ಮಂಗಳವಾರ, ಮೇ 11, 2021
19 °C

ಸಂಸ್ಕೃತಿ ಮುಖಿ ಕೃತಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: `ಸಂಸ್ಕೃತಿ ಮುಖಿ~ ಕೃತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಚಿತ್ರಣ ಒಳಗೊಂಡಿದೆ. ಸಾಧಕರ ಅಭಿಪ್ರಾಯ, ಎದುರಿಸಿದ ಸವಾಲು, ಸಾಧನೆ, ಚಿಂತನೆ ವಿಚಾರವೂ ಇದರಲ್ಲಿದೆ ಎಂದು ಲೇಖಕ ಓಂದಾಸ್ ಕಣ್ಣಂಗಾರ್ ಅವರ ಸಂದರ್ಶನ ಲೇಖನಗಳ ಸಂಕಲನವನ್ನು ಇಲ್ಲಿ ಬಿಡುಗಡೆ ಮಾಡಿದ ಮಹಾರಾಷ್ಟ್ರ ಸತಾರ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಎಂ.ಪ್ರಸನ್ನ ಹೇಳಿದರು.ಕರ್ನಾಟಕ ಸಂಘ ಮತ್ತು ಅಭಿಜಿತ್ ಪ್ರಕಾಶನ ಸಂಯುಕ್ತವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ `ಸಂಸ್ಕೃತಿ ಮುಖಿ~ ಕೃತಿ ಬಿಡುಗಡೆ ಮಾಡಲಾಯಿತು. ಕಣ್ಣಂಗಾರ್ ಅವರು ಮುಂಬೈಯ ಸಾಂಘಿಕ, ಸಾಂಸ್ಕೃತಿಕ, ಸಾಹಿತ್ಯ ವಲಯದಲ್ಲಿ ತೊಡಗಿಸಿಕೊಂಡವರು ಎಂದು ಅತಿಥಿ ಸುರೇಶ್ ಶೆಟ್ಟಿ ಬಳ್ಳಾರಿ ಹೇಳಿದರು.`ಪ್ರಸಕ್ತ ಕಾಲದಲ್ಲಿ ಸಮಗ್ರವಾದ ಓದು ಸಾಧ್ಯವಿಲ್ಲ. ಜನರು ಸಂತೋಷದಿಂದ ದೂರವಾಗಿ ಹಣದ ಕುರಿತೇ ಚಿಂಸಿಸುತ್ತಾ ಜೀವನ ಸಾಗಿಸುತ್ತಿರುವುದು ಖೇದಕರ~ ಎಂದು ಅಭಿಜಿತ್ ಪ್ರಕಾಶನದ ಜಿ.ಎನ್.ಉಪಾಧ್ಯ ವಿಷಾದಿಸಿದರು.ಕರ್ನಾಟಕ ಸಂಘ ಅಧ್ಯಕ್ಷ ಡಾ. ಜಿ.ಡಿ.ಜೋಶಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಹರೀಶ್ ಹೆಜ್ಮಾಡಿ ಕೃತಿ ಕುರಿತು ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.