ಬುಧವಾರ, ಏಪ್ರಿಲ್ 14, 2021
29 °C

ಸರ್ಕಾರಿ ಆಸ್ಪತ್ರೆ ನಿರ್ವಹಣೆ ಮಠಕ್ಕೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |‘ಸರ್ಕಾರಿ ಆಸ್ಪತ್ರೆ ನಿರ್ವಹಣೆಗೆ ರಾಜ್ಯದ ಯಾವುದೇ ಮಠ-ಮಂದಿರಗಳು ಮುಂದೆ ಬಂದರೆ, ಅವುಗಳಿಗೆ ನೆರವು ನೀಡಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಬಿ.ಎಸ್. ಯಡಿಯೂರಪ್ಪನವರು ತಿಳಿಸಿದರು. (ಪ್ರ.ವಾ. ಫೆ. 7) ‘ಸರ್ಕಾರ ಎಷ್ಟೇ ಹಣ ನೀಡಿದರೂ, ಬಡವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿಲ್ಲ’ ಎಂಬ ಮಾತಿನಲ್ಲಿ ಭ್ರಷ್ಟರನ್ನು ಶಿಕ್ಷಿಸಿ, ಆಡಳಿತವನ್ನು ಸ್ವಚ್ಛ ಮಾಡುವಲ್ಲಿ, ಸರ್ಕಾರ ಸೋತಿದೆ ಎಂಬುದನ್ನು ಪರೋಕ್ಷವಾಗಿ ಇಲ್ಲಿ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಸಂಕಟ ಪ್ರಸಂಗಗಳು ಎದುರಾದಾಗ, ಗುಡಿ-ಗುಂಡಾರಗಳನ್ನು ಸುತ್ತುವುದು, ಮಠಾಧೀಶರ ಕಾಲಿಗಳಿಗೆರಗಿ, ಆಶೀರ್ವಾದ ಪಡೆಯುವುದನ್ನು ಜನತೆ ಕಂಡಿದ್ದಾರೆ. ಇದು ಯಡಿಯೂರಪ್ಪನವರ ಆತ್ಮವಿಶ್ವಾಸದ ಕೊರತೆಯನ್ನು ಪ್ರದರ್ಶಿಸುತ್ತದೆ. ಕೋಟಿಗಟ್ಟಲೆ ಹಣವನ್ನು, ಆಸ್ಪತ್ರೆ ನಿರ್ವಹಣೆಗೆ ಕೊಟ್ಟರೆ, ಯಾವ ಮಠಾಧೀಶರು ಬಿಟ್ಟಾರು?!.ಕಾವೀಧಾರಿಗಳ ನೇತೃತ್ವದ ಉಪ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತದೆ!. ‘ರಾಜ್ಯವು ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ’ ಎಂಬ ವಿರೋಧ ಪಕ್ಷಗಳ ತೆಗಳಿಕೆಗೆ ಈಡಾಗಿರುವ, ಯಡಿಯೂರಪ್ಪನವರು, ತಮ್ಮ ಬೆಂಬಲಕ್ಕೆ ಬೀದಿಗಿಳಿದು ಹೋರಾಟ ಮಾಡುವ ಕಾವೀಧಾರಿಗಳ ಗುಂಪನ್ನು ಸಬಲೀಕರಿಸುವ ಹುನ್ನಾರ ನಡೆಸಿದ್ದಾರೆಂಬುದನ್ನು ತಿಳಿದುಕೊಳ್ಳಲಾರದಷ್ಟು ದಡ್ಡರಲ್ಲ ರಾಜ್ಯದ ಜನತೆ. ಇದನ್ನು ಯಡಿಯೂರಪ್ಪನವರು ಸೂಕ್ಷ್ಮವಾಗಿ ಆಲೋಚಿಸಿ, ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.