ವಿಜಯಪುರ: ಪಟ್ಟಣದ ಸರ್ಕಾರಿ ಶಾಲೆಗಳಿಗೆ ಶುಕ್ರವಾರ ಬೆಳಗ್ಗೆ ಬಿಆರ್ಪಿ ಮತ್ತು ಸಿಆರ್ಪಿ `ಮಿಂಚಿನ ಸಂಚಾರ~ದ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.

2012-13ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಬೇಕಾಗಿರುವ ಕಾರ್ಯಚಟುವಟಿಕೆಗಳ ಕುರಿತಂತೆ ಪರಿಶೀಲನೆ ನಡೆಸಿದ ದೇವನಹಳ್ಳಿಯ ಬಿಆರ್ಪಿ ರವೀಂದ್ರ ಮತ್ತು ಬೂದಿಗೆರೆಯ ಸಿಆರ್ಪಿ ಲೋಕೇಶ್ ಅವರು ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು.

ಹಿಂದಿನ ಶೈಕ್ಷಣಿಕ ವರ್ಷದ ದಾಸ್ತಾನು ವಿವರ, 2011-12ನೇ ಸಾಲಿಗೆ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮಂಜೂರಾದ ವಿದ್ಯಾರ್ಥಿ ವೇತನದ ವಿತರಣೆ, ನಗದು ವಹಿವಾಟಿನ ಪಾಸ್ ಪುಸ್ತಕದ ಪರಿಶೀಲನೆ, ಅನುದಾನಗಳ ಪ್ರಮಾಣ ಪತ್ರ, ಅಕ್ಷರ ದಾಸೋಹ, ಸಮವಸ್ತ್ರ ಮತ್ತು ಪಠ್ಯಪುಸ್ತಕ ಹಂಚಿಕೆ, ಅನುಪಯುಕ್ತ ವಸ್ತುಗಳ ನಿಯಾಮನುಸಾರ ವಿಲೇವಾರಿ ಮತ್ತು 2012-13ಕ್ಕೆ ಹಂಚಿಕೆಯಾದ ವಾರ್ಷಿಕ ಪಾಠ ಯೋಜನೆಯ ತಯಾರಿ, ಶಿಕ್ಷಕರ ಹಾಗೂ ತರಗತಿ ವೇಳಾಪಟ್ಟಿ, ಶಾಲಾ ಆವರಣ, ಶೌಚಾಲಯ ಮತ್ತು ಅಡುಗೆ ಕೋಣೆಗಳ ಸ್ವಚ್ಛತೆ, ಈ ಸಾಲಿನ ದಾಖಲಾತಿ ಮುಂತಾದ ವಿಷಯಗಳ ಬಗ್ಗೆ ಅವರು ಖುದ್ದು ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.