ಶುಕ್ರವಾರ, ಜೂನ್ 25, 2021
22 °C

ಸಾಕ್ಷರತೆಯಿಂದ ಜನರಲ್ಲಿ ನೈರ್ಮಲ್ಯಅರಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಬುರ್ಗಾ: ನೈರ್ಮಲ್ಯ, ಪರಿಸರ ಸಂರಕ್ಷಣೆ, ಸಾಕ್ಷರತೆ ಹಾಗೂ ನೀರಿನ ಸದ್ಬಳಕೆ ಬಗ್ಗೆ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿ ಆ ನಿಟ್ಟಿನಲ್ಲಿ ತಕ್ಕಮಟ್ಟಿಗಾದರೂ ಕಾರ್ಯಪ್ರವೃತ್ತರಾದರೆ ರಾಷ್ಟ್ರೀಯ ಸೇವಾ ಶಿಬಿರವನ್ನು ಆಯೋಜನೆ ಮಾಡಿದ್ದಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಕೆ.ಎಚ್. ಛತ್ರದ್ ಹೇಳಿದರು.ತಾಲ್ಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಸರ್ಕಾರಿ ಪದವಿ ಕಾಲೇಜು ಆಯೋಜಿಸಿದ್ದ ಎನ್ನೆಸ್ಸೆಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವ ವಿದ್ಯಾಲಯ ನೀಡಿರುವ ಮಾನದಂಡಗಳ ಪ್ರಕಾರ ಶ್ರಮದಾನಗಳ ಚಟುವಟಿಕೆಗಳಿಗಿಂತಲೂ ವಿವಿಧ ವಿಷಯಗಳ ಉಪನ್ಯಾಸಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿದೆ. ಗ್ರಾಮಸ್ಥರ ಮನ ಪರಿವರ್ತನೆಗೆ ಉಪನ್ಯಾಸಗಳು ಸಹಕಾರಿಯಾಗಿದ್ದರಿಂದ ಹೆಚ್ಚಿನ ಮಹತ್ವ ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿ ಮಾಹಿತಿ ಪಡೆಯುವುದನ್ನು ಅಪೇಕ್ಷಿಸಲಾಗುತ್ತಿದೆ ಎಂದರು.ಮಾಜಿ ಗ್ರಾಪಂ ಸದಸ್ಯ ಕಳಕನಗೌಡ ಪಾಟೀಲ ಮಾತನಾಡಿ, ಸತತ ಎರಡು ವರ್ಷ ತುಮ್ಮರಗುದ್ದಿ ಗ್ರಾಮವನ್ನೆ ದತ್ತುಪಡೆದು ಶ್ರಮದಾನ ಹಾಗೂ ಉಪನ್ಯಾಸದ ಮೂಲಕ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಗ್ರಾಮಕ್ಕೆ ಬಯಸದೇ ಬಂದ ಭಾಗ್ಯವಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಈ ಮೂಲಕ ಗ್ರಾಮ ಹಾಗೂ ಅಲ್ಲಿಯ ಜನರಲ್ಲಿ ಬದಲಾವಣೆ ಕಾಣಬಹುದಾಗಿದೆ. ಮುಂದಿನ ದಿನಗಳಲ್ಲಿಯೂ ಇಂತಹ ಶಿಬಿರಕ್ಕೆ ಗ್ರಾಮದಿಂದ ಪ್ರೋತ್ಸಾಹಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಪ್ರಾಧ್ಯಾಪಕ ಟಿ.ವಸಂತಕುಮಾರ, ಸ್ಥಳೀಯ ಸುರೇಶ ಹಳ್ಳದ್ ಹಾಗೂ ಇತರರು ಮಾತನಾಡಿ, ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಿದ ಶಿಬಿರಾಧಿಕಾರಿ ಶಿವರಾಜ ಗುರಿಕಾರ ಹಾಗೂ ಸಹಾಯಕ ಶಿಬಿರಾಧಿಕಾರಿ ಯು.ಬಿ. ಹಿರೇಮಠ, ರಮೇಶ ಪೂಜಾರರ ಕಾರ್ಯವನ್ನು ಶ್ಲಾಘಿ ಸಿ, ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ನುಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯಲ್ಲಪ್ಪ ಹಿರೇಕೊಪ್ಪ, ಪ್ರಾಧ್ಯಾಪಕ ಎ.ಬಿ. ಕೆಂಚರೆಡ್ಡಿ, ಎ.ಬಿ. ಮುಜಾವರ, ಮುಖೇಶ ಹರಿಜನ, ನಿಂಗಪ್ಪ ಈಳಿಗೇರ, ಮಳಿಯಪ್ಪ ಬಡಿಗೇರ, ಮಲ್ಲಪ್ಪ ಪೂಜಾರ ಮತ್ತಿತರರು ಹಾಜರಿದ್ದರು. ಶಿಬಿರಾರ್ಥಿಗಳಾದ ಶಾಂತಾ ಹಾಗೂ ಶೋಭಾ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ನಿರೂಪಿಸಿದರು. ಶಿಲ್ಪಾ ಎಸ್. ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.