ಶುಕ್ರವಾರ, ಏಪ್ರಿಲ್ 23, 2021
24 °C

ಸಕ್ಕರೆಯಿಂದ ಡೀಸೆಲ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಸಿಹಿ ಡೀಸೆಲ್! ಹೌದು, ಸಕ್ಕರೆಯನ್ನು ನೇರವಾಗಿ ನವೀಕೃತ ಡಿಸೇಲ್ ಆಗಿ ಪರಿವರ್ತಿಸಬಹುದಾದ ವಿಧಾನವನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.ವಾಹನಗಳಲ್ಲಿ ಬಳಸುವ ಪಳೆಯುಳಿಕೆ ಇಂಧನದ ಬದಲಿಗೆ ಇದನ್ನು ಬಳಸಬಹುದು.ಸೂಕ್ಷ್ಮಾಣು ಕಿಣ್ವ ಪ್ರಕ್ರಿಯೆಯಿಂದ ಡೀಸೆಲ್ ತಯಾರಿಸುವುದನ್ನು ಸುಮಾರು 100 ವರ್ಷಗಳ ಹಿಂದೆ ಇಸ್ರೇಲ್‌ನ ಪ್ರಥಮ ಅಧ್ಯಕ್ಷ ಮತ್ತು ರಸಾಯನಶಾಸ್ತ್ರಜ್ಞ ಕೇಮ್ ವೇಜ್‌ಮನ್ ಅವರು ಕಂಡು ಹಿಡಿದಿದ್ದರು. ದೀರ್ಘಕಾಲದಿಂದ ನಿಂತುಹೋಗಿದ್ದ ಈ ಕಾರ್ಯಕ್ಕೆ ಕ್ಯಾಲಿಫೋರ್ನಿಯಾ ಬರ್ಕಲಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಚಾಲನೆ ನೀಡಿದ್ದಾರೆ. ಜಾಗತಿಕ ತಾಪಮಾನ ಹೆಚ್ಚಳಕ್ಕೆ ಪ್ರಮುಖ ಕಾರಣವಾದ ವಾಹನಗಳು ಹೊರಸೂಸುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಇದು ತಗ್ಗಿಸಲಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.