ಭಾನುವಾರ, ಸೆಪ್ಟೆಂಬರ್ 22, 2019
23 °C

ಸಚಿನ್‌ಗೆ ಗಾಯ; ಮೊದಲ ಪಂದ್ಯಕ್ಕೆ ಅಲಭ್ಯ

Published:
Updated:

ಚೆಸ್ಟರ್ ಲೀ ಸ್ಟ್ರೀಟ್ (ಪಿಟಿಐ): ಭಾರತ ಕ್ರಿಕೆಟ್ ತಂಡದ ಗಾಯದ ಸಮಸ್ಯೆಯ ಸರಪಳಿಗೆ ಮತ್ತೊಂದು ಕೊಂಡಿ ಸೇರಿಕೊಂಡಿದೆ. ಚಾಂಪಿಯನ್ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಕಾಲ್ಬೆರಳು ನೋವಿಗೆ ಒಳಗಾಗಿದ್ದಾರೆ. ಹಾಗಾಗಿ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಲಭ್ಯರಾಗಲಿಲ್ಲ.



ಕೆಲದಿನಗಳಿಂದ ಸಚಿನ್‌ಗೆ ಈ ಸಮಸ್ಯೆ ಕಾಡುತಿತ್ತು. ಆದರೆ ಶುಕ್ರವಾರ ಅಭ್ಯಾಸದ ವೇಳೆ ಅದು ಮತ್ತಷ್ಟು ಜೋರಾಗಿದೆ. ಈ ಕಾರಣ ಅವರು ವೈದ್ಯರನ್ನು ಭೇಟಿಯಾಗಲಿದ್ದಾರೆ. ಬಳಿಕ ಸರಣಿಯ ಮುಂದಿನ ಪಂದ್ಯಗಳಿಗೆ ತೆಂಡೂಲ್ಕರ್ ಲಭ್ಯತೆ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.



ಈಗಾಗಲೇ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಜಹೀರ್ ಖಾನ್ ಹಾಗೂ ಇಶಾಂತ್ ಶರ್ಮ ಅವರು ಗಾಯದ ಕಾರಣ ಅಲಭ್ಯರಾಗಿದ್ದಾರೆ.

Post Comments (+)