ಬುಧವಾರ, ಏಪ್ರಿಲ್ 21, 2021
27 °C

ಸಚಿವರ ನಡುವೆ ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರೋತ್ಥಾನ ಯೋಜನೆ ಸಂಬಂಧ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಮತ್ತು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ನಡುವೆ ಸಚಿವ ಸಂಪುಟ ಸಭೆಯಲ್ಲಿ ಮಾತಿನ ಚಕಿಮಕಿ ನಡೆದ ಪ್ರಸಂಗ ಮಂಗಳವಾರ ಜರುಗಿದೆ.ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ವಾರ್ಡ್‌ವಾರು ಮೀಸಲಾತಿ ಕುರಿತು ಸಂಪುಟ ಸಭೆಗೆ ಜಾರಕಿಹೊಳಿ ಮಾಹಿತಿ ನೀಡಿದರು. 2011ರ ಜನಗಣತಿಯ ವರದಿ ಸಿಗದ ಕಾರಣಕ್ಕೆ ಮೀಸಲಾತಿ ನಿಗದಿಪಡಿಸುವುದು ಕಷ್ಟವಾಗಿದೆ. 2001ರ ಜನಗಣತಿ ಪ್ರಕಾರ ಮೀಸಲಾತಿ ನಿಗದಿಪಡಿಸಿದರೆ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗುತ್ತದೆ... ಹೀಗೆ ಅವರು ಪೂರ್ಣ ವರದಿಯನ್ನು ಸಂಪುಟ ಸಭೆ ಮುಂದೆ ಮಂಡಿಸಿದರು.ಅಷ್ಟರಲ್ಲಿ ಸಚಿವ ರೇಣುಕಾಚಾರ್ಯ ಅವರು ನಗರೋತ್ಥಾನ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯುವ ಬದಲು ಸ್ಥಳೀಯವಾಗಿ ಟೆಂಡರ್ ಕರೆಯಲು ಅವಕಾಶ ನೀಡಬೇಕು ಎಂದು ಧ್ವನಿ ಎತ್ತಿದರು.ಇದರಿಂದ ಸಿಟ್ಟಿಗೆದ್ದ ಜಾರಕಿಹೊಳಿ ಅವರು ನಗರೋತ್ಥಾನ ಯೋಜನೆ ಬಗ್ಗೆ ರೇಣುಕಾಚಾರ್ಯ ಅವರು ಲಘುವಾಗಿ ಮಾತನಾಡಿದ್ದಾರೆ. ಅವ್ಯವಹಾರ ನಡೆದಿದೆ ಎಂದು ಗುಲ್ಬರ್ಗದಲ್ಲೂ ದೂರಿದ್ದಾರೆ ಎಂದು ಆಕ್ಷೇಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.