ಭಾನುವಾರ, ಜೂನ್ 20, 2021
28 °C

ಸರಪಳಿ ಇಡುವ ಮನೆ ಕಾಯಕಲ್ಪಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಪ್ರತೀ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಮಳೆ-ಬೆಳೆ ಮುನ್ಸೂಚನೆ ನೀಡುವ ನಗರದ ಇತಿಹಾಸ ಪ್ರಸಿದ್ಧವಾದ ಮೈಲಾರಲಿಂಗೇಶ್ವರಸ್ವಾಮಿಯ ಸರಪಳಿ ಇಡುವಂತಹ ಮಾಳಿಗೆ ಮನೆ ಸಂಪೂರ್ಣ ಶಿಥಿಲವಾಗಿದ್ದು, ತಕ್ಷಣ ಕಾಯಕಲ್ಪ ಕಲ್ಪಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ವಿ.ಎಚ್.ರಾಜು ಒತ್ತಾಯ ಮಾಡಿದ್ದಾರೆ.ದಶಕಗಳ ಹಿಂದೆ ಸ್ವಾಮಿಯ ಭಕ್ತರು ಸರಪಳಿ ಇಡಲು 16ಗಿ16 ಅಳತೆಯ ಜಾಗದಲ್ಲಿ ಮಾಳಿಗೆ ಮನೆಯೊಂದನ್ನು ನಿರ್ಮಿಸಿ, ಸರಪಳಿ ಪವಾಡದ ನಂತರ ಮನೆಯಲ್ಲಿ  ಸುರಕ್ಷಿತವಾಗಿ ಇಡಲಾಗುತ್ತಿತ್ತು. ಈಗ ಮನೆ ಬಿದ್ದು ಹೋಗಿದ್ದು ಸರಪಳಿ ಸಂರಕ್ಷಿಸಿಡಲು ಸೂಕ್ತ ಜಾಗ ಇಲ್ಲವಾಗಿದೆ. ಕೆಲವು ಭಕ್ತರು ಸರಪಳಿ ಮನೆ ನಿರ್ಮಿಸಿ ಕೊಡಲು ಮುಂದೆ ಬಂದಿದ್ದು, ಮೈಲಾರಲಿಂಗೇಶ್ವರ ಮನೆ ದೈವವಾಗಿರುವ ಭಕ್ತರೊಬ್ಬರು ಸರಪಳಿ ಮನೆ ತಮ್ಮದೆಂದು, ಹೊಸ ಮನೆ ನಿರ್ಮಿಸಲು ಅಡ್ಡಿ ಪಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ನೂತನ ಮನೆ ನಿರ್ಮಾಣಕ್ಕೆ ಅನುಮತಿ ನೀಡುವಂತೆ ತಹಶೀಲ್ದಾರ್‌ಗೆ, ಪುರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸದರಿ ಜಾಗ ದೇವಸ್ಥಾನಕ್ಕೆ ಸೇರಿದ್ದಾಗಿದ್ದು, ಜಿಲ್ಲಾಧಿಕಾರಿಗಳು ಸ್ಥಳ ತನಿಖೆ ಮಾಡಿ, ಸರಪಳಿ ಮನೆ ಕಟ್ಟಲು ಅನುಕೂಲ ಮಾಡಿಕೊಡಬೇಕು ಎಂದು ರಾಜು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.