ಶುಕ್ರವಾರ, ಮೇ 14, 2021
31 °C

ಸವಿತಾ ಸಾವು: ವರದಿ ಶೀಘ್ರ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಕರ್ನಾಟಕ ಮೂಲದ ದಂತ ವೈದ್ಯೆ ಸವಿತಾ  ಹಾಲಪ್ಪನವರ ಸಾವಿನ ಕುರಿತ ಪ್ರಮುಖ ವರದಿಯು ಐರ್ಲೆಂಡ್‌ನಲ್ಲಿ ಶೀಘ್ರವಾಗಿ ಪ್ರಕಟವಾಗಲಿದೆ.ಈ ವರದಿಯು ಸಾಂಪ್ರದಾಯಿಕ ಕ್ಯಾಥೋಲಿಕ್ ರಾಷ್ಟ್ರವಾದ ಐರ‌್ಲೆಂಡ್‌ನಲ್ಲಿ ಗರ್ಭಪಾತದ ಬಗೆಗಿನ ಹೊಸ ಕಾನೂನುಗಳ ಕುರಿತಾಗಿ ಹಲವು ಶಿಫಾರಸುಗಳನ್ನು ಮಾಡುವ ನಿರೀಕ್ಷೆ ಇದೆ.ಐರ‌್ಲೆಂಡ್‌ನ ಆರೋಗ್ಯ ಸೇವೆಗಳ ಕಾರ್ಯನಿರ್ವಾಹಕ ಇಲಾಖೆ (ಎಚ್‌ಎಸ್‌ಇ) ನೇಮಕ ಮಾಡಿರುವ ತಂಡ ನೀಡಲಿರುವ ವರದಿಯು, ಅತಿ ಸೂಕ್ಷ್ಮ ಹಾಗೂ ತುರ್ತು ಪ್ರಸೂತಿ ಪ್ರಕರಣಗಳ ನಿರ್ವಹಣೆಯ ಕುರಿತಾಗಿ ಹಲವು ಶಿಫಾರಸುಗಳನ್ನು ಮಾಡಲಿದೆ ಎಂದೂ ಹೇಳಲಾಗಿದೆ.`ಸವಿತಾ ಸಾವಿನ ಬಗ್ಗೆ ಸಿದ್ಧಪಡಿಸಲಾಗಿರುವ ವರದಿಯ ಬಗ್ಗೆ ಚರ್ಚೆ ನಡೆಸಲಾಗಿದೆ.  ಈ ವಾರಾಂತ್ಯದೊಳಗೆ ಅದನ್ನು ಪ್ರಕಟಿಸಲಾಗುವುದು' ಎಂದು  ಸರ್ಕಾರದ ವಕ್ತಾರರೊಬ್ಬರು ಕ್ಯಾಬಿನೆಟ್ ಸಭೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.