ಭಾನುವಾರ, ಜನವರಿ 26, 2020
23 °C
ಕೇಜ್ರಿವಾಲ್‌ ಅವರಿಗೂ ಆಹ್ವಾನ ನೀಡಿದ ಲೆ.ಗವರ್ನರ್‌

ಸರ್ಕಾರ ರಚನೆಗೆ ಬಿಜೆಪಿ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸರ್ಕಾರ ರಚನೆಗೆ ತಾನು ಮುಂದಾಗುವುದಿಲ್ಲ ಎಂದು  ವಿಧಾನ­ಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ಬಿಜೆಪಿ ಗುರುವಾರ ಸ್ಪಷ್ಟವಾಗಿ ತಿಳಿಸಿರುವು­ದ­ರಿಂದ, ದೆಹಲಿ ಗದ್ದುಗೆ ಹಿಡಿಯಲು ಹೊಸ­­ದಾಗಿ ಚುನಾವಣೆ ನಡೆಸುವ ಸಾಧ್ಯತೆ­ಗಳು ಮತ್ತಷ್ಟು ನಿಚ್ಚಳವಾ­ದಂತಾಗಿದೆ.ಸರ್ಕಾರ ರಚನೆಗೆ ಆಹ್ವಾನ ನೀಡಿದ ದೆಹಲಿ ಲೆ.ಗವರ್ನರ್‌ ಅವರ ಜತೆ ಗುರುವಾರ ಸಮಾಲೋಚನೆ ನಡೆಸಿದ ಪಕ್ಷದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಹರ್ಷವರ್ಧನ್‌, ನಂತರ ಸುದ್ದಿಗಾರರ ಜತೆ ಮಾತನಾಡಿ, ‘ಅತಿ ಹೆಚ್ಚು ಸ್ಥಾನ­ಗಳನ್ನು ಗಳಿಸಿರುವ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಲಾಗಿತ್ತು. ಅಗತ್ಯ ಬಹುಮತ ಇರದ ಕಾರಣ ನಾವು ವಿರೋಧ ಪಕ್ಷದ ಸ್ಥಾನದಲ್ಲೇ ಕೂರು­ತ್ತೇವೆ’ ಎಂದು ಲೆ.ಗವರ್ನರ್‌ಗೆ ಮನ­ವರಿಕೆ ಮಾಡಿಕೊಡ­ಲಾಯಿತು ಎಂದು ತಿಳಿಸಿದರು.70 ಸದಸ್ಯಬಲದ ದೆಹಲಿ ವಿಧಾನ­ಸಭೆಗೆ ಬಿಜೆಪಿ ತನ್ನ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳದ ಒಬ್ಬ ಶಾಸಕ ಸೇರಿ ಒಟ್ಟು 32 ಸ್ಥಾನಗಳ ಬಲ ಹೊಂದಿದ್ದರೆ, ಆಮ್‌ ಆದ್ಮಿ ಪಾರ್ಟಿ (ಎಎಪಿ) 28 ಹಾಗೂ ಕಾಂಗ್ರೆಸ್‌ 8 ಸ್ಥಾನ ಗಳಿಸಿವೆ. ಜೆಡಿ(ಯು) ಹಾಗೂ ಪಕ್ಷೇತರ ಅಭ್ಯರ್ಥಿ ತಲಾ ಒಂದು ಕ್ಷೇತ್ರದಲ್ಲಿ ಜಯ ಗಳಿಸಿವೆ.

ಬಿಜೆಪಿ ಇಲ್ಲವೆ ಕಾಂಗ್ರೆಸ್‌ ಬೆಂಬಲ ಪಡೆದು ಸರ್ಕಾರ ರಚನೆ ಮಾಡುವು­ದಕ್ಕಿಂತ ಹೊಸದಾಗಿ ಚುನಾವಣೆಯನ್ನು ನಡೆಸುವುದಕ್ಕೆ ತಮ್ಮ ಪಕ್ಷ ಆದ್ಯತೆ ನೀಡುತ್ತದೆ ಎಂದು ಎರಡನೇ ಅತಿ ದೊಡ್ಡ ಪಕ್ಷ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಬುಧವಾರವಷ್ಟೆ ಸ್ಪಷ್ಟಪಡಿ­ಸಿ­ರುವುದರಿಂದ ಸರ್ಕಾರ ರಚನೆ ವಿಷಯ ಕಗ್ಗಂಟಾಗಿದೆ.ಎಎಪಿಗೆ ಬೆಂಬಲ: ಕಾಂಗ್ರೆಸ್‌:ಈ ನಡುವೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ನವದೆಹಲಿಯಲ್ಲಿ ಹೇಳಿಕೆ ನೀಡಿದ್ದು, ಎಎಪಿಗೆ ಬೆಂಬಲ ನೀಡುವ ವಿಷಯ ‘ಪರಿಶೀಲನೆಯಲ್ಲಿದೆ’ ಎಂದು ತಿಳಿಸಿದ್ದಾರೆ.ಪಕ್ಷದ ಎಂಟು ಜನ ಶಾಸಕರ ಸಭೆ­ಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರ ಪ್ರಶ್ನೆಗಳಿಗೆ ರಾಹುಲ್‌ ಉತ್ತರಿಸಿದರು.ಎಎಪಿಗೆ ಆಹ್ವಾನ

ಎರಡನೇ ಅತಿ ಹೆಚ್ಚು ಸ್ಥಾನ ಗಳಿಸಿದ ಎಎಪಿಗೆ ಲೆ. ಗವ­ರ್ನರ್‌ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದು, ಶನಿ­ವಾರ ಈ ಸಂಬಂಧ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)