ಗೋಕಾಕ: ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಗೋಕಾಕ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕ್ ಇನ್ನೂ ಎತ್ತರಕ್ಕೆ ಬೆಳೆದು, ಸಹಕಾರಿ ರಂಗದ ಶ್ರೇಯಸ್ಸಿಗೆ ಕಾರಣಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಗೋಕಾಕ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕ್ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ರಿಸರ್ವ್ ಬ್ಯಾಂಕ್ ಸಂಸ್ಥೆಗೆ ಸತತವಾಗಿ ನೀಡುತ್ತ ಬಂದಿರುವ 1ನೇ ಗ್ರೇಡ್ ಪ್ರಮಾಣಪತ್ರವು ಬ್ಯಾಂಕಿನ ಪ್ರಗತಿಯ ಸಂಕೇತ ಎಂದು ಬಣ್ಣಿಸಿದರು.

ಸಮಾರಂಭವನ್ನು ಸಹಕಾರ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಿದರು. ಸಂಸದ ಸುರೇಶ ಅಂಗಡಿ ಶತಮಾನೋತ್ಸವ ನಿಮಿತ್ತ ಬ್ಯಾಂಕ್ ಹೊರತಂದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಸಚಿವರಾದ ವಿ.ಎಸ್. ಆಚಾರ್ಯ ಮತ್ತು ರೇಣುಕಾಚಾರ್ಯ, ಶಾಸಕರಾದ ಜಗದೀಶ ಮೆಟಗುಡ್ಡ ಮತ್ತು ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಮತ್ತು ಮಹಾಂತೇಶ ಕೌಜಲಗಿ, ಜಿ.ಪಂ. ಅಧ್ಯಕ್ಷ ಈರಣ್ಣಾ ಕಡಾಡಿ, ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಎಂ.ಡಿ.ಮಠಪತಿ, ಬ್ಯಾಂಕ್ನ ಉಪಾಧ್ಯಕ್ಷ ಡಿ.ಸಿ. ಬಿದರಿ, ಆಡಳಿತ ಮಂಡಳಿ ನಿರ್ದೇಶಕರಾದ ಸಿ.ಸಿ. ಆಲತಗಿ, ಸಿ.ಬಿ. ತಾರಳಿ, ಸುರೇಶ ಸೊಲ್ಲಾಪೂರಮಠ ಮತ್ತಿತರರು ಉಪಸ್ಥಿತರಿದ್ದರು.

ಬ್ಯಾಂಕ್ ಚೇರಮನ್ ಎಂ.ಡಿ. ಚುನಮರಿ ಅವರು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಚಂದ್ರಶೇಖರ ಅಕ್ಕಿ ಮತ್ತು ಗಂಗಾಧರ ಮಳಗಿ ಜಂಟಿಯಾಗಿ ಕಾರ್ಯಕ್ರಮ ನಿರೂಪಿಸಿದರು. ಸೋಮಶೇಖರ ಮಗದುಮ್ ವಂದಿಸಿದರು.

ಕೃಷಿಕರ ಪ್ರತಿಭಟನೆ
ಘಟಪ್ರಭಾ ಬಲದಂಡೆ ಕಾಲುವೆಗೆ ಮಾರ್ಚ್ 15ರ ತನಕ ನೀರು ಹರಿಸುವ ಆಶ್ವಾಸನೆ ನೀಡಿ, ಇದೀಗ ದಿಢೀರನೆ ಸ್ಥಗಿತಗೊಳಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ ಕೃಷಿಕರು ಶನಿವಾರ ನಗರದ ಕೆ.ಎಲ್.ಇ. ಆವರಣದಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು. ಗೋಕಾಕ ಅರ್ಬನ್ ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೃಷಿ ಸಚಿವ ಉಮೇಶ ಕತ್ತಿ ಅವರ ಗಮನ ಸೆಳೆದ ಪ್ರತಿಭಟನಾಕಾರರು, ಯಾವುದೇ ಮುನ್ಸೂಚನೆ ಇಲ್ಲದೇ ಹಠಾತ್ತಾಗಿ ನೀರು ನಿಲ್ಲಿಸಿದ್ದರ ಪರಿಣಾಮವಾಗಿ ಜೋಳ, ಗೋವಿನಜೋಳ ಇತ್ಯಾದಿ ಬೆಳೆಗಳು ಒಣಗಿ ಹಾನಿಯುಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.