ನರಸಿಂಹರಾಜಪುರ : ಮಲೆನಾಡಿನ ಭಾಗದಲ್ಲಿ ಸಾಕಷ್ಟು ಜನ ರೈತರು ತೆಂಗು ಬೆಳೆಗಾರರಿದ್ದು, ಅವರು ಬಹಳಷ್ಟು ಸಮಸ್ಯೆಗಳನ್ನು ಎದುರಿಸು ತ್ತಿದ್ದಾರೆ. ಆದರೆ ಸಂಬಂಧಪಟ್ಟ ಇಲಾಖೆ ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡದ ಕಾರಣ ಸರ್ಕಾರ ಹಲವು ಸೌಲಭ್ಯಗಳಿಂದ ಬೆಳೆಗಾರರು ವಂಚಿತ ರಾಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ 251.22 ಎಕರೆ ಪ್ರದೇಶದಲ್ಲಿ ತೆಂಗು ಬೆಳೆಯ ಲಾಗುತ್ತಿದೆ. ಹಲವು ತೆಂಗಿನ ತೋಟ ಗಳಲ್ಲಿರುವ ತೆಂಗಿನ ಮರಗಳಲ್ಲಿ ಹತೋಟಿಗೆ ಬಾರದ ವಿಪರೀತವಾದ ನುಸಿಪೀಡೆ ರೋಗವಿದೆ. ಹಸಿ ಗರಿಗಳು ಜೋತು ಬಿದ್ದು ಕೆಳಮುಖವಾಗಿ ಬಾಗಿ ಒಣಗುತ್ತಿವೆ.

ಮಳೆಗಾಲದಲ್ಲಿ ಗರಿಗಳು ಹಸಿಯಾಗಿದ್ದರೆ, ಮಳೆಗಾಲ ಮುಗಿದ ಕೂಡಲೇ ಗರಿಗಳು ಉದುರಿ ಹೋಗು ತ್ತವೆ. ಮರದಲ್ಲಿ ಕಾಯಿ ಬಿಟ್ಟರು ಬಲಿಯುವ ಮೊದಲೇ ಉದುರಿ ಹೋಗುತ್ತವೆ. ಈ ಬಗ್ಗೆ ಸಂಬಂಧಪಟ್ಟ ತೋಟಗಾರಿಕೆ ಇಲಾಖೆಗೆ ರೈತರು ದೂರು ನೀಡಿದರೂ ಸಹ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡುತ್ತಿಲ್ಲ, ಪೋಷಕಾಂಶಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂಬ ದೂರುಗಳು ಬೆಳೆಗಾರರಲ್ಲಿ ಕೇಳಿಬರುತ್ತಿದೆ.

ತೆಂಗು ಬಯಲು ಸೀಮೆಗೆ ಮಾತ್ರ ಸೀಮಿತವಾದ ಬೆಳೆ ಎಂಬ ಮನೋ ಭಾವನೆ ಅಧಿಕಾರಿಗಳಲ್ಲಿದೆ. ಮಲೆನಾಡಿ ನಲ್ಲಿರುವ ತೆಂಗಿನ ತೋಟಗಳ ಬಗ್ಗೆ ಆಗಲಿ, ರೋಗಗಳ ಬಗ್ಗೆಯಾಗಲಿ ಅಧಿಕಾರಿಗಳಿಗೆ ಸರಿಯಾದ ಮಾಹಿ ತಿಯೇ ಇಲ್ಲ ಎಂಬ ಆರೋಪವು ಸಹ ಇದೆ.

ಇಲಾಖೆಯ ನಿರ್ಲಕ್ಷ್ಯದಿಂದ ಸರ್ಕಾರ ಬಯಲು ಸೀಮೆ ಭಾಗದ ತೆಂಗು ತೋಟಗಳ ಪುನಃಶ್ಚೇತನಕ್ಕೆ ಹೆಕ್ಟೇರ್ಗೆ ನೀಡುತ್ತಿರುವ ₨ 70ಸಾವಿರ ಅನುದಾನ, ಅಲ್ಲದೆ ಇತರ ಸವಲತ್ತು ಗಳು ಇಲ್ಲಿನ ಬೆಳೆಗಾರರಿಗೆ ದೊರಕ ದಂತಾಗಿದೆ. ಸರ್ಕಾರಕ್ಕೆ ತೆಂಗು ಬೆಳೆ ಗಾರರ ಸಮಸ್ಯೆಯೇ ಅರಿವಾ ಗದಂತಾಗಿದೆ.

‘ನಾನು ಲಿಂಗಾಪುರ ಗ್ರಾಮದಲ್ಲಿ 4ಎಕರೆ ತೆಂಗಿನ ತೋಟ ಹೊಂದಿದ್ದೇನೆ. ತೆಂಗಿಗೆ ಸಾಕಷ್ಟು ರೋಗ ತಗುಲಿರುವುದರಿಂದ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಹೋಗಿದ್ದೆ, ನೀವು ಸೂಕ್ತ ಕಾಲದಲ್ಲಿ ಇಲಾಖೆಯನ್ನು ಸಂಪರ್ಕಿಸಿಲ್ಲ ಮತ್ತು ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ತೆಂಗಿನ ತೋಟಕ್ಕೆ ಭೇಟಿ ನೀಡಲು ಸಾಧ್ಯವಾ ಗದಿದ್ದರಿಂದ ಈ ಭಾಗದಲ್ಲಿ ತೆಂಗಿಗೆ ರೋಗ ಇಲ್ಲವೆಂದು ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ ಎಂದು ಅಧಿಕಾ ರಿಗಳು ತಿಳಿಸಿದರು. ಇದರಿಂದ ನಾನು ಸರ್ಕಾರ ದಿಂದ ಸಿಗುವ ಸೌಲಭ್ಯದಿಂದ ವಂಚಿತ ವಾಗಬೇಕಾಯಿತು’ ಎಂಬುದು ಬೆಳೆ ಗಾರ ಉಮರಬ್ಬ ಅಳಲು.

ಈ ಬಗ್ಗೆ ಸಹಾಯಕ ತೋಟಗಾರಿಕಾ ನಿರ್ದೇಶಕಿ ಸೀಮಾ ಅವರನ್ನು ‘ಪ್ರಜಾ ವಾಣಿ’ ಸಂಪರ್ಕಿಸಿದಾಗ ತೆಂಗು ಪುನಃ ಶ್ಚೇತನಕ್ಕೆ ಸಂಬಂಧಪಟ್ಟಂತೆ ಯಾವುದೇ ಅನುದಾನ ಬಂದಿಲ್ಲ ಹಾಗೂ ಸರ್ಕಾರ ದಿಂದ ಮಾಹಿತಿ ಕೇಳಿಲ್ಲ. ಸರ್ಕಾರದಿಂದ ಮಾಹಿತಿ ಕೇಳಿ ದಾಗ ರೈತರ ತೋಟಕ್ಕೆ ಭೇಟಿ ನೀಡಿ ವರದಿ ಸಲ್ಲಿಸಲಾಗುವುದು. ಬೆಳೆಗಾರರ ಆರೋಪ ಆಧಾರ ರಹಿತವಾಗಿದೆ ಎಂದರು.

ಮಲೆನಾಡಿನ ಭಾಗದ ತೆಂಗು ಬೆಳೆ ಗಾರರು ಎದುರಿಸುತ್ತಿರುವ ಸಮಸ್ಯೆಗೆ ಸ್ಪಂಧಿಸಿ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗಳಿಗೆ ಸೂಚಿಸಲಾಗುವುದು ಎಂದು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಮಲೆನಾಡಿನ ಭಾಗದಲ್ಲೂ ತೆಂಗಿನ ತೋಟಗಳಲ್ಲಿ ಬಯಲು ಸೀಮೆಯ ತೋಟಗಳಲ್ಲಿರುವಂತೆ ರೋಗಗಳಿದ್ದು ಈ ಭಾಗದ ಬೆಳೆಗಾರರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗದಂತೆ ಸೂಕ್ತ ಪರಿಹಾರ ಕೊಡಿಸಲು ತೋಟ ಗಾರಿಕಾ ಇಲಾಖೆ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿನಾಯಕ್ ಮಾಳೂ ರುದಿಣ್ಣೆ ಆಗ್ರಹಿಸಿದರು.

ಭತ್ತವನ್ನು ಬೆಳೆದು ನಷ್ಟ ಅನುಭವಿಸಿದ್ದ ರೈತರು ಪರ್ಯಾಯ ಬೆಳೆ ಬೆಳೆ ಯುವತ್ತ ಗಮನಹರಿಸಲು ಸಂಬಂಧ ಪಟ್ಟ ಇಲಾಖೆಗಳು ಮಾಹಿತಿಯೇ ನೀಡುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಸರ್ಕಾರ ತೋಟಗಾರಿಕೆ ಬೆಳೆಗಳಿಗೆ ಸಂಬಂಧಪಟ್ಟಂತೆ ಬಯಲು ಸೀಮೆ ಮತ್ತು ಮಲೆನಾಡು ಭಾಗಕ್ಕೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಹ ನೀತಿ ಅನುಸರಿ ಸುತ್ತಿದ್ದು, ಈ ತಾರತಮ್ಯವನ್ನು ಸರ್ಕಾರ ಬಗೆಹರಿಸದಿದ್ದರೆ ಮಲೆನಾಡಿನ ತೋಟದ ಬೆಳೆಗಾರರು ಹಲವು ಸೌಲಭ್ಯ ದಿಂದ ವಂಚಿತವಾಗ ಬೇಕಾಗುತ್ತದೆ ಎಂಬ ಮಾತು ರೈತವಲಯದಲ್ಲಿ ಕೇಳಿಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.