ಗೋಕಾಕ: ಸತೀಶ ಶುಗರ್ಸ್ ಸಂಸ್ಥೆ ಪ್ರಾಯೋಜಕತ್ವದಲ್ಲಿ ಆಯೋಜಿಸಿ ರುವ 11 ನೇ ವರ್ಷದ ಸತೀಶ್ ಶುಗರ್ಸ್ ಅವಾರ್ಡ್ಸ್ ಅಂತಿಮ ಹಂತದ ಸಾಂಸ್ಕೃತಿಕ ಸ್ಪರ್ಧೆಗಳು ಇದೇ 19 ರಿಂದ 22 ರವರೆಗೆ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ವರ್ಣ ರಂಜಿತ ವೇದಿಕೆಯಲ್ಲಿ ನಡೆಯಲಿವೆ ಎಂದು ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜಗಳ ವಿದ್ಯಾರ್ಥಿಗಳಿಗಾಗಿ ಭಾಷಣ, ಗಾಯನ, ಜನಪದ ಗಾಯನ, ಭಾವಗೀತೆ, ಹಾಸ್ಯಾಭಿನಯ, ಭರತನಾಟ್ಯ, ಜನಪದ ನೃತ್ಯ ಹಾಗೂ ಸಮೂಹ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಅಂತಿಮ ಹಂತದ ಸಾಂಸ್ಕೃತಿಕ ಸ್ಪರ್ಧೆಯನ್ನು ಕಳೆದ ಸಾಲಿನ ಸತೀಶ ಶುಗರ್ಸ್ ಪ್ರಶಸ್ತಿ ಪಡೆದಿದ್ದ ಮೂಡಲಗಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆಫರೀನ ಜನ್ನತ ತಾಂಬುಳೆ ಉದ್ಘಾಟಿಸುವರು ಎಂದು ಅವರು ಹೇಳಿದರು.

ಒಟ್ಟು 1,485 ಸ್ಪರ್ಧಾಳುಗಳು ಭಾಗವಹಿಸಲಿದ್ದು ವಿಜೇತರಿಗೆ 129 ಟ್ರೋಫಿ, ರೂ14.19 ಲಕ್ಷ ನಗದು ಬಹುಮಾನ ನೀಡಿ ಪುರಸ್ಕರಿಸ ಲಾಗುವುದು. ಸ್ಪರ್ಧೆಗಳಿಗಾಗಿ ಕ್ರೀಡಾಂಗಣದಲ್ಲಿ ವರ್ಣ ರಂಜಿತ ವೇದಿಕೆ ಸಜ್ಜಾಗಿದೆ ಎಂದರು.

ಪುರಸ್ಕಾರ: ಎಸ್ಎಸ್ಎಲ್ಸಿ, ಪಿಯುಸಿ, ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಯಾವುದೇ ಅಂತಿಮ ವರ್ಷದ ಪದವಿ ವಾರ್ಷಿಕ ಪರೀಕ್ಷೆಗಳಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ರೂ10 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಕಳೆದ ಸಾಲಿನ ಒಟ್ಟು 23 ವಿದ್ಯಾರ್ಥಿಗಳು ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಸತೀಶ ಶುಗರ್ಸ್ ಅವಾರ್ಡ್ಸ್ ಬೆಳಗಾವಿ ಜಿಲ್ಲಾ ಮಟ್ಟದ ಅಂತಿಮ ಹಂತದ ಕ್ರೀಡಾ ಸ್ಪರ್ಧೆಗಳಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ 4 ಕ್ರೀಡಾಪಟುಗಳಿಗೆ ತಲಾ 25 ಸಾವಿರ ರೂ.ಗಳ ನಗದು ಹಾಗೂ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಸತೀಶ ತಿಳಿಸಿದರು.

ಪ್ರತಿ ದಿನ ಸಂಜೆ 5 ರಿಂದ ರಾತ್ರಿ 10.30ರವರೆಗೆ ಸ್ಪರ್ಧೆಗಳು ನಡೆಯ ಲಿವೆ. ಇದೇ 19ರಂದು ನಡೆಯಲಿ ರುವ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿಯರಾದ ಮಾಲಾಶ್ರೀ, ಹೇಮಾ ಚೌಧರಿ, ನಿರ್ಮಾಪಕ ರಾಮು, ನಟ ಶರತ್ ಲೋಹಿತಾಶ್ವ, ನಿರ್ದೆಶಕ ರವಿ ಶಂಕರ ಹಾಗೂ ನಿರ್ಮಾಪಕ ಅನಿಲ್ ಕುಮಾರ್ ಅತಿಥಿಗಳಾಗಿ ಆಗಮಿಸ ಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸತೀಶ ಶುಗರ್ಸ್ ಅವಾರ್ಡ್ಸ್ ಸಂಘಟಕರಾದ ಎಸ್.ಎ.ರಾಮಗಾನಟ್ಟಿ, ರಿಯಾಜ್ ಚೌಗಲಾ, ಸಿದ್ದಲಿಂಗ ದಳವಾಯಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.