ಮಂಗಳವಾರ, ಮೇ 18, 2021
24 °C

ಸಚಿವ ಬೊಖಿರಿಯಾಗೆ 3 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್‌ಕೋಟ್ (ಗುಜರಾತ್) (ಪಿಟಿಐ): ಸುಣ್ಣದ ಕಲ್ಲು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗುಜರಾತ್ ಜಲ ಸಂಪನ್ಮೂಲ ಸಚಿವ ಬಾಬು ಬೊಖಿರಿಯಾ ಅವರಿಗೆ ಪೋರಬಂದರ್ ನ್ಯಾಯಾಲಯ 3ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.2006ರಲ್ಲಿ ನಡೆದ ಈ ಪ್ರಕರಣದಲ್ಲಿ ಬೊಕ್ಕಸಕ್ಕೆ  ್ಙ 54  ಕೋಟಿ ಹಾನಿ ಆಗಿತ್ತು. ಕಾಂಗ್ರೆಸ್‌ನ ಮಾಜಿ ಸಂಸದ ಭರತ್ ಒಡೇದರಾ, ಕೊಲೆ ಪ್ರಕರಣವೊಂದರಲ್ಲಿ ಜೈಲಿನಲ್ಲಿರುವ ರೌಡಿ ಭೀಮಾ ದುಲಾ ಒಡೇದರಾ ಹಾಗೂ ಈತನ ಮಗ (ಪೋರಬಂದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ)ಲಕ್ಷ್ಮಣ್ ದುಲಾ ಒಡೇದರಾ ಕೂಡ ಮೂರು ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿದ್ದಾರೆ. ಅಲ್ಲದೇ ಇವರೆಲ್ಲರಿಗೆ ತಲಾ  ್ಙ5 ಸಾವಿರ ದಂಡ ವಿಧಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿ 2007ರಲ್ಲಿ ಬೊಖಿರಿಯಾ ಅವರನ್ನು ಬಂಧಿಸಲಾಗಿತ್ತು. ನಂತರದಲ್ಲಿ ಹೈಕೋರ್ಟ್ ಇವರಿಗೆ ಜಾಮೀನು ನೀಡಿತ್ತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.