ಬುಧವಾರ, ಜುಲೈ 15, 2020
22 °C

ಸರ್ಕಾರಿ ಕಾಮಗಾರಿಯಲ್ಲಿ ಬಾಲ ಕಾರ್ಮಿಕರು!

ಚಿದಂಬರಪ್ರಸಾದ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಕಾಮಗಾರಿಯಲ್ಲಿ ಬಾಲ ಕಾರ್ಮಿಕರು!

ಯಾದಗಿರಿ: ಪೆನ್ನು, ಪೆನ್ಸಿಲ್ ಹಿಡಿ ಯುವ ಕೈಯಲ್ಲ ಸಲಕೆ, ಶಾಲೆಯ ಶೂ ಹಾಕಬೇಕಾದ ಕಾಲುಗಳಲ್ಲಿ ಗಮ್ ಬೂಟ್‌ಗಳು, ಹ್ಯಾಟ್ ಹಾಕಿಕೊಳ್ಳ ಬೇಕಿದ್ದ ತಲೆಯ ಮೇಲೆ ಬುಟ್ಟಿ, ಖುಷಿ ಯಿಂದ ನಲಿದಾಡುವ ವಯಸ್ಸಿನಲ್ಲಿ ಕೂಲಿ ಕೆಲಸ ಮಾಡುವ ಅನಿವಾ ರ್ಯತೆ. ಇದು ಯಾದಗಿರಿ ಜಿಲ್ಲೆಯ ಮಕ್ಕಳ ಸ್ಥಿತಿ.ಜಿಲ್ಲಾ ಕೇಂದ್ರದಲ್ಲಿಯೇ ಗುರುವಾರ ಬಾಲ ಕಾರ್ಮಿಕರನ್ನು ಕಾಮಗಾರಿಗೆ ಬಳಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಪ್ರಮುಖ ಸರ್ಕಾರಿ ಕಚೇರಿಗಳಿರುವ ಶಾಸ್ತ್ರಿ ವೃತ್ತದ ಬಳಿಯೇ ಬಾಲ ಕಾರ್ಮಿಕರು ನಿರಾತಂಕವಾಗಿ ಕೆಲಸ ಮಾಡುತ್ತಿದ್ದರು. ದೊಡ್ಡವರು ಮಾಡುವ ಕೆಲಸಗಳನ್ನು ಪುಟ್ಟ ಬಾಲಕ-ಬಾಲಕಿಯರು ಉರಿ ಬಿಸಿಲಲ್ಲಿ ಮಾಡುವಂತಾಗಿತ್ತು.ಶಾಸ್ತ್ರಿ ವೃತ್ತದಲ್ಲಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸಿಡಿ ಕಾಮಗಾರಿಯಲ್ಲಿ ಕನಿಷ್ಠ ಐದು ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಭಾರವಾದ ಸಲಿಕೆಯನ್ನು ಎತ್ತಿ ಉಸುಕು, ಸಿಮೆಂಟ್ ತುಂಬುವುದು, ಕಲಿಸಿದ ಕಡಿಯನ್ನು ಹಾಕಿ ಸಲಕೆಯಿಂದ ಎಳೆಯುವುದು ಸೇರಿದಂತೆ ಅಪಾಯ ಕಾರಿ ಕೆಲಸಗಳನ್ನು ಸಣ್ಣ ಮಕ್ಕಳೇ ಮಾಡುತ್ತಿದ್ದರು. ಇನ್ನೊಂದೆಡೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಎದುರಿ ನಲ್ಲಿ ಕಂಪೌಂಡ್ ಗೋಡೆ ನಿರ್ಮಿಸುವ ಕೆಲಸದಲ್ಲಿಯೂ ಮೂವರು ಬಾಲಕಿ ಯರನ್ನು ಬಳಸಿಕೊಳ್ಳಲಾಗುತ್ತಿತ್ತು. ಕಣ್ಣ ಮುಂದೆಯೇ ನಿರಾತಂಕವಾಗಿ ಇಷ್ಟೆಲ್ಲ ನಡೆಯುತ್ತಿದ್ದರೂ ಯಾವ ಅಧಿಕಾರಿಗಳನ್ನು ಇದನ್ನು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ ಎಂಬುದು ವಿಷಾದನೀಯ ಎನ್ನುತ್ತಾರೆ ನಾಗರಿಕರು.ಊಟಾ ತೊಗೊಂಡ ಬಂದಾರ್ರಿ: ಕಾಮಗಾರಿಗಳಲ್ಲಿ ಸಣ್ಣ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಸ್ಥಳದಲ್ಲಿದ್ದ ಮೇಸ್ತ್ರಿಯನ್ನು ಕೇಳಿದರೆ, “ಅವರ ತಂದಿ-ತಾಯಿಗೆ ಊಟಾ ತೊಗೊಂಡ ಬಂದಾರ್ರಿ. ಇಲ್ಲೆ ಅವರ್ನ ಕೆಲಸಕ್ಕೆ ತೊಗೊಂಡಿಲ್ರಿ” ಎಂಬ ಉತ್ತರ ಸಿಕ್ಕಿತು. ಆದರೆ ಬೆಳಿಗ್ಗೆಯಿಂದಲೇ ಈ ಮಕ್ಕಳು ಉರಿಬಿಸಿಲಲ್ಲಿಯೇ ಈ ಮಕ್ಕಳು ಕೆಲಸ ಮಾಡುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವೇ.ಯಾವುದೇ ಕೆಲಸದಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಪ್ರಶ್ನಿಸಿದರೆ, ಇದೇ ರೀತಿಯ ಉತ್ತರ ಬರುತ್ತದೆ ಎನ್ನುವುದು ಯುವಕ ನಾಗರಾಜ ಬೀರನೂರ ಹೇಳುವ ಮಾತು. “ಈ ಹುಡಗೋರ್ನ ಯಾಕ ಕೆಲಸಕ್ಕ ತೊಗೊಂಡಿರಿ. ಇಂಥಾದ್ದ ಮಾಡಿದ್ರ ಕೇಸ್ ಆಗ್ತೈತಿ ನೋಡ ಅಂತ ಹೇಳಿದ್ರು, ಇಲ್ಲದ್ದ ನೆಪ ಹೇಳ್ತಾರಿ” ಎನ್ನುತ್ತಾರೆ ನಾಗರಾಜ.ಸರ್ಕಾರದ ಅಭಿವೃದ್ಧಿ ಕಾಮಗಾರಿ ಗಳನ್ನು ಗುತ್ತಿಗೆ ಹಿಡಿಯುವ ಗುತ್ತಿಗೆ ದಾರರು ರೂ.70-100 ಕೊಟ್ಟು ಇಂತಹ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜಿಲ್ಲಾ ಕೇಂದ್ರ ವಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲಿಯೂ ಈ ರೀತಿಯ ಅನೇಕ ಘಟನೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಹೇಳುತ್ತಾರೆ. ಸರ್ಕಾರಿ ಅಧಿಕಾರಿಗಳು ಓಡಾಡುವ ಈ ಪ್ರದೇಶದಲ್ಲಿಯೇ ನಿರಾತಂಕವಾಗಿ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದ್ದರೂ, ಯಾವ ಅಧಿಕಾರಿಗಳ ಗಮನಕ್ಕೂ ಈ ವಿಷಯ ಬಾರದಿರುವುದು ಆಶ್ಚರ್ಯದ ಸಂಗತಿ ಎನ್ನುತ್ತಾರೆ ನಾಗರಿಕರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.