ಶನಿವಾರ, ಏಪ್ರಿಲ್ 17, 2021
23 °C

ಸರ್ಪದೋಷ ಪರಿಹಾರ: ಮತ್ತೆ ಬಂದ ದೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ಕಳೆದ ಆ.14ರಂದು ರಾಣೆ ಬೆನ್ನೂರ ತಾಲ್ಲೂಕು ಹಳೆ ಹೊನ್ನತ್ತಿ ಸಮೀಪ ಜೆಸಿಬಿ ಯಂತ್ರಕ್ಕೆ ಸಿಲುಕಿ ಅರೆ ಜೀವವಾಗಿದ್ದ ನಾಗರಹಾವನ್ನು ಕೊಂದು ಸುಟ್ಟು ಹಾಕಿದ ಬಳಿಕ ದೃಷ್ಟಿ ಕಳೆದುಕೊಂಡಿದ್ದ ತಾಲ್ಲೂಕಿನ ಮೋಟೆ ಬೆನ್ನೂರ ಗ್ರಾಮದ ವ್ಯಕ್ತಿಯೊಬ್ಬನಿಗೆ ಭಾನುವಾರ ಸಂಜೆ ಮರಳಿ ದೃಷ್ಟಿ  ಬಂದಿರುವ ವಿಸ್ಮಯಕಾರಿ ಘಟನೆ ಯೊಂದು ನಡೆದಿದೆ.  ಸುದ್ದಿ ಜನರಿಂದ ಜನರಿಗೆ ಹರಡು ತ್ತಿದ್ದಂತೆ ಆತನ ಮನೆಯ ಮುಂದೆ ಸೇರಿದ ಜನರು ಕುತೂಹಲದಿಂದ ವೀಕ್ಷಿ ಸಿದರು.ದೃಷ್ಟಿ ಕಳೆದು ಕೊಂಡ ವ್ಯಕ್ತಿ ಶ್ರೀಕಾಂತ ಹೊಟ್ಟೆಪ್ಪಗೌಡ್ರ ಎನ್ನಲಾಗಿದ್ದು, ಶನಿವಾರ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ರಾಮನಸರ ಹುಂಚದಕಟ್ಟಿ ಗ್ರಾಮದ ನಾಗಮಂಡಲಕ್ಕೆ ಕುಟುಂಬ ಪರಿವಾರ ಸಮೇತ ಭೇಟಿ ಮಾಡಿ ಭಕ್ತಿ ಯಿಂದ ಪೂಜೆ ಸಲ್ಲಿಸಿದಾಗ ಸ್ವಾಮೀಜಿ ಯವರ ವಾಣಿಯೊಂದು ನಾಗರ ಹಾವನ್ನು ಸುಟ್ಟ ಚಿತಾಭಸ್ಮವನ್ನು ನದಿಗೆ ಅರ್ಪಣೆ ಮಾಡಿ ದೇವಸ್ಥಾನ ನಿರ್ಮಿಸುವ ಸಂಕಲ್ಪವನ್ನು ಕೈಕೊಂಡಲ್ಲಿ ದೃಷ್ಠಿ ಮರಳಿ ಬರಲಿದೆ ಎಂದು ಸಲಹೆ ನೀಡಿತ್ತು ಎನ್ನಲಾಗಿದೆ.ವಾಪಸ್ ಮರಳಿದ ಶ್ರೀಕಾಂತ ವಾಣಿಯಂತೆ ಭಾನುವಾರ ಕಾಯಕ ನೆರೆವೇರಿಸಿ ಅನ್ನಸಂತರ್ಪಣೆ ಕೈಕೊಂಡ ಹಿನ್ನೆಲೆಯಲ್ಲಿ ದೃಷ್ಟಿಮರಳಿ ಬಂದಿತೆಂದು ಪತ್ರಿಕೆಗೆ ಮಾಹಿತಿ ನೀಡಿದರು.ಜನಜಂಗುಳಿ: ಜೆಸಿಬಿ ಯಂತ್ರಕ್ಕೆ ಸಿಲುಕಿ ಅರೆ ಜೀವವಾಗಿದ್ದ ನಾಗರ ಹಾವನ್ನು ಕೊಂದು ಸುಟ್ಟು ಹಾಕಿದ  ಐದು ದಿನದ ಬಳಿಕ ಶ್ರೀಕಾಂತನಿಗೆ ದೃಷ್ಟಿ ಮರಳಿ ಬಂದಿರುವ ಸುದ್ದಿ ಹರಡು ತ್ತಿದ್ದಂತೆ ಗ್ರಾಮದ ಹಾಗೂ ಸುತ್ತ ಮುತ್ತಲಿನ ಜನತೆ ಆತನನ್ನು ಕುತೂ ಹಲದಿಂದ ವೀಕ್ಷಿಸುತ್ತಿರುವುದು ಕಂಡು ಬಂದಿತು.ಇಂದಿನ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿಯೂ ಇಂತಹ ಘಟನೆಗಳು ಸತ್ಯವೇ ಎನ್ನುವ ಪ್ರಶ್ನೆಗೆ ನೈಜವಾದ ಉತ್ತರ ಮಾತ್ರ ಸಿಗದೆ ಇರುವುದು ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿದೆ. ಇದರ ಸತ್ಯಾಸತ್ಯತೆಯನ್ನು ಅರಿಯು ವುದು ಮುಖ್ಯವಾಗಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.