ನವದೆಹಲಿ: ಮಹಾನಗರ ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಭೂಮಿ ಪಡೆದು ಕೊಂಡಿರುವ ಸಾರ್ವಜನಿಕರಿಗೆ ವಿವಿಧ ಸವಲತ್ತುಗಳನ್ನು ನೀಡುವ ಸಲುವಾಗಿ ವಿವಿಧ ರೀತಿಯ ತೆರಿಗೆ ವಿಧಿಸುವ ಹಕ್ಕು ಬಿಡಿಎಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಬಿಡಿಎ ಕಾಯಿದೆ 1976 ಅನ್ವಯ ತೆರಿಗೆ ವಿಧಿಸುವ ಬಿಡಿಎ ಅಧಿಕಾರ ಸಂವಿಧಾನದ ಸಮಾನತೆ ಹಕ್ಕಿಗೆ ವಿರುದ್ಧವಾಗಿದೆ ಎಂದು ಈ ಹಿಂದೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರನ್ನು ಒಳಗೊಂಡ ನ್ಯಾಯಪೀಠ ತಳ್ಳಿಹಾಕಿತು.

ಇದರಿಂದಾಗಿ ವಸತಿ ಬಡಾವಣೆಗಳ ಯೋಜನೆ ಮಂಜೂರು ಮಾಡುವುದಲ್ಲದೇ, ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ, ವಿವಿಧ ರೀತಿಯ ತೆರಿಗೆ ವಿಧಿಸಲು ಬಿಡಿಎಗೆ ಅವಕಾಶ ಕಲ್ಪಿಸಿದಂತೆ ಆಗಿದೆ.

ಬಿಡಿಎ ಕಾಯಿದೆ 1976ರ ಅನ್ವಯ ಬೆಂಗಳೂರು ಮಹಾ ನಗರ ವ್ಯಾಪ್ತಿಯಲ್ಲಿ ಗೃಹ ನಿರ್ಮಾಣ ಸೊಸೈಟಿಗಳು ಸಾರ್ವಜನಿಕರಿಗೆ ವಿತರಿಸುವ ನಿವೇಶನಗಳು, ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು.

ಬಿಡಿಎ ಕಲ್ಪಿಸುವ ಸವಲತ್ತುಗಳು ಕೆಲವು ನಾಗರಿಕರಿಗೆ ಉಪಯೋಗ ಆಗದಿದ್ದರೂ ಸಹ, ಹೊರ ವರ್ತುಲ ರಸ್ತೆ, ಬಡಾವಣೆ ಒಳಗಿನ ರಸ್ತೆ, ಸಾರಿಗೆ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯಿಂದ ಎಲ್ಲಾ ನಾಗರಿಕರಿಗೂ ಅನುಕೂಲವಾಗುತ್ತದೆ.

ಈ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ. ಹೀಗಾಗಿ ಬಿಡಿಎ ಕಾಯಿದೆ 32 (5ಎ) ಅನ್ವಯ ಮಹಾನಗರ ವ್ಯಾಪ್ತಿಯಲ್ಲಿ ಬಿಡಿಎ ನೀಡುವ ಸವಲತ್ತುಗಳಿಗೆ ವಿವಿಧ ರೀತಿಯ ತೆರಿಗೆ ವಿಧಿಸುವ ಹಕ್ಕು ಹೊಂದಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಹೈಕೋರ್ಟ್ ತೀರ್ಪಿನ ವಿರುದ್ಧ ಬಿಡಿಎ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.