ಮಂಗಳವಾರ, ಮೇ 18, 2021
22 °C
ಟೇಬಲ್ ಟೆನಿಸ್: ಅಕ್ಷಯ್ ಮಡಿಲಿಗೆ ಯೂತ್ ಸಿಂಗಲ್ಸ್ ಕಿರೀಟ

ಸಗೈರಾಜ್, ಅರ್ಚನಾಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನೈಋತ್ಯ ರೈಲ್ವೆ ತಂಡದ ಸಗೈರಾಜ್ ಮತ್ತು ಬೆಂಗಳೂರಿನ ಮಲ್ಲೇಶ್ವರಂ ಟೇಬಲ್ ಟೆನಿಸ್ ಕ್ಲಬ್‌ನ ಅರ್ಚನಾ ಕಾಮತ್ ಭಾನುವಾರ ಮುಕ್ತಾಯವಾದ ಎನ್. ರಾಮು ಸ್ಮಾರಕ ಟಿಟಿ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿಯನ್ನು ಗೆದ್ದುಕೊಂಡರು.ಎನ್‌ಐಇಯ ವಜ್ರಮಹೋತ್ಸವ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಮೈಸೂರು ಟೇಬಲ್ ಟೆನಿಸ್ ಟ್ರೇನಿಂಗ್ ಸೆಂಟರ್ ಆಯೋಜಿಸಿದ್ದ ಟೂರ್ನಿಯ ಪುರುಷರ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಸಗೈರಾಜ್ 11-5, 7-11, 11-1, 11-7, 11-6ರಿಂದ ಮೈಸೂರಿನ ಹರ್ಷ ಟೇಬಲ್ ಟೆನಿಸ್ ಅಕಾಡೆಮಿಯ ಅಕ್ಷಯ್ ಮಹಾಂತ ವಿರುದ್ಧ ಜಯಿಸಿದರು.ಸೆಮಿಫೈನಲ್‌ನಲ್ಲಿ ಸಗೈರಾಜ್ 14-12, 7-11, 13-15, 11-9, 11-6, 11-6ರಿಂದ  ಕೆನರಾ ಬ್ಯಾಂಕಿನ ಅನಿರ್ಬನ್ ತರಫದಾರ್ ಮೇಲೂ, ಅಕ್ಷಯ್ ಮಹಾಂತ್ 11-5, 11-8, 11-7, 11-6ರಿಂದ ಕೆನರಾ ಸಂಸ್ಥೆಯ ಕೃನಾಲ್ ತೇಲಾಂಗ್ ವಿರುದ್ಧವೂ ಗೆಲುವು ಪಡೆದರು.ಮಹಿಳೆಯರ ವಿಭಾಗದಲ್ಲಿ ಮಲ್ಲೇಶ್ವರಂ ಟಿಟಿ ಅಕಾಡೆಮಿಯ ಶ್ರೇಯಾಂಕರಹಿತ ಆಟಗಾರ್ತಿ ಅರ್ಚನಾ ಕಾಮತ್ 11-5, 9-11, 11-7, 13-11, 11-1ರಿಂದ ತಮ್ಮದೇ ಕ್ಲಬ್‌ನ ವಿ. ಖುಷಿ ವಿರುದ್ಧ ಜಯಿಸಿದರು.ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಅರ್ಚನಾ 7-11, 11-13, 11-5, 8-11, 11-7, 11-8, 11-7ರಿಂದ ಮೈಸೂರಿನ ಪೇರೆಂಟ್ಸ್ ಅಕಾಡೆಮಿಯ ಎಂ.ವಿ. ಸ್ಪೂರ್ತಿ ಮೇಲೂ, ಖುಷಿ 11-9,11-9, 11-6, 11-4ರಿಂದ ಹರ್ಷ ಅಕಾಡೆಮಿಯ ರಿಧಿ ರೋಹಿತ್ ವಿರುದ್ಧವೂ ಜಯ ಸಾಧಿಸಿದರು.ಅಕ್ಷಯ್‌ಗೆ ಪ್ರಶಸ್ತಿ: ಮೈಸೂರಿನ ಎಚ್‌ಟಿಟಿಎದ ಅಕ್ಷಯ್ ಮಹಾಂತ ಯೂತ್ ಬಾಲಕರ ವಿಭಾಗದ ಸಿಂಗಲ್ಸ್ ಪ್ರಶಸ್ತಿಯನ್ನು ಮತ್ತು  ಪುರುಷರ ಡಬಲ್ಸ್‌ನಲ್ಲಿ ವೇದಾಂತ್ ಎಂ. ಅರಸ್ ಅವರೊಂದಿಗೆ ಪ್ರಶಸ್ತಿಯನ್ನು ಗೆದ್ದುಕೊಂಡರು.ಯೂತ್ ಬಾಲಕರ ಫೈನಲ್‌ನಲ್ಲಿ ಅಕ್ಷಯ್ 12-10, 11-9, 11-6, 11-2ರಿಂದ ಅಗ್ರಶ್ರೇಯಾಂಕದ ಬಿಎನ್‌ಎಂನ ವಿ. ಪ್ರದೀಪ್ ವಿರುದ್ಧ ಗೆದ್ದು ಸಂಭ್ರಮಿಸಿದರು. ಸೆಮಿಫೈನಲ್‌ನಲ್ಲಿ ವಿ.ಪ್ರದೀಪ್ 11-6, 11-5, 12-10, 12-10ರಿಂದ ತಮ್ಮದೇ ಕ್ಲಬ್‌ನ ಗೌರವ್ ಪುರಿ ಮೇಲೂ, ಅಕ್ಷಯ್  11-6, 2-11, 11-9, 16-14, 12-10ರಿಂದ ಬಿಎನ್‌ಎಂನ ಕರಣ್ ಗೊಲ್ಲರಕೇರಿ ವಿರುದ್ಧವೂ ಜಯಗಳಿಸಿದರು.ಪುರುಷರ ಡಬಲ್ಸ್ ಫೈನಲ್‌ನಲ್ಲಿ ಅಕ್ಷಯ್ ಮಹಾಂತ ಮತ್ತು ಎಚ್‌ಟಿಟಿಎದ ವೇದಾಂತ್ ಎಂ. ಅರಸ್ ಜೋಡಿ 5-11, 11-9, 11-8, 11-9ರಿಂದ ಕೆನರಾ ಸಂಸ್ಥೆಯ ಕೃನಾಲ್ ತೆಲಾಂಗ್ ಮತ್ತು ಅನಿರ್ಬನ್ ತರಫದಾರ್ ವಿರುದ್ಧ ಜಯಭೇರಿ ಬಾರಿಸಿದರು.ನಾಲ್ಕರ ಘಟ್ಟದಲ್ಲಿ ಅಕ್ಷಯ್ ಮತ್ತು ವೇದಾಂತ್ 12-10, 14-12, 11-8ರಿಂದ ವಿ. ಪ್ರದೀಪ್ ಹಾಗೂ ಡಿ. ವೈಭವ್ ವಿರುದ್ಧ; ಕೃನಾಲ್ ತೇಲಂಗ್ ಮತ್ತು ಅನಿರ್ಬನ್ ತರಫದಾರ್ 11-7, 11-6, 11-2ರಿಂದ ಆರ್. ಮಂಜುನಾಥ್ ಹಾಗೂ ಉಲ್ಲಾಸ್ ವಿರುದ್ಧ ಗೆದ್ದರು.ವೆಟರನ್ಸ್ ವಿಭಾಗದ ಫೈನಲ್‌ನಲ್ಲಿ ಹೊರೈಜನ್ ಕ್ಲಬ್‌ನ ಬಿ. ಜಗದೀಶ್ 11-9, 10-12, 10-12, 11-8, 11-9ರಿಂದ ಎಚ್‌ಟಿಟಿಎ ಬಿ.ಎಸ್ ರಾಘವೇಂದ್ರ ವಿರುದ್ಧ ಗೆದ್ದರು. ಸೆಮಿಫೈನಲ್‌ನಲ್ಲಿ ಎಚ್‌ಟಿಟಿಎ ಬಿ.ಎಸ್. ರಾಘವೇಂದ್ರ 11-6, 11-5, 6-11, 11-6ರಿಂದ ಇಸ್ರೋದ ಕೆ. ಚಂದ್ರಶೇಖರ್ ವಿರುದ್ಧ; ಬಿ. ಜಗದೀಶ್ 13-15, 11-4, 11-2, 2-11, 11-9ರಿಂದ ಬಿಎನ್‌ಜಿಯ ಎಸ್.ಎಸ್.ಸಂದೀಪ್ ವಿರುದ್ಧ ಜಯ ಸಾಧಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.