ಮಂಗಳವಾರ, ಮೇ 18, 2021
22 °C

ಸಮುದಾಯದ ಅಭಿವೃದ್ಧಿಗೆ ಸಹಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಸಮುದಾಯದ ಎಲ್ಲ ರಂಗ ಗಳಲ್ಲಿ ಪರಸ್ಪರ ಸಹಕಾರ ಮತ್ತು ವಿಶ್ವಾಸ ಅತ್ಯಗತ್ಯವಾಗಿದ್ದು, ಅವು ಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ  ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಲು ಸಾಧ್ಯವಾಗುತ್ತದೆ~ ಎಂದು ಬಾಳೆ ಹೊನ್ನೂರಿನ ರಂಭಾಪುರಿಯ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಧಾರವಾಡ ಹಾಲು ಒಕ್ಕೂಟ, ಹಾವೇರಿ ಮಾಹೇಶ್ವರ ಕ್ರೆಡಿಟ್ ಕೋ-ಆಪ್ ಸೊಸೈಟಿ ಮತ್ತು ಇಂಟರ್‌ನ್ಯಾಷನಲ್ ವೀರಶೈವ ಫೌಂಡೇಶನ್‌ನ ಆಶ್ರಯದಲ್ಲಿ ಭಾನು ವಾರ ನಗರದಲ್ಲಿ ನಡೆದ ಸಿದ್ಧಲಿಂಗ ಶ್ರೀಗಳ ಲಿಂಗಬೆಳಗಿನ ಅಮೃತ ಮಹೋತ್ಸವದಲ್ಲಿ ಸಹಕಾರ ಸಂಘ ಗಳಿಗೆ `ವೃತ್ತಿಶ್ಚೈತನ್ಯರತ್ನ~ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.ಸಹಕಾರ ಕ್ಷೇತ್ರದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಿಂದ ವಿಶ್ವಾಸಪರ ಮಾತುಗಳು ಬರುತ್ತಿಲ್ಲ. ಕೆಲವೇ ಕೆಲವು ಸಹಕಾರ ಸಂಘಗಳಿಂದ ಇಡೀ ಸಹಕಾರ ಕ್ಷೇತ್ರವೇ ಅಪನಂಬಿಕೆಗೆ ಪಾತ್ರವಾಗ ಬೇಕಾಗಿದೆ. ಇದನ್ನು ಹೋಗಲಾಡಿಸಿ ಸಹಕಾರ ಕ್ಷೇತ್ರದ ಮೂಲಕವೇ ಸಮಾ ಜದ ಅಭಿವೃದ್ಧಿ ಎಂಬುದನ್ನು ತಿಳಿಸಲು ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದರು.ಸಹಕಾರ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶಿಸಬಾ ರದು. ಒಂದು ವೇಳೆ ಪ್ರವೇಶಿಸಿದರೆ ಪ್ರಗತಿ ಕಾಣುವುದು ಅಸಾಧ್ಯ. ಈ ಕ್ಷೇತ್ರದಲ್ಲಿ ದೂರದೃಷ್ಟಿಯುಳ್ಳ ಜನರು ಮುಂದೆ ಬರಬೇಕು. ಆಗ ಮಾತ್ರ ಈ ಕ್ಷೇತ್ರ ಮೊದಲಿನಂತೆ ತನ್ನ ಮೌಲ್ಯವನ್ನು ಎತ್ತಿ ಹಿಡಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ರಾಜ್ಯ ವಸತಿ ಮಹಾಮಂಡಳದ ಅಧ್ಯಕ್ಷ ಎನ್.ಟಿ. ಸೋಮಶೇಖರ ಮಾತನಾಡಿ, ಇಂದು ಅನೇಕ ಸೊಸೈಟಿ  ಗಳು ಹುಟ್ಟಿ ಕಣ್ಮರೆಯಾಗಿವೆ. ಉತ್ತಮ ಸಹಕಾರಿಗಳನ್ನು ಗುರುತಿಸುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ಸಹ ಕಾರಿ ಸಂಘಗಳು ಗಳಿಸುವ ಅದಾಯಕ್ಕೆ ಆದಾಯ ತೆರಿಗೆ ವಿಧಿಸುವ ಹುನ್ನಾರ ನಡೆದಿದ್ದು, ಇದು ಜಾರಿಗೆ ಬರದಂತೆ ತಡೆಯಲು ಎಲ್ಲ ಸಹಕಾರಿ ಗಳು ಪ್ರಬಲ ಹೋರಾಟಕ್ಕೆ ಮುಂದಾಗ ಬೇಕು ಎಂದು ಮನವಿ ಮಾಡಿದರು.ಎಸ್.ಎಸ್. ಹಾದಿಮನಿ ಸಿದ್ಧಲಿಂಗ ಶ್ರೀಗಳ ಭಾವಚಿತ್ರ ಬಿಡುಗಡೆ ಮಾಡಿ ದರು. ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದ ಅಧ್ಯಕ್ಷ ಜಿ.ಪಿ. ಪಾಟೀಲ, ಧಾರವಾಡ ಹಾಲು ಒಕ್ಕೂ ಟದ ಅಧ್ಯಕ್ಷ ಬಸವರಾಜ ಅರಬ ಗೊಂಡ, ಬಿ.ಡಿ.ಪಾಟೀಲ, ಎಸ್.ಎಂ. ಪಾಟೀಲ, ಶಿವನಗೌಡ ಬಿರಾದಾರ, ಜಗದೀಶ ಕವಟಗಿಮಠ, ವಿಶ್ವನಾಥ ಹಿರೇಮಠ, ಸಿದ್ಧರಾಮರೆಡ್ಡಿ ಪಾಟೀಲ ಹಾಗೂ ಜಿಲ್ಲಾ ಸಹಕಾರ ಯೂನಿ ಯನ್ ಅಧ್ಯಕ್ಷೆ ರತ್ನಾ ಎನ್. ಭೀಮಕ್ಕ ನವರ, ಇಂಟರ್‌ನ್ಯಾಷನಲ್ ವೀರಶೈವ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಶ್ರೀಶೈಲ, ಮಳಲಕೆರೆ ಗುರು ಮೂರ್ತಿ ಹಾಜ ರಿದ್ದರು.

 

ಇದೇ ಸಂದರ್ಭದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಾದ ಆರ್.ಎಂ.ಹಿರೇಮಠ ಮತ್ತು ಆರ್.ಬಿ. ಚಿಕ್ಕಮಠ ಮತ್ತು ಉತ್ತಮ ಗ್ರಾಹಕ ಶಿವಬಸಯ್ಯ ಎಂ. ಹಿರೇಮಠರಿಗೆ ಸನ್ಮಾನಿಸಲಾಯಿತು.   ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎಸ್.ಎನ್. ಹಿರೇಮಠ ಸ್ವಾಗತಿ ಸಿದರು.

ಎಸ್.ಬಿ. ಹಿರೇಮಠ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಶೋಭಾ ಜಾಗಟಗೇರಿ ನಿರೂಪಿಸಿದರು. ಶಿವ ಯೋಗಿ ಕಂಬಾಳಿಮಠ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.