ಮಂಗಳವಾರ, ಜೂನ್ 15, 2021
21 °C

ಸಾಕುನಾಯಿ ಜತೆ ಮಹಿಳೆ ಮದುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಪಿಟಿಐ): ಬ್ರಿಟನ್ನಿನ 47ವರ್ಷದ ವಿಚ್ಛೇದಿತ ಮಹಿಳೆಯೊಬ್ಬರು, ತನ್ನ ಜೀವನ ಸಂಗಾತಿಗೆ ಇರಬೇಕಾದ ಎಲ್ಲಾ ಗುಣ ಲಕ್ಷಣಗಳು ತನ್ನ ಪ್ರೀತಿಯ ಸಾಕುನಾಯಿಯಲ್ಲಿ ಇವೆ ಎಂಬ ಕಾರಣಕ್ಕೆ ನಾಯಿ­ಯೊಂದಿಗೆ ವಿವಾಹವಾಗಿ ಅಚ್ಚರಿ ಮೂಡಿಸಿದ್ದಾರೆ.ಪುರುಷರಿಂದ ನಿರಾಸೆಗೊಂಡಿರುವ ದಕ್ಷಿಣ ಲಂಡನ್‌ನ ಅಮಂಡ ರಾಡ್ಗರ್ಸ್‌ ಎಂಬುವವರು ತಮ್ಮ ನಿಷ್ಠಾವಂತ ಸಾಕುನಾಯಿಯಾದ ಶೆಬಾಳನ್ನು ವಿವಾಹವಾಗಿದ್ದಾರೆ. ಇವರ ವಿವಾಹಕ್ಕೆ 200 ಜನರು ಸಾಕ್ಷಿಯಾಗಿದ್ದರು.‘ನಾನು ವಿಶೇಷ ಉಡುಪು ಧರಿಸಿದ್ದು ಆ ದಿನ ಅದ್ಭುತವಾಗಿತ್ತು. ನಾನು ಶೆಬಾಳಿಗೆ ಮುತ್ತಿಟ್ಟೆ. ಎಲ್ಲರೂ ನಮ್ಮತ್ತ ಬಣ್ಣ ಬಣ್ಣದ ಕಾಗದದ ತುಂಡುಗಳನ್ನು ಎರಚಿದರು. ಅದು ಮರೆಯಲಾಗದ ಗಳಿಗೆಯಾಗಿತ್ತು’ ಎಂದು ರಾಡ್ಗರ್ಸ್ ವಿವರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.