ಹಿರಿಯೂರು:  ಸಮಸ್ಯೆಗಳಿಗೆ ಹೆದರದೆ, ಸವಾಲಾಗಿ ಸ್ವೀಕರಿಸಿ ಬದುಕಿನಲ್ಲಿ ಮುಂದೆ ಬರಬೇಕು ಎಂದು ‘ಮಹಾಲಿಂಗಪ್ಪ ಮತ್ತು ತಿಪ್ಪಮ್ಮ ಪ್ರತಿಷ್ಠಾನ’ದ ಸಂಚಾಲಕ ಮೈಸೂರಿನ ಪ್ರೊ.ಎಚ್.ಎಂ. ಪರಮೇಶ್ ಕರೆ ನೀಡಿದರು.ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಇತ್ತೀಚೆಗೆ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ನೂರಾರು ವಿದ್ಯಾರ್ಥಿಗಳು ತಮ್ಮ ಪರಿಶ್ರಮದ ಮೂಲಕ ಉನ್ನತ ಸ್ಥಾನದಲ್ಲಿದ್ದಾರೆ. ಕೊರತೆಗಳ ನಡುವೆಯೂ ಸಾಧನೆ ಮಾಡುವುದು ಮುಖ್ಯ. ಕಳೆದ 14 ವರ್ಷಗಳಿಂದ ಜಿ.ಟಿ. ಸ್ವಾಮಿ ಹಾಗೂ ಡಾ.ರುದ್ರಣ್ಣ ಅವರ ಸಹಯೋಗದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 24 ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ನಗದು ಹಾಗೂ ಪುಸ್ತಕ ವಿತರಣೆ ರೂಪದಲ್ಲಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ನಿವೃತ್ತ ಎಂಜಿನಿಯರ್ ಬರಗೂರು ಲಿಂಗಪ್ಪ, ಹರ್ತಿಕೋಟೆ ಎಂಜಿನಿಯರ್ ಮೃತ್ಯುಂಜಯ ಮಾತನಾಡಿದರು. ಡಾ.ರುದ್ರಣ್ಣ, ಆರ್. ದಯಾನಂದ್, ಎಚ್.ಎಂ. ತಿಪ್ಪೇಸ್ವಾಮಿ, ವೀರಣ್ಣ ಹಾಜರಿದ್ದರು. ಪಿ. ತಿಪ್ಪೇಸ್ವಾಮಿ ಸ್ವಾಗತಿಸಿದರು. ಬಿ.ಟಿ. ಸುಧಾ ವಂದಿಸಿದರು. ಎಚ್. ಸಿದ್ದಯ್ಯ ಕಾರ್ಯಕ್ರಮ ನಿರೂಪಿಸಿದರು.

ವೇತನ ಆಯೋಗದ ವರದಿ ಜಾರಿಗೆ ಆಗ್ರಹ
ರಾಜ್ಯದಲ್ಲಿರುವ ಶಿಕ್ಷಕ ಸಮೂಹಕ್ಕೆ ಕೇಂದ್ರ ಸರ್ಕಾರದ ಆರನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್. ತಿಪ್ಪೇಸ್ವಾಮಿ ಮುಖ್ಯಮಂತ್ರಿಗೆ ಒತ್ತಾಯ ಮಾಡಿದ್ದಾರೆ.ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚಿಸಿರುವಂತೆ ಮನೆಬಾಡಿಗೆ ಭತ್ಯೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.