ಸ್ವಾಮಿ ವಿವೇಕಾನಂದರು ಇತರ ಧರ್ಮಗಳ ಬಗ್ಗೆ ಹೊಂದಿದ್ದ ದೃಷ್ಟಿಕೋನದ ಕುರಿತು ಬೆಳಕು ಚೆಲ್ಲುವ ಸಾಕಷ್ಟು ಬರಹಗಳಿವೆ. ತಮ್ಮ ಸಂಚಾರದ ಸಮಯದಲ್ಲಿ ಬಹಳಷ್ಟು ಬಾರಿ ಅವರು ಎರಡು ಪುಸ್ತಕಗಳನ್ನು ತಮ್ಮಂದಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ಹೇಳಲಾಗುತ್ತದೆ.

ಅವುಗಳಲ್ಲಿ ಒಂದು ಭಗವದ್ಗೀತೆಯ ಪ್ರತಿ, ಇನ್ನೊಂದು ಕ್ರೈಸ್ತ ಧರ್ಮನಿಷ್ಠ ಥಾಮಸ್ ಕೆಂಪಸ್ ಅವರು ಬರೆದ `ದಿ ಇಮಿಟೇಷನ್ ಆಫ್ ಕ್ರೈಸ್ಟ್~. ವಿವೇಕಾನಂದರ ಗುರು ಸ್ವಾಮಿ ರಾಮಕೃಷ್ಣರು ಎಲ್ಲ ಧರ್ಮಗಳನ್ನೂ ಅರ್ಥ ಮಾಡಿಕೊಂಡು ಅನುಸರಿಸಲು ಪ್ರಯತ್ನಿಸಿದ್ದರಲ್ಲದೆ, ಎಲ್ಲ ಭಿನ್ನ ಮಾರ್ಗಗಳೂ ಕೊನೆಗೆ ಸೇರುವುದು ಒಂದೇ ದೇವರನ್ನು ಎಂದು ಸ್ಪಷ್ಟವಾಗಿ ಘೋಷಿಸಿದ್ದರು.

ಈ ವಚನವನ್ನೇ ಅನುಸರಿಸಿದ ಸ್ವಾಮೀಜಿ ಸಹ ಸರ್ವ ಧರ್ಮಗಳ ಏಕತೆಯಲ್ಲೇ ನಂಬಿಕೆ ಇಟ್ಟು ಆಚರಿಸಿಕೊಂಡು ಬಂದರು. ಅದ್ವೈತದ ಸೂಕ್ಷ್ಮ ಅರ್ಥಗಳನ್ನು ಗ್ರಹಿಸಿದ್ದುದು ಮಾತ್ರವಲ್ಲದೆ ಇತರ ಧರ್ಮ ಗ್ರಂಥಗಳನ್ನೂ ಅರಿತಿದ್ದ ಈ ಅಸಾಧಾರಣ ಪಾರಂಗತನನ್ನು ಅರ್ಥ ಮಾಡಿಕೊಳ್ಳಲು ಸುತ್ತಲಿನ ಜನರಿಗೆ ಸಾಧ್ಯವಾಗಿರಲಿಲ್ಲ.

ಅವರು ಒಂದೇ ಬಾರಿಗೆ ಗೀತೆ, ಬೈಬಲ್, ಕುರಾನ್ ಎಲ್ಲವನ್ನೂ ಉಲ್ಲೇಖಿಸಬಲ್ಲವರಾಗಿದ್ದರು. ಧರ್ಮಸಹಿಷ್ಣುತೆ ಎಂದರೇನು, ಎಲ್ಲ ಧರ್ಮಗಳನ್ನೂ ಒಂದೇ ಎಂದು ಒಪ್ಪಿಕೊಳ್ಳುವಲ್ಲಿ ಅದರ ಪಾತ್ರ ಏನು ಎಂಬುದು ಸ್ವಾಮೀಜಿಗೆ ಚೆನ್ನಾಗಿ ತಿಳಿದಿತ್ತು.

ಒಂದೆಡೆ ಸ್ವಾಮೀಜಿ ಹೀಗೆ ಬರೆದಿದ್ದಾರೆ: `ನಮ್ಮ ಸೂತ್ರ ಏನಿದ್ದರೂ ಅಂಗೀಕಾರವೇ ಹೊರತು ನಿರಾಕರಣೆಯಲ್ಲ. ಸಹಿಷ್ಣುತೆ ಎಂಬುದು ದೇವನಿಂದನೆಗೆ ಅವಕಾಶ ಮಾಡಿಕೊಡುತ್ತದೆ. ಹೀಗಾಗಿ ಸಹಿಷ್ಣುತೆಯಲ್ಲಿ ನನಗೆ ಹೆಚ್ಚಿನ ನಂಬಿಕೆ ಇಲ್ಲ. ಏನಿದ್ದರೂ ಅಂಗೀಕಾರದಲ್ಲಿ ವಿಶ್ವಾಸ ಇದೆ. ನಾನ್ಯಾಕೆ ಸಹಿಸಿಕೊಳ್ಳಬೇಕು? ಸಹಿಷ್ಣುತೆ ಎಂದರೆ ನೀವು ಮಾಡುತ್ತಿರುವುದು ತಪ್ಪು, ಆದರೂ ನೀವು ಬದುಕಲು ನಾನು ಅವಕಾಶ ಮಾಡಿಕೊಟ್ಟಿದ್ದೇನೆ ಎಂದರ್ಥವಾಗುತ್ತದೆ.

ನಾನು ಮತ್ತು ನೀವು ಇತರರನ್ನು ಬದುಕಲು ಬಿಟ್ಟಿದ್ದೇವೆ ಎಂದು ತಿಳಿದುಕೊಳ್ಳುವುದರಿಂದ ದೇವನಿಂದನೆ ಮಾಡಿದಂತೆ ಆಗುವುದಿಲ್ಲವೇ? ಯಾರು ಯಾವ ರೂಪದಲ್ಲೇ ದೇವರನ್ನು ಪೂಜಿಸಲಿ, ಎಲ್ಲ ಧರ್ಮಗಳನ್ನೂ ನಾನು ಒಪ್ಪಿಕೊಳ್ಳುತ್ತೇನೆ ಮತ್ತು ಎಲ್ಲವನ್ನೂ ಆರಾಧಿಸುತ್ತೇನೆ.

ಮೊಹಮ್ಮದೀಯರ ಮಸೀದಿಗೆ ನಾನು ಹೋಗಬಹುದು, ಕ್ರೈಸ್ತರ ಚರ್ಚನ್ನು ಪ್ರವೇಶಿಸಿ ಕ್ರಿಸ್ತನ ಪ್ರತಿಮೆ ಎದುರು ಮಂಡಿಯೂರಿ ಕೂರಬಹುದು, ಬೌದ್ಧ ದೇಗುಲಕ್ಕೆ ಹೋಗಿ ಬುದ್ಧ ಮತ್ತು ಅವನ ಕಾನೂನಿಗೆ ಶರಣಾಗಬಹುದು, ಪ್ರತಿಯೊಬ್ಬರ ಹೃದಯದಲ್ಲೂ ಅರಿವು ಮೂಡಿಸಬಲ್ಲ ಜ್ಯೋತಿಯನ್ನು ಕಾಣಲೆತ್ನಿಸುವ ಒಬ್ಬ ಹಿಂದೂ ಧರ್ಮೀಯನೊಟ್ಟಿಗೆ ಕಾಡಿಗೆ ಹೋಗಿ ಧ್ಯಾನಕ್ಕೂ ಕೂರಬಹುದು.~

`ನಾನು ಇವುಗಳನ್ನೆಲ್ಲ ಮಾಡುವುದಷ್ಟೇ ಅಲ್ಲ, ಭವಿಷ್ಯದಲ್ಲಿ ಬರುವ ಎಲ್ಲದಕ್ಕೂ ನನ್ನ ಹೃದಯವನ್ನು ತೆರೆದಿಡುತ್ತೇನೆ. ದೇವರ ಕೆಲಸ ಮುಗಿದುಹೋಗಿದೆಯೇ ಅಥವಾ ಅವನ ದಿವ್ಯದರ್ಶನ ಇನ್ನೂ ಮುಂದುವರಿದಿದೆಯೇ? ಬೈಬಲ್, ವೇದ, ಕುರಾನ್ ಮತ್ತು ಇತರ ಪವಿತ್ರ ಪುಸ್ತಕಗಳು ಸಾಕಷ್ಟಿವೆ.

ಅವುಗಳಲ್ಲಿ ಎಷ್ಟೊಂದು ಪುಟಗಳಿವೆ, ಆದರೂ ಅಸಂಖ್ಯಾತ ಪುಟಗಳ ವಿವರ ಇನ್ನಷ್ಟೇ ನಮಗೆ ನಿಲುಕಬೇಕಿದೆ. ನಾನು ಅವೆಲ್ಲವನ್ನೂ ಮುಕ್ತವಾಗಿ ಅವರೆಲ್ಲರಿಗೂ ತೆರೆದಿಡುತ್ತೇನೆ. ನಾವು ವರ್ತಮಾನದಲ್ಲಿ ನಿಲ್ಲುತ್ತೇವೆ, ಅನನ್ಯ ಭವಿಷ್ಯದೆಡೆಗೆ ನಮ್ಮನ್ನು ತೆರೆದುಕೊಳ್ಳುತ್ತೇವೆ, ಹಿಂದೆ ಇದ್ದ ಎಲ್ಲವನ್ನೂ ಒಳಗೊಳ್ಳುತ್ತೇವೆ, ವರ್ತಮಾನದ ಬೆಳಕನ್ನು ಕಂಡು ಸಂಭ್ರಮಿಸುತ್ತೇವೆ ಮತ್ತು ಭವಿಷ್ಯದಲ್ಲಿ ಬರುವ ಎಲ್ಲದಕ್ಕೂ ನಮ್ಮ ಹೃದಯದ ಸರ್ವ ಬಾಗಿಲುಗಳನ್ನೂ ಮುಕ್ತಗೊಳಿಸುತ್ತೇವೆ. ಹಿಂದಿನ ಎಲ್ಲ ಧರ್ಮೋಪದೇಶಕರಿಗೆ, ಎಲ್ಲ ಪ್ರಸ್ತಕ ಗಣ್ಯರಿಗೆ ಹಾಗೂ ಭವಿಷ್ಯದಲ್ಲಿ ಬರಲಿರುವ ಎಲ್ಲರಿಗೂ ನಮನ ಸಲ್ಲಿಸುತ್ತೇವೆ~ ಎಂದು ಹೇಳಿದ್ದಾರೆ.

ಇಂತಹ ವಿಶಾಲ ಮತ್ತು ಮುಕ್ತ ದೃಷ್ಟಿಕೋನದ ಅಗತ್ಯ ಇಂದು ನಮ್ಮ ರಾಷ್ಟ್ರಕ್ಕೆ ಹೆಚ್ಚಾಗಿದೆ. ಧರ್ಮ ಮತ್ತು ಮತ ಪಂಥಗಳ ಬಗ್ಗೆ ಇರುವ ನಂಬಿಕೆಗಳು ಹಾಗೂ ದೃಷ್ಟಿಕೋನಗಳಿಂದ ದೇಶದಲ್ಲಿ ಇಂದು ಬಿರುಕು ಮೂಡಿದೆ. ಎಲ್ಲ ಧರ್ಮಗಳ ನಾಯಕರೂ ಸಮೂಹವನ್ನು ಒಗ್ಗೂಡಿಸುವುದರ ಬದಲು ವಿಭಜಿಸುವ ಕಾರ್ಯದಲ್ಲೇ ಹೆಚ್ಚು ನಿರತರಾಗಿದ್ದಾರೆ.

ಪ್ರತಿಯೊಬ್ಬರೂ ತಮ್ಮ ಧರ್ಮವೇ ನ್ಯಾಯಸಮ್ಮತ ಮತ್ತು ತಮ್ಮದೇ ನಿಜವಾದ ದೇವರು ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ನಮ್ಮ ದೇಶಕ್ಕೆ ಬೇಕಾಗಿರುವುದು ಪ್ರಾಯೋಗಿಕ ಮನಸ್ಸಿನ, ಸಮಗ್ರವಾದ, ದೇವರು ಮತ್ತು ಧರ್ಮದ ಬಗೆಗಿನ ವಿಭಿನ್ನ ದೃಷ್ಟಿಕೋನಗಳನ್ನು ಒಪ್ಪಿಕೊಳ್ಳುವ ಹಾಗೂ ಅಂಗೀಕರಿಸುವ ಸ್ವಾಮಿ ವಿವೇಕಾನಂದರಂತಹ ನಿಲುವು.

ಇಂತಹ ಏಕರೂಪದ ಚಿಂತನೆಗಳೇ ವೈವಿಧ್ಯವನ್ನು ಒಳಗೊಂಡಿರುವ ಭಾರತದಂತಹ ದೇಶವನ್ನು ಒಗ್ಗೂಡಿಸುವುದು. ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆಗೆ ದೇಶ ಸಿದ್ಧವಾಗಿರುವಂತೆಯೇ ಅವರ ಆದರ್ಶಗಳಿಗೆ ಅನುಗುಣವಾಗಿ ಬದುಕಲು ನಾವೆಲ್ಲರೂ ಪ್ರಯತ್ನಿಸಬೇಕು. ಅದು ನಿಶ್ಚಯವಾಗಿಯೂ ಅವರ ಜೀವನ ಮತ್ತು ಆದರ್ಶ ಪಾಲನೆಯನ್ನು ಸ್ಮರಿಸಲು, ಆಚರಿಸಲು ಇರುವ ಯೋಗ್ಯವಾದ ಮಾರ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.