ವಿನಾಯಕ್ ಲೋಹಾನಿ
`ನಾನು ಎಷ್ಟು ಜನರಿಗೆ ಬದುಕು ರೂಪಿಸಿ ಕೊಟ್ಟೆ ಎಂದು ಎಣಿಸುವುದರಲ್ಲಿ ಸಿಗುವ ಆತ್ಮತೃಪ್ತಿ, ನಾನೆಷ್ಟು ಸೋಪು, ಚಾಕೋಲೇಟ್, ರೇಡಿಯೋಗಳನ್ನು ಮಾರಾಟ ಮಾಡಿದೆ, ಇದರಿಂದ ಎಷ್ಟು ಹಣ ಸಂಪಾದನೆ ಮಾಡಿದೆ ಎಂದು ಲೆಕ್ಕ ಹಾಕುವುದರಲ್ಲಿ ಸಿಗುವುದಿಲ್ಲ' ಎನ್ನುತ್ತಾರೆ ಪಶ್ಚಿಮ ಬಂಗಾಳದ ಯುವಕ ವಿನಾಯಕ್ ಲೋಹಾನಿ.

ಈ ಚಿಂತನೆಯ ಫಲವೇ ಕೊಲ್ಕತ್ತದಲ್ಲಿರುವ `ಪರಿವಾರ' ಎಂಬ ಅನಾಥ ಮಕ್ಕಳ ಸಂಸ್ಥೆ. ಅಂದು ವಿನಾಯಕ್ ಈ ರೀತಿ ಯೋಚನೆ ಮಾಡದಿದ್ದರೆ ಸೋಪು, ಚಾಕೋಲೆಟ್ಗಳನ್ನು ಮಾರಿಕೊಂಡೇ ಇರಬೇಕಾಗಿತ್ತು . ಇಂದು ಅವರನ್ನು ಯಾರು ಕೂಡ `ಮಾನವಿಯತೆಯ ವಿನಾಯಕ್' ಎಂದು ಗುರುತಿಸುತ್ತಿರಲಿಲ್ಲವೇನೋ.

ಖರಗ್ಪುರ ಐಐಟಿಯಲ್ಲಿ ವಿನಾಯಕ್ ಬಿ.ಟೆಕ್ ಪದವಿ ಪಡೆದರು. ನಂತರ ಕೊಲ್ಕತ್ತಾದಲ್ಲಿ ಎಂಬಿಎ ಪದವಿ ಪಡೆದು ಮಾರ್ಕೆಟಿಂಗ್ ಕ್ಷೇತ್ರಕ್ಕೆ ಧುಮುಕಿದರು. ಅದ್ಯಾಕೋ ಏನೋ ವಿನಾಯಕ್ಗೆ ಸೋಪು, ಚಾಕೋಲೇಟ್ ಮಾರುವುದು ಇಷ್ಟವಾಗಲಿಲ್ಲ. ಕೆಲಸಕ್ಕೆ ರಾಜೀನಾಮೆ ನೀಡಿ ಬೀದಿಗೆ ಬಿದ್ದರು.

ಬೀದಿಯಲ್ಲಿ ಹುಳುಗಳಂತೆ ಬಿದ್ದಿರುತ್ತಿದ್ದ ಮಕ್ಕಳು, ಬಾಲ ಕಾರ್ಮಿಕರನ್ನು ಕರೆತಂದು ಒಂದು `ಪರಿವಾರ' ಕಟ್ಟಿಕೊಂಡರು. ಅವರಿಗೆ ಶಿಕ್ಷಣ, ವಸತಿ, ಊಟ ಕೊಟ್ಟ ವಿನಾಯಕ್ ಅವರ ಅಭ್ಯುದಯದ ಕನಸು ಕಾಣುತ್ತಿದ್ದಾರೆ.

2003ರಲ್ಲಿ ಮೂರು ಅನಾಥ ಮಕ್ಕಳೊಂದಿಗೆ ಆರಂಭವಾದ `ಪರಿವಾರ' ಇಂದು 700 ಮಕ್ಕಳ ಬದುಕಿಗೆ ಆಧಾರವಾಗಿದೆ. ಇಲ್ಲಿ ಮಕ್ಕಳಿಗೆ ಊಟ ಮತ್ತು ವಸತಿ ಮಾತ್ರವಲ್ಲದೆ ಅವರಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಕೊಡಿಸುತ್ತಿರುವುದು ವಿಶೇಷ.

ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತಗಳ ಅಡಿಯಲ್ಲೇ ವಿನಾಯಕ್ ಬದುಕುತ್ತಿದ್ದಾರೆ. ವಿನಾಯಕ್ ಅವರ ಸೇವೆಯನ್ನು ಗುರುತಿಸಿದ ಬಂಗಾಳ ಸರ್ಕಾರ `ಪರಿವಾರ' ಸಂಸ್ಥೆಗೆ ಉಚಿತ ನಿವೇಶನ ನೀಡುವುದರೊಂದಿಗೆ ಬೃಹತ್ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ.

ಪರಿವಾರ ಆಶ್ರಮವು ಒಡಿಶಾ, ಛತ್ತೀಸ್ಗಡದಲ್ಲೂ ಆಶ್ರಮಗಳನ್ನು ತೆರೆದು ಅನಾಥ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ.30ರ ಹರೆಯದ ವಿನಾಯಕ್ ಅವರ ನಿಸ್ವಾರ್ಥ ಸೇವೆಗೆ ಬಂಗಾಳ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿದೆ.

ಆಶಿಸ್ ಭಟ್

ಮುಂಬೈ ಮೂಲದ ಆಶಿಸ್ ಭಟ್ ಭಯೋತ್ಪಾದಕರು ಮತ್ತು ನಕ್ಸಲರ ಅಡಗು ತಾಣಗಳನ್ನು ಪತ್ತೆ ಹಚ್ಚುವ ಸಾಧನವನ್ನು ಕಂಡುಹಿಡಿಯುವ ಮೂಲಕ ದೇಶದಾದ್ಯಂತ ಮನೆ ಮಾತಾದ ಯುವಕ.

ರ ಹರೆಯದ ಭಟ್ ರಕ್ಷಣಾ ಇಲಾಖೆಯ ಸಂಶೋಧನಾ ಸಂಸ್ಥೆಯಾದ ಡಿಆರ್ಡಿಒದ ಸಹಯೋಗದಲ್ಲಿ ಈ ಸಾಧನವನ್ನು ಆವಿಷ್ಕರಿಸಿದ್ದಾರೆ. ಏರಿಯಲ್ ಅನ್ನು ಹೊಂದಿರುವ ಈ ಪುಟ್ಟ ಸಾಧನ ಹೆಲಿಕಾಫ್ಟರ್ನಂತೆ ಹಾರುವುದಲ್ಲದೆ ಯುದ್ಧ ಟ್ಯಾಂಕರ್ನಂತೆ ಕಾಡು ಮೇಡುಗಳಲ್ಲೂ ಸುಲಭವಾಗಿ ಚಲಿಸುತ್ತದೆ. ಬ್ಯಾಟರಿ ಚಾಲಿತ ಈ ಯಂತ್ರ ಜಿಪಿಆರ್ಎಸ್ ವ್ಯವಸ್ಥೆಯ ಮೂಲಕ ಮಾಹಿತಿ ರವಾನಿಸುವ ಸಾಮರ್ಥ್ಯ ಹೊಂದಿದೆ.

ಎರಡು ಅಡಿ ಉದ್ದವಿರುವ ಈ ಸಾಧನ ತನ್ನ ಸುತ್ತಲಿನ 400 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ವಿಡಿಯೊ ಸಹಿತ ನಿಖರ ಮಾಹಿತಿ ನೀಡುತ್ತದೆ.

ಇದನ್ನು ಬಳಸಿ ಸೇನಾ ಪಡೆಗಳು ಉಗ್ರರು ಮತ್ತು ನಕ್ಸಲರ ಅಡಗು ತಾಣಗಳನ್ನು ಸುಲಭವಾಗಿ ಪತ್ತೆ ಮಾಡಬಹುದು ಎನ್ನುತ್ತಾರೆ ಭಟ್. ಇದು ಮೋಡ ಮುಸುಕಿದ ವಾತಾವರಣ ಹಾಗೂ ಮಳೆಯಲ್ಲೂ ಯಶಸ್ವಿಯಾಗಿ ಕೆಲಸ ಮಾಡುತ್ತದೆ. ಇದಕ್ಕೆ ಡಿಆರ್ಡಿಒ ಸಂಸ್ಥೆ ನೇತ್ರಾ ಎಂದು ಹೆಸರಿಟ್ಟಿದೆ.

ಆಶಿಸ್ ಭಟ್ ಅವರ ಈ ಸಾಧನೆಗೆ 2011-12ನೇ ಸಾಲಿನಲ್ಲಿ ಭಾರತ ಸರ್ಕಾರ ಯುವ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸ್ತುತ ಭಟ್ ಐಡಿಯಾಪೋರ್ಜ್ ಎಂಬ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅಲ್ಲಿ ಸೇನಾ ಬಳಕೆಯ ಸಾಧನಗಳ ಆವಿಷ್ಕಾರದಲ್ಲಿ ತೊಡಗಿದ್ದಾರೆ.

ಸಂದೀಪ್ ಬಾಚೇ

ಈತ ಸಾಮಾನ್ಯ ಆಟೊ ಚಾಲಕನಾದರೂ ಸಮಾಜ ಸೇವೆಯಲ್ಲಿ ಎತ್ತಿದ ಕೈ. ಪ್ರತಿ ದಿನ ತನ್ನ ದುಡಿಮೆಯಲ್ಲೇ ಶೇ. 25 ರಷ್ಟು ಹಣವನ್ನು ದುರ್ಬಲರ ಸೇವೆಗೆ ಮುಡಿಪಾಗಿಡುತ್ತಿರುವ ಸಮಾಜ ಮುಖಿ ಯುವಕನೇ ಸಂದೀಪ್ ಬಾಚೇ.

ಮುಂಬೈನ ಬಾಂದ್ರದಲ್ಲಿ ಸಂದೀಪ್ ಬಾಚೇ ಎಂದರೆ ಚಿರಪರಿಚಿತ ಹೆಸರು. 35ರ ಹರೆಯದ ಸಂದೀಪ್ ಕಳೆದೊಂದು ದಶಕದಿಂದಲೂ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ವೃದ್ಧರು ಮತ್ತು ಗರ್ಭಿಣಿಯರಿಗೆ ಪ್ರಯಾಣ ದರದಲ್ಲಿ ಶೇ. 25ರಷ್ಟು ರಿಯಾಯಿತಿ ನೀಡುತ್ತಿದ್ದಾರೆ. ಅಂಧರು ಮತ್ತು ಅಂಗವಿಕಲರಿಗೆ ಉಚಿತವಾಗಿ ಆಟೊ ಸೇವೆಯನ್ನು ಒದಗಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಪ್ರತಿ ನಿತ್ಯದ ದುಡಿಮೆಯಲ್ಲಿ ಶೇ. 25ರಷ್ಟು ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿರುವುದು ಸಂದೀಪ್ ಅವರ ಹೃದಯ ವೈಶಾಲ್ಯತೆಯನ್ನು ಎತ್ತಿತೋರಿಸುತ್ತಿದೆ.

ನಿತ್ಯವು ಉಳಿತಾಯ ಮಾಡಿದ ಹಣವನ್ನು ಒಂದು ತಿಂಗಳವರೆಗೆ ಸಂಗ್ರಹಿಸಿ ಅದನ್ನು ವೃದ್ಧಾಶ್ರಮ ಹಾಗೂ ಅನಾಥ ಮಕ್ಕಳ ಆಶ್ರಮಕ್ಕೆ ನೀಡುತ್ತಿದ್ದಾರೆ. ಈ ಸೇವಾ ಕಾರ್ಯಕ್ಕೆ ಆಟೊ ಚಾಲಕರು ಸೇರಿದಂತೆ ಸಾರ್ವಜನಿಕರು ದೇಣಿಗೆ ನಿಡುತ್ತಿದ್ದು, ತಿಂಗಳಿಗೆ ರೂ 15.000 ಸಾವಿರದಿಂದ ರೂ 25.000 ಸಾವಿರದವರೆಗೂ ಸಂಗ್ರಹವಾಗುತ್ತಿದೆ ಎನ್ನುತ್ತಾರೆ ಸಂದೀಪ್.

ಪ್ರತಿ ವರ್ಷ ಜೂನ್, ಜುಲೈನಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. `ನನ್ನ ಕೈಲಾದ ಮಟ್ಟಿಗೆ ಸೇವೆ ಮಾಡುತ್ತಿದ್ದೇನೆ . ನಾನು ಬೇರೆಯವರಿಂದ ಹಣ ಅಥವಾ ವಸ್ತುಗಳನ್ನು ಪಡೆದು ಸಮಾಜ ಸೇವೆ ಮಾಡುವುದಿಲ್ಲ. ನನ್ನ ದುಡಿಮೆಯಲ್ಲಿನ ಒಂದಷ್ಟು ಪಾಲು ಸಮಾಜಕ್ಕೆ ವಿನಿಯೋಗವಾಗಲಿ ಎಂಬ ಆಶಯದೊಂದಿಗೆ ಈ ಕೆಲಸ ಮಾಡುತ್ತಿದ್ದಾನೆ' ಎನ್ನುತ್ತಾರೆ ಸಂದೀಪ್.

ಅರ್ಜುನ್ ವಾಜಪೇಯಿ

ನೊಯಿಡಾ ಮೂಲದ ಅರ್ಜುನ್ ವಾಜಪೇಯಿ ಅತಿ ಕಿರಿಯ ವಯಸ್ಸಿನಲ್ಲೇ ಹಿಮಾಲಯ ಪರ್ವತವೇರಿ ಸಾಧನೆ ಮಾಡಿದ್ದಾರೆ. ನೇಪಾಳಕ್ಕೆ ಸೇರಿರುವ ಹಿಮಾಲಯದ ತಪ್ಪಲಿನಲ್ಲಿರುವ 8,516 ಮೀಟರ್ ಎತ್ತರವಿರುವ ಲೋಸೆ ಪರ್ವತವನ್ನು ಏರುವ ಮೂಲಕ ಅರ್ಜುನ್ ವಿಶ್ವ ದಾಖಲೆ ಮಾಡಿದ್ದಾರೆ. ಈ ಲೋಸೆ ಪರ್ವತ ವಿಶ್ವದಲ್ಲೇ ನಾಲ್ಕನೆಯ ಅತಿ ಎತ್ತರದ ಪರ್ವತವಾಗಿದೆ.

`ಲೋಸೆ ಪರ್ವತವನ್ನು ಹತ್ತುವಾಗ ಅನುಭವಿಸಿದ ಯಾತನೆಗಳು ನೂರೆಂಟು. ಆದರೆ ಪರ್ವತದ ತುತ್ತ ತುದಿ ತಲುಪಿದಾಗ ಉಂಟಾದ ಸಂತೋಷದಲ್ಲಿ ಯಾತನೆಗಳೆಲ್ಲ ಮಂಜಿನಂತೆ ಕರಗಿ ನೀರಾದವು' ಎನ್ನುತ್ತಾರೆ ಅರ್ಜುನ್. ಪರ್ವತ ಏರುವ ಸಂದರ್ಭದಲ್ಲಿ ನೂರಾರು ಭಾರೀ ಹಿಮಪಾತ ಸಂಭವಿಸಿದರೂ ಪಥ ಬದಲಾವಣೆ ಮಾಡಿಕೊಂಡು ಕೇವಲ 58 ದಿನಗಳಲ್ಲಿ ಗುರಿ ತಲುಪಿದ್ದರು ಅರ್ಜುನ್.

ತನ್ನ 13ನೇ ವಯಸ್ಸಿನಲ್ಲೇ ಅರ್ಜುನ್ ಹಿಮಾಲಯ ಪರ್ವತ ಏರುವ ಸಾಹಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಖ್ಯಾತ ಪರ್ವತರೋಹಿಗಳೊಂದಿಗೆ ತರಬೇತಿಯನ್ನು ಪಡೆದಿದ್ದಾರೆ.

15ನೇ ವಯಸ್ಸಿನಲ್ಲಿ ನೇಪಾಳದ `ಮಕಲು' ಪರ್ವತ ಏರುವ ಮೂಲಕ ಅರ್ಜುನ್ ಸುದ್ದಿ ಮಾಡಿದ್ದರು. ಈ ವಯಸ್ಸಿನಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂದು ಹಪಹಪಿಸುವವರಿಗಿಂತ ಅರ್ಜುನ್ ಭಿನ್ನವಾಗಿ ಕಾಣುತ್ತಾರೆ. ಮೌಂಟ್ ಎವರೆಸ್ಟ್ ಶಿಖರ ಹತ್ತುವುದೇ ನನ್ನ ಗುರಿ ಎನ್ನುತ್ತಾರೆ ಅರ್ಜುನ್. ಈ ಮೂಲಕ ಭಾರತವನ್ನು ಪ್ರತಿನಿಧಿಸಿದ ಹೆಮ್ಮೆ ಅರ್ಜುನ್ನದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.