ಬುಧವಾರ, ಮೇ 18, 2022
23 °C

ಸವಳು-ಜವಳು ನಿರ್ಮೂಲನೆಗೆ 1.79 ಕೋಟಿ ಮಂಜೂರು: ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಧೋಳ: ಸವಳು-ಜವಳು ಬಾಧಿತ ತಾಲ್ಲೂಕಿನ ಇಂಗಳಗಿ, ಯಡಹಳ್ಳಿ, ಬರಗಿ ಗ್ರಾಮಗಳ ಜಮೀನುಗಳ ಪುನರುತ್ಥಾನಕ್ಕಾಗಿ ರೂ 1.79 ಕೋಟಿ ಹಣ ಮಂಜೂರು ಮಾಡಲಾಗಿದೆ ಎಂದು ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜವಳಿ ಖಾತೆ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.‘ಪ್ರಜಾವಾಣಿ’ಯೊಂದಿಗೆ ಮಾತನಾ ಡಿದ ಅವರು, ತಾಲ್ಲೂಕಿನ ಕೆಲ ಜಮೀನುಗಳು ಸವಳು-ಜವಳು ಸಮಸ್ಯೆಗೀಡಾಗಿದ್ದು, ಈಗಾಗಲೇ ಕೆಲವು ಪ್ರದೇಶಗಳ ಸವಳು-ಜವಳು ಕಡಿಮೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇದೀಗ 2 ಹಂತದಲ್ಲಿ ಕೆಲಸಗಳನ್ನು ಮಾಡಲಾಗುತ್ತಿದ್ದು, ಪ್ರಥಮ ಹಂತದಲ್ಲಿ ಇಂಗಳಗಿಯ ಪ್ರದೇಶವನ್ನು ನಂತರ ಇಂಗಳಗಿ, ಯಡಹಳ್ಳಿ ಹಾಗೂ ಬರಗಿ ಪ್ರದೆಶದ ಜಮೀನುಗಳ ಸವಳು-ಜವಳು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.ಬಾಧಿತ ಪ್ರದೇಶದಲ್ಲಿ ಯಾವ ಬೆಳೆಯೂ ಬೆಳೆಯದಿರುವದರಿಂದ, ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಗೊಳ್ಳಲಿದ್ದು, ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವಿವರವಾದ ಮಾಹಿತಿಯನ್ನು ನೀಡಲು ಮತ್ತು ಇದೇ ರೀತಿ ಬಾಧಿತ ಪ್ರದೇಶಗಳಿಗೆ ಈ ಪೈಲೆಟ್ ಯೋಜನೆಯ ರೀತಿಯಲ್ಲೇ ವಿಸ್ತರಿಸ ಲಾಗುವುದು ಮತ್ತು ಯೋಜನೆ ಸಂಪೂರ್ಣ ಪಾರದರ್ಶಕದಿಂದ ಕೂಡಿರಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಾರಜೋಳ ತಿಳಿಸಿದರು. ಎಡದಂಡೆ ಕಾಲುವೆಗೆ 25ರವರೆಗೆ ನೀರು

ಮುಧೋಳ: ರೈತರ ಆಗ್ರಹದ ಮೇರೆಗೆ ಘಟಪ್ರಭಾ ಎಡದಂಡೆ ಕಾಲುವೆಗೆ ಹೆಚ್ಚುವರಿಯಾಗಿ ಮಾ. 25ರವರೆಗೆ ನೀರು ಬಿಡಲು ಸೂಚಿಸಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.ಬುಧವಾರ ದೂರವಾಣಿ ಮೂಲಕ ಈ ವಿಷಯ ತಿಳಿಸಿದ ಅವರು ಮಂಟೂರ, ಬುದ್ನಿ, ಕಿಶೋರಿ, ಮುಧೋಳ ಸೇರಿದಂತೆ ಕೆಲ ರೈತರ ಆಗ್ರಹದ ಮೇರೆಗೆ ಮಾ. 25ರವರೆಗೆ ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಸೂಚಿಸಲಾಗಿದೆ. ರೈತರು ನೀರನ್ನು ಮಿತವಾಗಿ ಬಳಸಬೇಕು. ಮತ್ತು ಭೂಮಿ ಜವಳಾಗದಂತೆ, ಮುಂದಿನ ಬೆಳೆಗಳಿಗೆ ಹಾನಿಯಾಗದಂತೆ ಕಾಳಜಿ ವಹಿಸಬೇಕು ಎಂದು ತಿಳಿಸಿದ್ದಾರೆ.ಅಭಿನಂದನೆ: ರೈತರ ಮನವಿಗೆ ಸ್ಪಂದಿಸಿದ ಸಚಿವ ಕಾರಜೋಳರಿಗೆ ರೈತ ಮುಖಂಡರಾದ ಮಲ್ಲನಗೌಡ ದೊಡಮನಿ, ರಾಜೇಂದ್ರ ದೊಡಮನಿ, ಲಕ್ಕಪ್ಪಗೌಡ ಪಾಟೀಲ, ಬಸಯ್ಯ ಮಠಪತಿ, ಗಂಗಯ್ಯ ಮರೇಗುದ್ದಿ, ಶ್ರಿಕಾಂತ ಬಟಕುರ್ಕಿ, ರೇವಣಸಿದ್ದಯ್ಯ ಮರೇಗುದ್ದಿ ಹಾಗೂ ಮಂಟೂರ, ಬುದ್ನಿ. ಪಿ.ಎಂ, ಕಿಶೋರಿ, ಮುಧೋಳದ ರೈತರು ಅಭಿನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.