6 ಬಾರಿ.

ರಿಜೋರ್ಸ್ ಸಂಶೋಧನಾ ಪ್ರತಿಷ್ಠಾನ
ಬೆಂಗಳೂರಿನ ರಿಜೋರ್ಸ್ ಸಂಶೋಧನಾ ಪ್ರತಿಷ್ಠಾನ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ನಡೆಸುತ್ತಿದೆ. ಅದರಲ್ಲಿ ಲೋಕಸಭಾ ಸದಸ್ಯರ ಕಾರ್ಯವೈಖರಿಯೂ ಒಂದು. ಸಂಸತ್ನಲ್ಲಿ ಕರ್ನಾಟಕದ ಸದಸ್ಯರ ಸಾಧನೆ ಬಗ್ಗೆ ನಡೆಸಿದ ಸಂಶೋಧನೆಯನ್ನು ಪ್ರತಿಷ್ಠಾನ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದೆ. ಇದು ಸರಣಿಯಾಗಿ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.