ಮಂಗಳವಾರ, ಜನವರಿ 28, 2020
25 °C

ಸಕಾಲ ಅನುಷ್ಠಾನ: ಮತ್ತೆ ಚಿಕ್ಕಬಳ್ಳಾಪುರಕ್ಕೆ ಅಗ್ರಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಕಾಲ ಯೋಜನೆ­ಯಡಿ ಅರ್ಜಿಗಳ ಸ್ವೀಕಾರ ಮತ್ತು ವಿಲೇವಾರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಸತತ ಮೂರನೇ ತಿಂಗಳು ಮೊದಲ ಸ್ಥಾನದಲ್ಲಿ ಮುಂದು ವರಿದಿದೆ.ನವೆಂಬರ್‌ ತಿಂಗಳಿನಲ್ಲಿ ಸಕಾಲ ಅನುಷ್ಠಾನದಲ್ಲಿ ಉತ್ತರ ಕನ್ನಡ ಮತ್ತು ರಾಮನಗರ ಜಿಲ್ಲೆಗಳು ಎರಡು ಹಾಗೂ ಮೂರನೇ ಸ್ಥಾನದ­ಲ್ಲಿವೆ. ಬೀದರ್‌ ಕೊನೆಯ ಸ್ಥಾನ ದಲ್ಲಿದ್ದರೆ, ಯಾದಗಿರಿ 29ನೇ ಮತ್ತು ಬಳ್ಳಾರಿ ಜಿಲ್ಲೆಗಳು 28ನೇ ಸ್ಥಾನ ದಲ್ಲಿವೆ.ಸತತ ಮೂರನೇ ತಿಂಗಳು ಮೊದಲ ಸ್ಥಾನದಲ್ಲಿ ಮುಂದುವರಿ­ದಿರುವುದಕ್ಕಾಗಿ ಚಿಕ್ಕ­ಬಳ್ಳಾಪುರ ಜಿಲ್ಲಾಧಿಕಾರಿ ಆರ್‌.­ವಿಶಾಲ್‌ ಅವರನ್ನು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಅಭಿನಂದಿಸಿದರು.ಸಕಾಲ ಯೋಜನೆಯ ಅನುಷ್ಠಾನಕ್ಕೆ ಗಣನೀಯ ಕೊಡುಗೆ ನೀಡಿರುವ ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ನೀಡಲಾಗುವುದು ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)