ಸೋಮವಾರ, ಏಪ್ರಿಲ್ 19, 2021
25 °C

ಸಾಕ್ಷರತಾ ಭಾರತ ಕಾರ್ಯಕ್ರಮದಲ್ಲಿ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು; ಸಾಕ್ಷರತಾ ಭಾರತ 2012ರ ಕಾರ್ಯಕ್ರಮದ ಉದ್ಘಾ ಟನೆ ಸಮಾರಂಭದಲ್ಲಿ ಜಿಲ್ಲಾ ವಯ ಸ್ಕರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕ ರ ನಡುವೆ ವಾದ ವಿವಾದ ಉಂಟಾದ ಘಟನೆ ಸೋಮವಾರ ನಡೆಯಿತು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಐ.ಎ.ಲೋಕಾಪುರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿ, ತಾಲ್ಲೂಕಿನಲ್ಲಿ ಕೆಲ ಶಿಕ್ಷಕರ ಹೆಸರನ್ನು ಭ್ರಷ್ಟಾಚಾರ, ಅವ್ಯವ ಹಾರದ ಕುರಿತು ಪ್ರಸ್ತಾಪಿಸುತ್ತಲೇ ತರಬೇತಿಯಲ್ಲಿ ಪಾಲ್ಗೊಂಡ ಶಿಕ್ಷಕರು ಲೋಕಾಪುರ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದು ಕೊಂಡರು.ಕೆಲಕಾಲ ಶಿಕ್ಷಕರು ಜೋರಾಗಿ ಕೂಗಾಡಿದರು, ಲೋಕಾಪುರ ಅವರು ಶಿಕ್ಷಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ವಾಪಸ್ಸು ಪಡೆದು ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದರು. ನಂತರ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಐ.ಎ.ಲೋಕಾಪುರ ಅವರು ನಾನು ಮಾತನಾಡಿದ್ದು ಶಿಕ್ಷಕರಿಗೆ ನೋವಾಗಿದ್ದರೆ ಕ್ಷಮೆ ಯಾಚಿ ಸುವುದಾಗಿ ತಿಳಿಸಿದರು.ತಾಪಂ ಅಧ್ಯಕ್ಷ ಗುಡ್ಡಪ್ಪ ಓಲೇ ಕಾರ ಅವರು ಮಾತನಾಡಿ,  ಆರೋ ಪದಲ್ಲಿ ಹುರುಳಿಲ್ಲ, ಹಿರಿಯರಾದ ತಾವು ಜವಾಬ್ದಾರಿಯಿಂದ ಮಾತ ನಾಡಬೇಕು ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿ ವಿ.ವಿ, ಮಣ್ಣಬಸಣ್ಣನವರ, ಮಾರುತಿ ಪಾಟೀಲ, ಸುರೇಶ ಕರೂರು, ಜೆ.ಎಸ್. ಮಠದ, ಹನುಮಂತಪ್ಪ ಸಾರಥಿ ಮತ್ತಿತರರು ಉಪಸ್ಥಿತರಿದ್ದರು.ಶಿವರಾತ್ರಿ ಉತ್ಸವ

ಅಕ್ಕಿಆಲೂರ: ಇಲ್ಲಿಗೆ ಸಮೀಪವಿರುವ ಹೋತನಹಳ್ಳಿಯ ಸಿದ್ಧಾರೂಢ ಮಠ ದಲ್ಲಿ ಮಹಾಶಿವರಾತ್ರಿಯ ಅಂಗವಾಗಿ 9 ನೇ ಭಾವೈಕ್ಯತಾ ವಾರ್ಷಿಕೋತ್ಸವ ಹಾಗೂ ಸಿದ್ಧಾರೂಢ ಮಹಾ ರಥೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭ ಗೊಂಡಿದ್ದು, ಮಾ.3 ರ ವರೆಗೆ ಜರುಗಲಿವೆ. ಬುಧವಾರ ಮುಂಜಾನೆ ಭಗವದ್ಗೀತಾ ಪಾರಾಯಣ ಬಳಿಕ ಅಖಂಡ ಶಿವಭಜನೆ ನಡೆಯಲಿದೆ. ಸಂಜೆ 4.30ಕ್ಕೆ ಪುಷ್ಪ ರಥೋತ್ಸವ ಹಾಗೂ ರಾತ್ರಿ ಮಹಾ ಶಿವರಾತ್ರಿ ಜಾಗರಣೆ ನಡೆಯಲಿದೆ.ಮಾ. 3 ರಂದು ಮುಂಜಾನೆ ಜಪಯಜ್ಞ, ಸಿದ್ಧಾರೂಢ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಅಖಂಡ ಶಿವಭಜನೆ ನೆರ ವೇರಲಿವೆ. ನಂತರ ಪುಷ್ಪಗಿರಿ ಮಹಾ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಶ್ರೀಗಳು, ಯಲವಟ್ಟಿ ಯ ಸಿದ್ಧಾಶ್ರಮದ ಸದ್ಗುರು ಯೋಗಾನಂದ ಶ್ರೀಗಳು, ಹಾವೇರಿ ಹೊಸಮಠದ ಬಸವಶಾಂತಲಿಂಗ ಶ್ರೀಗಳು, ಬೆಳಿಕಟ್ಟಿಯ ಸದ್ಗುರು ಕೃಷ್ಣಾ ನಂದ ಭಾರತಿ ಶ್ರೀಗಳ ಸಾನ್ನಿಧ್ಯದಲ್ಲಿ ಚಿಂತನಗೋಷ್ಠಿ ನಡೆಯುವದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.